Cine World
ಸೈಫ್ ಎರಡು ಮದುವೆಯಾಗಿದ್ದಾರೆ.. ಮೊದಲ ಮದುವೆ ಅಮೃತಾ ಸಿಂಗ್ ಅವರೊಂದಿಗೆ, ಅವರು ಮದುವೆಗೆ ಮೊದಲು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಆದರೆ ಅವರ ಎರಡನೇ ಪತ್ನಿ ಕರೀನಾ ಕಪೂರ್ ಎಂದಿಗೂ ಇಸ್ಲಾಂ ಧರ್ಮ ಸ್ವೀಕರಿಸಲಿಲ್ಲ.
ಕರೀನಾ ಕಪೂರ್ ತಮ್ಮ ಧರ್ಮವನ್ನು ಬದಲಾಯಿಸದಿರಲು ಕಾರಣ ಸೈಫ್ ಅಲಿ ಖಾನ್. ವಾಸ್ತವವಾಗಿ, ಸೈಫ್ ಪ್ರಕಾರ, ಅವರು ಮದುವೆಗಾಗಿ ಧರ್ಮ ಪರಿವರ್ತನೆ ನಂಬುವುದಿಲ್ಲ. ಧರ್ಮ ಮೀರಿ ಪ್ರೀತಿಗಾಗಿ ಮದುವೆಯಾಗಿದ್ದರು..
ಸೈಫ್ ಮೇಲ್ ಟುಡೇ ಜೊತೆ ಮಾತನಾಡುತ್ತಾ, "ನಾನು ಅವಳು (ಕರೀನಾ) ತನ್ನ ಧರ್ಮವನ್ನು ಬದಲಾಯಿಸಬೇಕೆಂದು ಎಂದಿಗೂ ಬಯಸುವುದಿಲ್ಲ.ಇದು ಮತಾಂತರ ವಿವಾದಕ್ಕೆ ಕಾರಣವಾಗುತ್ತೆ" ಎಂದು ಹೇಳಿದ್ದರು.
ಸೈಫ್ ಕರೀನಾಳನ್ನು ಮದುವೆಯಾದಾಗ, ಅವರ ಮೇಲೆ 'ಲವ್ ಜಿಹಾದ್' ಆರೋಪ ಹೊರಿಸಲಾಗಿತ್ತು ಕರೀನಾ ಧರ್ಮ ಬದಲಾಯಿಸಿದ್ದಾರೆ ಎಂದು ಹೇಳಲಾಯ್ತು. ಆದರೆ. ಸೈಫ್ ಮತಾಂತರ ಬಯಸಲಿಲ್ಲ.
ಸೈಫ್ ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಹೇಳಿಕೆಯಲ್ಲಿ, “ಜನರು ಅವಳು ಧರ್ಮ ಬದಲಾಯಿಸಿದ್ದಾಳೆ ಎಂದು ಹೇಳಿದ್ದರು. ಆದರೆ ಬದಲಾಗಿಲ್ಲ. ನಮ್ಮ ನಡುವೆ ಯಾವತ್ತೂ ಈ ವಿಷಯ ಬಂದಿಲ್ಲ ಎಂದರು.
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ 2012 ರಲ್ಲಿ ವಿವಾಹವಾದರು. 54 ವರ್ಷದ ಸೈಫ್ ಕರೀನಾಳಿಗಿಂತ 10 ವರ್ಷ ಹಿರಿಯರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬನ ಹೆಸರು ತೈಮೂರ್ ಮತ್ತೊಬ್ಬನ ಹೆಸರು ಜಹಾಂಗೀರ್ ಅಲಿ ಖಾನ್.