Cine World
ಫೆ.9ಕ್ಕೆ 15ಕ್ಕೂ ಹೆಚ್ಚು ಚಿತ್ರಗಳು ವಿವಿಧ ಫ್ಲಾಟ್‌ಫಾರಂಗಳಲ್ಲಿ ಬಿಡುಗಡೆ ಕಾಣುತ್ತಿವೆ. ಅವುಗಳಲ್ಲಿ ಕೆಲ ಮುಖ್ಯವಾದವುಗಳಿವು, ಎಲ್ಲಿ ನೋಡ್ಬಹುದು ಗೊತ್ತಾ?
ಮಹೇಶ್ ಬಾಬು ಹಾಗೂ ಶ್ರೀಲೀಲಾ ಅಭಿನಯದ ಈ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಫೆ.9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ರಜನೀಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಲಾಲ್ ಸಲಾಂ ಫೆ.9ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಕಾಣಲಿದೆ.
ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ಜೊತೆಯಾಗಿ ಅಭಿನಯಿಸಿರುವ ಈ ಬಾಲಿವುಡ್ ಚಿತ್ರವು ಡಿ.9ರಂದು ದೊಡ್ಡ ಪರದೆಯ ಮೇಲೆ ಬರಲಿದೆ.
ರವಿತೇಜಾ ಅಭಿನಯದ ಈ ತೆಲುಗು ಚಿತ್ರವು ಫೆ.9ರಂದು ದೊಡ್ಡ ಪರದೆಯಲ್ಲಿ ಬಿಡುಗಡೆ ಕಾಣಲಿದೆ.
ಭೂಮಿ ಪಡ್ನೇಕರ್ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ಫೆ.9ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.
ಧನುಷ್ ಮುಖ್ಯ ಭೂಮಿಕೆಯಲ್ಲಿರುವ ಈ ತಮಿಳು ಚಿತ್ರವು ಜ.12ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಫೆ.9ರಂದು ಅಮೇಜಾನ್ ಪ್ರೈಮ್‌ನಲ್ಲಿ ನೋಡಬಹುದಾಗಿದೆ.
ಸುಶ್ಮಿತಾ ಸೇನ್ ಅಭಿನಯದ ಜನಪ್ರಿಯ ವೆಬ್ ಸಿರೀಸ್ ಇದಾಗಿದ್ದು, ಇದರ 3ನೇ ಭಾಗ ಫೆ.9ರಂದು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ.
ಮಲೆಯಾಳಂನ ಈ ಕ್ರೈಮ್ ಡ್ರಾಮಾವು ಫೆ.9ರಂದು ಥಿಯೇಟ್ರಿಕಲ್ ರಿಲೀಸ್ ಕಾಣುತ್ತಿದೆ.
ಈ ತೆಲುಗು ಚಿತ್ರವು ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ವೈ ಎಸ್ ರೆಡ್ಡಿಯವರ ಬಯೋಪಿಕ್ ಆಗಿದೆ. ಇದು ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ.
ದರ್ಶನ್ ಅಭಿನಯದ ಕಾಟೇರಾ ಚಿತ್ರವು ಡಿ.29ರಂದು ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿದ್ದು, ಫೆ.9ರಂದು ಜೀ 5ನಲ್ಲಿ ಬಿಡುಗಡೆಯಾಗಲಿದೆ.