Cricket
ಆಗಸ್ಟ್ 04ರಂದು ದೇಶದ ದಿಗ್ಗಜ ಹಾಡುಗಾರ ಹಾಗೂ ನಟ ಕಿಶೋರ್ ಕುಮಾರ್ ಅವರ ಹುಟ್ಟುಹಬ್ಬ ಆಚರಿಸಲಾಗುತ್ತದೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್, ಕಿಶೋರ್ ಕುಮಾರ್ ಹುಟ್ಟುಹಬ್ಬವನ್ನು ವಿನೂತನವಾಗಿ ಸ್ಮರಿಸಿಕೊಂಡಿದ್ದಾರೆ.
ವಿಡಿಯೋದಲ್ಲಿ ತೆಂಡುಲ್ಕರ್, "ಕಿಶೋರ್ ದಾ ಅವರ ಧ್ವನಿಯು ನೇರವಾಗಿ ಹೃದಯಕ್ಕೆ ತಲುಪುತ್ತಿತ್ತು. ಜನ್ಮದಿನದ ಶುಭಾಶಯಗಳು ಜನ್ಮದಿನದ ಮಾಂತ್ರಿಕ..! ಎಂದು ಶುಭಕೋರಿದ್ದಾರೆ.
ಕಿಶೋರ್ ಕುಮಾರ್, ಹಲವಾರು ಎವರ್‌ಗ್ರೀನ್ ಹಾಡುಗಳನ್ನು ಹಾಡಿದ್ದಾರೆ ಹಾಗೂ ಮನೋಜ್ಞವಾಗಿ ನಟಿಸಿದ್ದಾರೆ.
ಕಿಶೋರ್ ಕುಮಾರ್ ಅಕ್ಟೋಬರ್ 13, 1987ರಲ್ಲಿ ಇಹಲೋಕ ತ್ಯಜಿಸಿದ್ದರು.
ಸಚಿನ್‌ಗೆ ಮ್ಯೂಸಿಕ್ ಎಂದರೆ ಅಚ್ಚುಮೆಚ್ಚು ಎನ್ನುವುದು ಗುಟ್ಟಾಗಿ ಏನೂ ಉಳಿದಿಲ್ಲ. ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಜತೆ ತೆಂಡುಲ್ಕರ್ ಉತ್ತಮ ಒಡನಾಟ ಹೊಂದಿದ್ದರು.
ಸಚಿನ್ ತೆಂಡುಲ್ಕರ್, ಡಗೌಟ್‌ನಲ್ಲಿದ್ದಾಗ ಕಿಶೋರ್ ಕುಮಾರ್ ಹಾಡು ಗುನುಗುತ್ತಿದ್ದರು ಎನ್ನುವ ಗುಟ್ಟನ್ನು ಇತ್ತೀಚೆಗೆ ಸುರೇಶ್ ರೈನಾ ಸಂದರ್ಶನವೊಂದರಲ್ಲಿ ಮೆಲುಕು ಹಾಕಿದ್ದರು.
ಹಲವು ದಾಖಲೆಗಳ ಒಡೆಯ ಸಚಿನ್ ತೆಂಡುಲ್ಕರ್, 2013ರ ನವೆಂಬರ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.
ಚತುರ ಸ್ಪಿನ್ನರ್ ಚಹಲ್‌ಗಿಂದು ಹುಟ್ಟುಹಬ್ಬದ ಸಂಭ್ರಮ..!
Ind vs WI: ಸೆಹ್ವಾಗ್, ವೀವ್ ರಿಚರ್ಡ್ಸ್ ದಾಖಲೆ ಸರಿಗಟ್ಟಲು ಸಜ್ಜಾದ ಕೊಹ್ಲಿ
ICC World Cup 2023: ಇಲ್ಲಿದೆ ಟೀಂ ಇಂಡಿಯಾ ಸಂಪೂರ್ಣ ವೇಳಾಪಟ್ಟಿ..!
700+ ಅಂತಾರಾಷ್ಟ್ರೀಯ ವಿಕೆಟ್‌ನೊಂದಿಗೆ ಎಲೈಟ್ ಕ್ಲಬ್ ಸೇರಿದ ಅಶ್ವಿನ್..!