ಸಂಜುರಿಂದ ಅಕ್ಷರ್ ಪಟೇಲ್ ವರೆಗೆ, ಈ 5 ಸ್ಟಾರ್‌ಗಳ ಕಡೆಗಣನೆ
cricket-sports Nov 25 2025
Author: Naveen Kodase Image Credits:Gemini AI
Kannada
ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿ
ಭಾರತ - ದಕ್ಷಿಣ ಆಫ್ರಿಕಾ ನಡುವಿನ ಮೊದಲ ಪಂದ್ಯ ನವೆಂಬರ್ 30, ಎರಡನೇ ಪಂದ್ಯ ಡಿಸೆಂಬರ್ 3 ಮತ್ತು ಮೂರನೇ ಪಂದ್ಯ ಡಿಸೆಂಬರ್ 6 ರಂದು ನಡೆಯಲಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿವೆ.
ಭಾರತ ತಂಡದ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಸೇರಿಸಲಾಗಿಲ್ಲ. ಅವರು 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಬಾರಿಸಿದ್ದರು. ಇದುವರೆಗೆ 16 ಏಕದಿನ ಪಂದ್ಯಗಳಲ್ಲಿ 510 ರನ್ ಗಳಿಸಿದ್ದಾರೆ.
Image credits: Getty
Kannada
ಸಾಯಿ ಸುದರ್ಶನ್
ಸಾಯಿ ಸುದರ್ಶನ್‌ಗೂ ಏಕದಿನ ಸರಣಿಯಲ್ಲಿ ಸ್ಥಾನ ಸಿಕ್ಕಿಲ್ಲ. ಭಾರತ ಪರ ಇದುವರೆಗೆ 3 ಏಕದಿನ ಪಂದ್ಯಗಳನ್ನಾಡಿದ್ದು, 127 ರನ್ ಗಳಿಸಿದ್ದಾರೆ. ಅವರು 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ ಪಾದಾರ್ಪಣೆ ಮಾಡಿದ್ದರು.
Image credits: Getty
Kannada
ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್‌ಗೂ ಅವಕಾಶ ಸಿಕ್ಕಿಲ್ಲ. ಕರ್ನಾಟಕ ಮೂಲದ ಪಡಿಕ್ಕಲ್ ಭಾರತ ಪರ ಇದುವರೆಗೆ 2 ಟೆಸ್ಟ್ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ, ಆದರೆ ಏಕದಿನಕ್ಕೆ ಇನ್ನೂ ಪಾದಾರ್ಪಣೆ ಮಾಡಿಲ್ಲ.
Image credits: Getty
Kannada
ಅಕ್ಷರ್ ಪಟೇಲ್
ಅಕ್ಷರ್ ಪಟೇಲ್ ಭಾರತ ತಂಡದ ಪ್ರಮುಖ ಭಾಗವಾಗಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲೂ 3 ವಿಕೆಟ್ ಪಡೆದು 75 ರನ್ ಗಳಿಸಿದ್ದರು. ಆದರೂ ಅವರನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ.
Image credits: Getty
Kannada
ವರುಣ್ ಚಕ್ರವರ್ತಿ
ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಕೂಡ ಏಕದಿನ ತಂಡದ ಭಾಗವಾಗಿಲ್ಲ. ಆದರೆ, ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತ ಪರ 3 ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದರು.
Image credits: Getty
Kannada
ಮೂವರು ಆಟಗಾರರಿಗೆ ವಿಶ್ರಾಂತಿ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.