Cricket
ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ, ಜೂನ್ 30, 2023ರಂದು ತಮ್ಮ 54ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
90ರ ದಶಕದಲ್ಲಿ ಓಪನ್ನರ್ ಹೇಗೆ ಸ್ಪೋಟಕ ಆಟ ಆಡಬೇಕು ಎನ್ನುವುದನ್ನು ತೋರಿಸಿಕೊಟ್ಟ ಖ್ಯಾತಿ ಸನತ್ ಜಯಸೂರ್ಯಗೆ ಸಲ್ಲುತ್ತದೆ
ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಸ್ಪೋಟಕ ಆರಂಭಿಕ ಬ್ಯಾಟರ್‌ಗಳ ಸಾಲಿನಲ್ಲಿ ಜಯಸೂರ್ಯ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ
ಲಂಕಾ ಪರ ಏಕದಿನ ಕ್ರಿಕೆಟ್‌ನಲ್ಲಿ ಜಯಸೂರ್ಯ 13,430 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 323 ಬಲಿ ಪಡೆದಿದ್ದಾರೆ.
ಕೇವಲ ಏಕದಿನ ಕ್ರಿಕೆಟ್ ಮಾತ್ರವಲ್ಲ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲೂ ಜಯಸೂರ್ಯ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಆರಂಭಿಕ ಬ್ಯಾಟರ್ ಆಗಿ ಹಾಗೂ ಆರಂಭಿಕ ಬೌಲರ್ ಆಗಿ ಕಾಣಿಸಿಕೊಂಡ ಕೆಲವೇ ಕೆಲವು ಆಲ್ರೌಂಡರ್‌ಗಳಲ್ಲಿ ಜಯಸೂರ್ಯ ಕೂಡಾ ಒಬ್ಬರು.
ಜಯಸೂರ್ಯ ಭಾರತ ಎದುರು ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ್ದರು. ಇನ್ನು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಕೂಡಾ ಹೌದು.
1996ರಲ್ಲಿ ಶ್ರೀಲಂಕಾ ತಂಡವು ಏಕದಿನ ವಿಶ್ವಕಪ್ ಚಾಂಪಿಯನ್ ಆಗಿತ್ತು. ಟೂರ್ನಿಯುದ್ದಕ್ಕೂ ಮಿಂಚಿದ್ದ ಜಯಸೂರ್ಯ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು.