ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿದೇಶಗಳಿಂದ ಅನೇಕ ದೊಡ್ಡ ಆಟಗಾರರು ಬಂದು ಆಡಿದ್ದಾರೆ, ಆದರೆ ಎಲ್ಲರೂ ಸಕ್ಸಸ್ ಆಗಿಲ್ಲ. ಕೆಲವು ಭಾರತೀಯರೂ ಈ ಲೀಗ್‌ನಲ್ಲಿ ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದಾರೆ.
ಇಂದು ನಾವು ಐಪಿಎಲ್‌ನಲ್ಲಿ ಒಂದೇ ಒಂದು ಶತಕ ಬಾರಿಸದ 5 ಅಂತರರಾಷ್ಟ್ರೀಯ ಮಟ್ಟದ ಆಟಗಾರರನ್ನು ಪರಿಚಯಿಸುತ್ತೇವೆ. ಈ ಪಟ್ಟಿಯಲ್ಲಿ ಹಲವು ದೊಡ್ಡ ಹೆಸರುಗಳಿವೆ.
ಟೀಂ ಇಂಡಿಯಾ ಪರ 48 ಶತಕ ಬಾರಿಸಿರುವ ರಾಹುಲ್ ದ್ರಾವಿಡ್, 2008-2013ರವರೆಗೆ ಐಪಿಎಲ್‌ನಲ್ಲಿ 89 ಪಂದ್ಯಗಳಲ್ಲಿ 2174 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಒಂದೂ ಶತಕ ಬಂದಿಲ್ಲ.
ಆಸ್ಟ್ರೇಲಿಯಾದ ಬ್ಯಾಟರ್ ಮ್ಯಾಥ್ಯೂ ಹೇಡನ್ 2008 ರಿಂದ 2010 ರವರೆಗೆ ಐಪಿಎಲ್‌ನಲ್ಲಿ ಒಂದೂ ಶತಕ ಬಾರಿಸಿಲ್ಲ. 32 ಪಂದ್ಯಗಳಲ್ಲಿ 1107 ರನ್ ಗಳಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ 40 ಶತಕಗಳನ್ನು ಬಾರಿಸಿದ್ದಾರೆ,
ಮತ್ತೊಬ್ಬ ಆಸ್ಟ್ರೇಲಿಯಾದ ದಿಗ್ಗಜ ರಿಕಿ ಪಾಂಟಿಂಗ್ 2008 ರಿಂದ 13 ರವರೆಗೆ 10 ಪಂದ್ಯಗಳಲ್ಲಿ 91 ರನ್ ಗಳಿಸಿದ್ದಾರೆ, ಆದರೆ ಒಂದೂ ಶತಕ ಬಾರಿಸಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ 71 ಶತಕಗಳನ್ನು ಬಾರಿಸಿದ್ದಾರೆ.
ಕಿವೀಸ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ 79 ಐಪಿಎಲ್ ಪಂದ್ಯಗಳಲ್ಲಿ 2128 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಒಂದೂ ಶತಕ ಬಂದಿಲ್ಲ, ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 48 ಶತಕಗಳನ್ನು ಬಾರಿಸಿದ್ದಾರೆ.
ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಜಾಕ್ ಕಾಲಿಸ್ 2008 ರಿಂದ 2014 ರವರೆಗೆ 98 ಪಂದ್ಯಗಳಲ್ಲಿ 2427 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ 62 ಶತಕಗಳಿವೆ.