Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಪಾಕಿಸ್ತಾನದ ಜನಪ್ರಿಯ ನಟಿ ಹುಮೈರಾ ಅಸ್ಗರ್ ಅವರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 32 ವರ್ಷದ ಹುಮೈರಾ ಪಾಕಿಸ್ತಾನದ ಚಾನೆಲ್ ARYಯ ರಿಯಾಲಿಟಿ ಶೋ ತಮಾಷ ಘರ್‌ನಲ್ಲಿ ಭಾಗವಹಿಸಿದ್ದರು.

Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಜುಲೈ 8ರಂದು ಅವರ ಕರಾಚಿ ಪೊಲೀಸರು ಅವರ ಮನೆಯ ಬಾಗಿಲು ಮುರಿದು ಒಳ ಹೋದಾಗ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರು ಇತ್ತೆಹಾದ್ ಕಮರ್ಷಿಯಲ್ ಎಂಬ ಸ್ಥಳದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

2024 ರಿಂದ ಹುಮೈರಾ ಮನೆ ಬಾಡಿಗೆ ಪಾವತಿಸಿಲ್ಲ ಎಂದು ಮನೆ ಮಾಲೀಕರು ಆರೋಪಿಸಿದ ನಂತರ, ಸ್ಥಳೀಯ ಕೋರ್ಟ್‌ ಅವರ ಅಪಾರ್ಟ್ಮೆಂಟ್ ಖಾಲಿ ಮಾಡುವಂತೆ ಆದೇಶಿಸಿದ ನಂತರ ಪೊಲೀಸರು ಮನೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಕರಾಚಿಯ ರಕ್ಷಣಾ ವಸತಿ ಪ್ರಾಧಿಕಾರದಲ್ಲಿರುವ ಹುಮೈರಾ ಮನೆಗೆ ಮಧ್ಯಾಹ್ನ 3.15 ರ ಸುಮಾರಿಗೆ ಪೊಲೀಸರು ಭೇಟಿ ನೀಡಿ ಬಾಗಿಲು ಬಡಿದಿದ್ದಾರೆ ತೆರೆಯದಿದ್ದಾಗ ಬೀಗ ಮುರಿದು ಒಳಹೋದ ಪೊಲೀಸರಿಗೆ ಅಲ್ಲಿ ಹುಮೈರಾ ಶವ ಕಂಡಿದೆ.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ನಟಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿನ್ನಾ ಸ್ನಾತಕೋತ್ತರ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿಯಲಿದೆ ಪೊಲೀಸರ ಪ್ರಕಾರ ಹುಮೈರಾ ಮೃತಪಟ್ಟು ಹಲವು ದಿನಗಳೇ ಕಳೆದಿವೆ.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಹುಮೈರಾ ಕೆಲ ದಿನಗಳ ಹಿಂದೆಯೇ ಸಾವನ್ನಪ್ಪಿದ್ದಾರೆ ದೇಹ ಕೊಳೆತಿಿತ್ತು ಆಕೆ ಸಾವಿಗೀಡಾಗಿ ಕನಿಷ್ಠ ಎರಡು ವಾರಗಳು ಕಳೆದಿರಬಹುದು ಎಂದು ಪೊಲೀಸ್ ಶಸ್ತ್ರಚಿಕಿತ್ಸಕ ಡಾ. ಸುಮ್ಮಯ್ಯ ಸೈಯದ್ ಡಾನ್‌ ನ್ಯೂಸ್‌ಗೆ ತಿಳಿಸಿದ್ದಾರೆ

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಪೊಲೀಸರ ಪ್ರಕಾರ ಬೇರೆಯವರು ಕೃತ್ಯ ನಡೆಸಿದ ಲಕ್ಷಣ ಅಲ್ಲಿ ಕಂಡು ಬಂದಿಲ್ಲ. ಮನೆಯ ಕಬ್ಬಿಣದ ಗೇಟ್, ಮರದ ಬಾಗಿಲು ಮತ್ತು ಬಾಲ್ಕನಿ ಎಲ್ಲವೂ ಒಳಗಿನಿಂದ ಲಾಕ್ ಆಗಿದ್ದವು. ಆಕೆ ಅಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಇತ್ತ ಹುಮೈರಾ ಅಸ್ಗರ್ ಅವರ ಶವವನ್ನು ಪಡೆಯಲು ಕುಟುಂಬ ನಿರಾಕರಿಸಿದೆ ಎಂದು ವರದಿಯಾಗಿದೆ. ವರ್ಷಗಳ ಹಿಂದೆ ಅವರು ಸಂಬಂಧಗಳನ್ನು ಕಡಿದುಕೊಂಡಿದ್ದಾರೆ. ಹೀಗಾಗಿ ಅವರ ಶವವನ್ನು ಪಡೆದುಕೊಳ್ಳುವುದಿಲ್ಲ ಎಂದು ಕುಟುಂಬ ಹೇಳಿದೆ.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಹುಮೈರಾ ಅಸ್ಗರ್ ಅವರ ಸೋದರ ಹಾಗೂ ತಂದೆ ಅವರ ಶವವನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಕರಾಚಿಯ ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಹುಮೈರಾ ಮನೆ ಮಾಲೀಕರ ಮೂಲಕ ಅವರ ಪೋಷಕರನ್ನು ಸಂಪರ್ಕಿಸಿದಾಗ ಆಕೆಯ ತಂದೆ ಕರಾಚಿಗೆ ಬರಲು ನಿರಾಕರಿಸಿದ್ದಲ್ಲದೇ ಎರಡು ವರ್ಷಗಳ ಹಿಂದೆಯೇ ಆಕೆ ಕುಟುಂಬದ ಸಂಪರ್ಕವನ್ನು ಕಡಿದುಕೊಂಡಿದ್ದಾಗಿ ಹೇಳಿದ್ದಾರೆ.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಆದರೂ ಕುಟುಂಬದವರು ಆಕೆಯ ಶವವನ್ನು ಪಡೆಯುವಂತೆ ಮನವೊಲಿಸುವ ಪ್ರಯತ್ನ ನಡೆದಿದೆ ಎಂದು ವರದಿಯಾಗಿದೆ.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಹುಮೈರಾ ಅವರು ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ನ ಜನರೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ, ನೆರೆಹೊರೆಯವರಿಗೂ ಅವರು ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದರು.

Image credits: Insta
Kannada

ಹುಮೈರಾ ಅಸ್ಗರ್ ನಿಗೂಢ ಸಾವು

ಹುಮೈರಾ ಅವರ ಈ ಸಾವು ಪಾಕಿಸ್ತಾನಿ ಕಿರುತೆರೆ ವಲಯದಲ್ಲಿ ಆಘಾತ ಮೂಡಿಸಿದೆ. ಅಲ್ಲಿನ ನಟರು ಮತ್ತು ಕಲಾವಿದರು ಆನ್‌ಲೈನ್‌ನಲ್ಲಿ ಹುಮೈರಾ ಅಗಲಿಕೆಗೆ ಆಘಾತ ಆತಂಕ ವ್ಯಕ್ತಪಡಿಸಿ ಭಾವುಕರಾಗಿದ್ದಾರೆ.

Image credits: Insta

ಅಪ್ಪ ಸ್ಟ್ರಿಕ್ಟ್‌ IAS ಆಫೀಸರ್, ರ‍್ಯಾಪರ್ ಜತೆ ಪ್ರೀತಿ, ಉದ್ಯಮಿಯಾದ ನಟಿ ಯಾರು?

ಹಣ ಮಾಡೋದನ್ನ ಕಲಿಸುತ್ತೆ ಈ ಸಿನಿಮಾಗಳು… 25 ವರ್ಷ ಆಗುವ ಮೊದಲು ನೋಡಿ

25 ವರ್ಷದಲ್ಲಿ ಸಾಲು ಸಾಲು ಹಿಟ್‌ ಕೊಟ್ರೂ ನಟ ಸಿದ್ದಾರ್ಥ್‌ಗೆ ಒಂದೂ ಮನೆಯಿಲ್ಲ!

ಕಣ್ಣು ಮುಂದೆ ಮಕ್ಕಳನ್ನು ಕಳ್ಕೊಂಡ ಸೆಲೆಬ್ರಿಟಿಗಳು! ಈ ಕಷ್ಟ ಯಾವ ಶತ್ರುಗೂ ಬೇಡ!