Cine World
ಸೈಫ್ ಅಲಿ ಖಾನ್ ಅವರ ಮನೆಯಲ್ಲಿಯೇ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ತುರ್ತಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ.
ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಏಕೆ, ಹಲ್ಲೆಕೋರನ ಉದ್ದೇಶವೇನು, ಮನೆಯವರ ಪಾತ್ರವೇನು..ಹೀಗೆ ಹಲವು ಪ್ರಶ್ನೆಗಳು ಕಾಡುತ್ತಿವೆ.
ಎಫ್ಐಆರ್ ಪ್ರಕಾರ, ಹಲ್ಲೆಕೋರನನ್ನು ಕೋಣೆಯಲ್ಲಿ ಬಂಧಿಸಲಾಗಿತ್ತು. ಆದರೆ, ಕೇರ್ ಟೇಕರ್ ಹಿಂದಿರುಗಿದಾಗ ಕೋಣೆ ತೆರೆದಿತ್ತು. ಹಲ್ಲೆಕೋರನನ್ನು ಮನೆಯಿಂದ ಹೊರಗೆ ಕಳುಹಿಸಿದ್ಯಾರು?
ಘಟನೆಗೆ 2 ಗಂಟೆ ಮೊದಲಿನ ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿ ಕಾಣಿಸಿಕೊಂಡಿಲ್ಲ. ಹಲ್ಲೆಕೋರ ಮೊದಲೇ ಮನೆಯೊಳಗೆ ನುಸುಳಿದ್ದನೇ?
ಹಲ್ಲೆಯ ನಂತರ ಹಲ್ಲೆಕೋರ ಓಡುವ ದೃಶ್ಯ ಒಂದು ಸಿಸಿಟಿವಿಯಲ್ಲಿ ಮಾತ್ರ ಸೆರೆಯಾಗಿದೆ. ಕಾವಲುಗಾರನಿಗೆ ಕಾಣಲಿಲ್ಲವೇ? ಹೇಗೆ ತಪ್ಪಿಸಿಕೊಂಡ?
ಸಾಮಾನ್ಯವಾಗಿ ಕಳ್ಳರು ಸಿಕ್ಕಿಬಿದ್ದರೆ ಓಡಿಹೋಗಲು ಯತ್ನಿಸುತ್ತಾರೆ. ಹಲ್ಲೆ ನಡೆಸುವುದು ಬಹಳ ವಿರಳ. ಆದರೆ ಇಲ್ಲಿ ಹಲ್ಲೆ ಏಕೆ?
ಎಫ್ಐಆರ್ ಪ್ರಕಾರ, ರಾತ್ರಿ 11 ಗಂಟೆಯವರೆಗೆ ಎಲ್ಲವೂ ಸರಿಯಾಗಿತ್ತು. 3 ಗಂಟೆಯಲ್ಲಿ ಏನಾಯಿತು?