ಬಾಲಿವುಡ್ ಕಿಂಗ್ ಆಗಿ ಮೆರೆಯುತ್ತಿರುವ ಶಾರುಖ್ ಖಾನ್‌ಗೆ ಹುಟ್ಟಿದಬ್ಬದ ಸಂಭ್ರಮ.
Kannada
59ನೇ ಬರ್ತ್ ಡೇ
ಶಾರುಖ್ ಖಾನ್ ಗೆ 59 ವರ್ಷ. ಅವರು 1965ರಲ್ಲಿ ದೆಹಲಿಯಲ್ಲಿ ಜನಿಸಿದರು. ದೆಹಲಿಯಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಅವರಿಗೆ ಮೊದಲ ಚಿತ್ರ 'ದಿಲ್ ಆಶ್ನಾ ಹೈ' ಆಫರ್ ಬಂದಿತು.
Kannada
ಅವಕಾಶ ಗಿಟ್ಟಿಸಿಕೊಂಡಿದ್ದು ಹೀಗೆ
ಸಲ್ಮಾನ್ ಖಾನ್ ಮತ್ತು ಸನ್ನಿ ಡಿಯೋಲ್‌ರಂತಹ ತಾರೆಯರು ತಿರಸ್ಕರಿಸಿದ ಚಿತ್ರಗಳಲ್ಲಿಯೇ ನಟಿಸಿ ಶಾರುಖ್ ಖಾನ್ ಸ್ಟಾರ್ ಆದರು.
Kannada
೧. ಡರ್
'ಡರ್' ಚಿತ್ರ ಶಾರುಖ್ ಖಾನ್ ವೃತ್ತಿ ಜೀವನಕ್ಕೆ ಹೊಸ ತಿರುವು ನೀಡಿತು. ಈ ಚಿತ್ರದಲ್ಲಿ ಆಮಿರ್ ಖಾನ್ ನಟಿಸಬೇಕಾಗಿತ್ತು. ನಿರ್ಮಾಪಕರ ಜೊತೆ ಮನಸ್ತಾಪದ ನಂತರ ಚಿತ್ರ ತೊರೆದರು. ಖಳನಾಯಕನಾಗಿ ನಟಿಸಲು ಶಾರುಖ್ ಒಪ್ಪಿದರು.
Kannada
DDLJ
'ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ' ಶಾರುಖ್ ಖಾನ್ ಅವರ ಅದೃಷ್ಟವನ್ನೇ ಬದಲಾಯಿಸಿತು. ಸೈಫ್ ಅಲಿ ಖಾನ್ ಚಿತ್ರವನ್ನು ತಿರಸ್ಕರಿಸಿದ ನಂತರ ಶಾರುಖ್ ನಟಿಸಿದರು.
Kannada
'ದೀವಾನ'
'ದೀವಾನ' ಶಾರುಖ್ ಖಾನ್ ಅವರ ಮೊದಲ ಹಿಟ್ ಚಿತ್ರ. ಚಿತ್ರದಲ್ಲಿ ಮೊದಲು ಅರ್ಮಾನ್ ಕೊಹ್ಲಿ ಇದ್ದರು, ಆದರೆ ಅವರು ಚಿತ್ರವನ್ನು ರಿಜೆಕ್ಟ್ ಮಾಡಿದ್ದರು.
Kannada
'ಕರಣ್ ಅರ್ಜುನ್'
ಸಲ್ಮಾನ್-ಶಾರುಖ್ ಖಾನ್ ಅಭಿನಯದ 'ಕರಣ್ ಅರ್ಜುನ್' ಸೂಪರ್ ಹಿಟ್ ಚಿತ್ರ. ಶಾರುಖ್ ಪಾತ್ರವನ್ನು ಮೊದಲು ಸನ್ನಿ ಡಿಯೋಲ್‌ಗೆ ಆಫರ್ ಮಾಡಲಾಗಿತ್ತು ಆದರೆ ಡೇಟ್ ಇಲ್ಲದ ಕಾರಣ ಅವರು ಒಪ್ಪಿಕೊಳ್ಳಲಿಲ್ಲ.
Kannada
'ಬಾಜಿಗರ್'
'ಬಾಜಿಗರ್' ಚಿತ್ರವನ್ನು ಮೊದಲು ಸಲ್ಮಾನ್ ಖಾನ್‌ಗೆ ಆಫರ್ ಮಾಡಲಾಗಿತ್ತು. ಖಳನಾಯಕ ಪಾತ್ರವೆಂದು ಅವರು ರಿಜೆಕ್ಟ್ ಮಾಡಿದ್ದನ್ನು ಶಾರುಖ್ ಒಪ್ಪಿಕೊಂಡಿದ್ದರು.
Kannada
'ಚಕ್ ದೇ! ಇಂಡಿಯಾ'
'ಚಕ್ ದೇ! ಇಂಡಿಯಾ' ಚಿತ್ರಕ್ಕಾಗಿ ಮೊದಲು ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು. ಚಿತ್ರದ ಕ್ಲೈಮ್ಯಾಕ್ಸ್ ಅವರಿಗೆ ಇಷ್ಟವಾಗಲಿಲ್ಲವೆಂದು ಹೊರ ನಡೆದರು. ನಂತರ ಶಾರುಖ್ ಖಾನ್ ನಟಿಸಿದರು.
Kannada
'ಡಾನ್'
ಶಾರುಖ್ ಖಾನ್ ಅವರ ಹಿಟ್ ಚಿತ್ರ 'ಡಾನ್' ಗಾಗಿ ಮೊದಲು ರಣಬೀರ್ ಕಪೂರ್ ಅವರನ್ನು ಆಯ್ಕೆ ಮಾಡಬೇಕಿತ್ತು, ಆದರೆ ಅವರು ನಿರಾಕರಿಸಿದ್ದಕ್ಕೆ ಶಾರುಖ್ ಲಕ್ ಖುಲಾಯಿಸಿತು.