ಸ್ಯಾಂಡಲ್‌ವುಡ್ ಕೇವಲ ಒಂದು ಉದ್ಯಮವಲ್ಲ, ಭಾರತೀಯ ಚಿತ್ರರಂಗದಾದ್ಯಂತ ಮಿಂಚಿದ ಅನೇಕ ತಾರೆಯರಿಗೆ ಇದು ಅಡಿಪಾಯವಾಗಿದೆ. ಕರ್ನಾಟಕದ ಬೇರುಗಳಿಂದ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ, ಯಾಮಿ ಗೌತಮ್, ರಕುಲ್ ಪ್ರೀತ್ ಸಿಂಗ್, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ, ನಿತ್ಯಾ ಮೆನನ್ ಮತ್ತು ಶ್ರೀಲೀಲಾ ಅವರಂತಹ ನಟಿಯರು ಕೂಡ ಮೂಲತಃ ಕನ್ನಡದವರೇ.
ಕೆಲವರು ಇಲ್ಲಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು, ಇನ್ನು ಕೆಲವರು ಕರ್ನಾಟಕವನ್ನು ತಮ್ಮ ಬೇರುಗಳಾಗಿ ಹೊಂದಿದ್ದಾರೆ ಆದರೆ ಅವರೆಲ್ಲರ ಮೂಲವೂ ಕನ್ನಡವೇ ಆಗಿದೆ.
ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು, ಅಪ್ಪ ಪ್ರಕಾಶ್ ಪಡುಕೋಣೆ ಗೊತ್ತೇ ಇರಬೇಕು. ಇನ್ನು ದೀಪಿಕಾ ಸಿನಿಮಾ ರಂಗಕ್ಕೆ ಕಾಲಿಟ್ಟದ್ದು ಕೂಡ ಚಂದನವನದ ಮೂಲಕ.
ಬಾಲಿವುಡ್ ನಲ್ಲಿ ತಮ್ಮ ಪ್ರಬುದ್ಧ ಅಭಿನಯ ಹಾಗೂ ಸೌಂದರ್ಯದ ಮೂಲಕ ಮಿಂಚುತ್ತಿರುವ, ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಯಾಮಿ ಗೌತಮ್ ಮೊದಲ ಚಿತ್ರ ಕನ್ನಡದ ‘ಉಲ್ಲಾಸ ಉತ್ಸಾಹ’.
ತಮಿಳು, ತೆಲುಗು, ಬಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ನಟನೆಗೆ ಎಂಟ್ರಿ ಕೊಟ್ಟಿರೋದು ಕನ್ನಡದ ‘ಗಿಲ್ಲಿ’ ಸಿನಿಮಾ ಮೂಲಕ, ನಂತರ ಸ್ಟಾರ್ ನಟಿಯಾಗಿ ಗುರುತಿಸಿಕೊಂಡರು.
ಬಾಲಿವುಡ್ ಬ್ಯೂಟಿ, ವಿಶ್ವಸುಂದರಿ, ಸಿನಿಮಾ ಲೋಕದ ಸ್ಟಾರ್ ನಟಿ ಐಶ್ವರ್ಯ ರೈ ಅವರು ಮೂಲತಃ ಮಂಗಳೂರಿನವರು. ಇಂದಿಗೂ ತಮ್ಮ ಊರಿಗೆ ಬರುತ್ತಿರುತ್ತಾರೆ ನಟಿ.
ಶಿಲ್ಪಾ ಶೆಟ್ಟಿ ಬಾಲಿವುಡ್ ನಟಿಯಾಗಿದ್ದರೂ ಸಹ ತಾವು ಕುಡ್ಲದ ಪೊಣ್ಣು ಎಂದು ಗುರುತಿಸಿಕೊಳ್ಳಲು ಇಷ್ಟಪಡುವ ನಟಿ, ಯಾವುದೇ ಸಂದರ್ಭದಲ್ಲೂ ತಾವು ಕನ್ನಡತಿ, ತುಳುವತಿ ಎನ್ನುವುದನ್ನು ಹೇಳುತ್ತಲೇ ಇರುತ್ತಾರೆ.
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೂಲಕ ಕನ್ನಡಿಗರ ಕ್ರಶ್ ಆಗಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಕೂಡ ಮೂಲತಃ ಮಂಗಳೂರಿನವರು, ಪುತ್ತೂರಿನ ಬೆಡಗಿ, ತಮಿಳಿನಲ್ಲಿ ಮಿಂಚುತ್ತಿದ್ದರೂ ಕನ್ನಡ ಮರೆತಿಲ್ಲ.
ಕನ್ನಡತಿ ನಮ್ಮ ಬೆಂಗಳೂರು ಬೆಡಗಿ ನಿತ್ಯಾ ಮೆನನ್ ಕನ್ನಡ ಸಿನಿಮಾ ಮೂಲಕ ಎಂಟ್ರಿ ಕೊಟ್ಟು ಸದ್ಯ ದಕ್ಷಿಣ ಭಾರತೀಯ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.