Cine World

ಶಾರುಖ್ ಜೊತೆ ನಟಿಸಲು ನಿರಾಕರಿಸಿದ 11 ನಟಿಯರು

1. ಸಮಂತಾ ರುಥ್ ಪ್ರಭು

ವರದಿಗಳ ಪ್ರಕಾರ, ಅಟ್ಲಿ ಕುಮಾರ್ 'ಜವಾನ್' ಚಿತ್ರಕ್ಕಾಗಿ ಶಾರುಖ್ ಖಾನ್ ಎದುರು ಸಮಂತಾರನ್ನು ಆಯ್ಕೆ ಮಾಡಿದ್ದರು. ಆದರೆ ಅವರು ಆಫರ್ ಅನ್ನು ತಿರಸ್ಕರಿಸಿದರು ಮತ್ತು ನಂತರ ನಯನತಾರ ಚಿತ್ರದ ನಾಯಕಿಯಾಗಿ ಆಯ್ಕೆಯಾದರು.

2. ಶ್ರೀದೇವಿ

1993 ರಲ್ಲಿ ಬಿಡುಗಡೆಯಾದ 'ಡರ್' ಚಿತ್ರಕ್ಕಾಗಿ ನಿರ್ಮಾಪಕರು ಶಾರುಖ್ ಖಾನ್ ಎದುರು ಶ್ರೀದೇವಿಯನ್ನು ಆಯ್ಕೆ ಮಾಡಲು ಬಯಸಿದ್ದರು. ಶ್ರೀದೇವಿ ಆ ಪಾತ್ರವನ್ನು ತಿರಸ್ಕರಿಸಿದ ನಂತರ ಜೂಹಿ ಚಾವ್ಲಾ ಪಾಲಾಯ್ತು.

3. ಕರಿಷ್ಮಾ ಕಪೂರ್

ಕರಿಷ್ಮಾಗೆ ಶಾರುಖ್ ಎದುರು 'ಕುಚ್ ಕುಚ್ ಹೋತಾ ಹೈ' ಮತ್ತು 'ಅಶೋಕ' ಆಫರ್ ಆಗಿದ್ದವು. ಆದರೆ ಅವರು ನಿರಾಕರಿಸಿದ್ರಿಂದ ನಂತರ ರಾಣಿ ಮುಖರ್ಜಿ ಮತ್ತು ಕರೀನಾ ಕಪೂರ್ ಅವರ ಸ್ಥಾನವನ್ನು ಪಡೆದರು.

4. ನಯನತಾರ

'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದ 'ಒನ್ ಟು ತ್ರೀ ಫೋರ್' ಹಾಡಿನ ಆಫರ್ ಮೊದಲು ನಯನತಾರಾಗೆ ಬಂದಿತ್ತು. ಆದರೆ ಅವರು ಆಫರ್ ಅನ್ನು ತಿರಸ್ಕರಿಸಿದರು. ನಂತರ ಈ ಹಾಡು ಪ್ರಿಯಾಮಣಿ ಅವರಿಗೆ ಸಿಕ್ಕಿತ್ತು.

5. ಸೋನಂ ಕಪೂರ್

ಸೋನಂ ಕಪೂರ್ ಶಾರುಖ್ ಖಾನ್ ಜೊತೆ ಕೆಲಸ ಮಾಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅವರ ಪ್ರಕಾರ, ಶಾರುಖ್ ಮತ್ತು ಅವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗುವುದಿಲ್ಲವಂತೆ.

6. ಅಮೀಷಾ ಪಟೇಲ್

'ಚಲ್ತೆ ಚಲ್ತೆ' ಚಿತ್ರಕ್ಕಾಗಿ ಮೊದಲು ಅಮೀಷಾ ಪಟೇಲ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ದಿನಾಂಕದ ಸಮಸ್ಯೆಯಿಂದಾಗಿ ಅವರು ಚಿತ್ರವನ್ನು ತೊರೆದರು ಮತ್ತು ಈ ಪಾತ್ರ ರಾಣಿ ಮುಖರ್ಜಿಗೆ ಸಿಕ್ಕಿತು.

7. ಹೇಮಾ ಮಾಲಿನಿ

ಹೇಮಾ ಮಾಲಿನಿ ಶಾರುಖ್ ಖಾನ್ ಜೊತೆ ಕೆಲಸ ಮಾಡಲು ನಿರಾಕರಿಸಿದ್ದಾರೆ. ಶಾರುಖ್ ಓವರ್ ಆಗಿ ನಟಿಸುತ್ತಾರೆ. ಆದ್ದರಿಂದ ಎಂದಿಗೂ ಅವರೊಂದಿಗೆ ಕೆಲಸ ಮಾಡುವುದಿಲ್ಲ ಎಂದಿದ್ದಾರಂತೆ.

8. ಕಂಗನಾ ರಣಾವತ್

ಕಂಗನಾ ರಣಾವತ್ ಕೇವಲ ಶಾರುಖ್ ಮಾತ್ರವಲ್ಲ, ಯಾವುದೇ ಖಾನ್ ಸೂಪರ್‌ಸ್ಟಾರ್ ಜೊತೆ ಕೆಲಸ ಮಾಡಲು ನಿರಾಕರಿಸಿದ್ದಾರೆ. ಅವರ ಪ್ರಕಾರ, ಖಾನ್‌ಗಳ ಚಿತ್ರಗಳಲ್ಲಿ ಅವರಿಗೆ ಯೋಗ್ಯವಾದ ಏನೂ ಇಲ್ಲ.

9. ತಬು

ತಬು ಶಾರುಖ್ ಖಾನ್ ಜೊತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಲು ನಿರಾಕರಿಸಿದ್ದಾರೆ. ಆದಾಗ್ಯೂ, ತಬು ಸಂದರ್ಶನದಲ್ಲಿ ಶಾರುಖ್ ಮತ್ತು ಅವರೊಂದಿಗೆ ಎಂದಿಗೂ ಅಂತಹ ಏನೂ ಸಂಭವಿಸಿಲ್ಲ ಎಂದಿದ್ದಾರೆ.

10. ರವೀನಾ ಟಂಡನ್

ರವೀನಾ ಟಂಡನ್ 'ಇಂಗ್ಲಿಷ್ ಬಾಬು ದೇಸಿ ಮೇಮ್' ಚಿತ್ರಕ್ಕೆ ಸಹಿ ಹಾಕಿದ ನಂತರ ಚಿತ್ರ ತೊರೆದರು. ಏಕೆಂದರೆ ಅವರು ವರ್ಣರಂಜಿತ ಉಡುಪುಗಳಿಂದ ಸಿನಿಮಾ ಬೇಡ ಎಂದಿದ್ದರಂತೆ. ನಂತರ ಸೋನಾಲಿ ಬೇಂದ್ರೆಯನ್ನು ಆಯ್ಕೆ ಮಾಡಲಾಯಿತು.

11. ಕಾಜೋಲ್

ಆಪ್ತ ಸ್ನೇಹಿತೆ ಕಾಜೋಲ್‌ಗೆ 'ವೀರ್ ಜಾರಾ' ಚಿತ್ರದಲ್ಲಿ ಅವರ ಎದುರು ನಟಿಸಲು ಆಫರ್ ಬಂದಿತ್ತು ಎನ್ನಲಾಗಿದೆ. ಆದರೆ ಅವರು ಈ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದರು ಮತ್ತು ಪ್ರೀತಿ ಜಿಂಟಾಗೆ ಆ ಪಾತ್ರ ಸಿಕ್ಕಿತು.

ಒಟಿಟಿಯಲ್ಲಿ ಈ ವಾರ ಅತೀಹೆಚ್ಚು ವೀಕ್ಷಿಸಲ್ಪಟ್ಟ ವೆಬ್‌ ಸಿರೀಸ್‌ಗಳು

ರಾಮಾಯಣದಲ್ಲಿ ಯಾರಿಗೆ ಯಾವ ಪಾತ್ರ, ಇಲ್ಲಿದೆ ಫುಲ್ ಡೀಟೇಲ್ಸ್

ಅಭಿಷೇಕ್ ಪ್ರೇಮ ವೈಫಲ್ಯಗಳು: 2ಬ್ರೇಕಪ್‌ 1 ಮುರಿದ ನಿಶ್ಚಿತಾರ್ಥ, ಈಗ ವಿಚ್ಛೇದನ?

ಈ ಬಾಲಿವುಡ್ ತಾರೆಯರಿಗೆ ಲಕ್ಷಗಳಲ್ಲಿ ಬರುತ್ತೆ ಕರೆಂಟ್ ಬಿಲ್