ಮರಾಠಿ ಸಿನಿಮಾರಂಗದ ಖ್ಯಾತ ನಟ ಶವವಾಗಿ ಪತ್ತೆಯಾಗಿದ್ದಾರೆ. ಕೇವಲ ರವೀಂದ್ರ ಮಹಾಜನಿ ಮಾತ್ರವಲ್ಲ ಬಾಲಿವುಡ್‌ನ ಹಲವು ಖ್ಯಾತ ನಟ-ನಟಿಯರ ಮೃತದೇಹ ಹೀಗೆ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು.
Image credits: Facebook
ಪರ್ವೀನ್ ಬಾಬಿ
22 ಜನವರಿ 2005ರಂದು ಪರ್ವೀನ್ ಬಾಬಿ ಅವರ ಮೃತದೇಹ ಮನೆಯ ಮಹಡಿಯಲ್ಲಿ ಕಂಡು ಬಂದಿತ್ತು. ಮೂರು ದಿನಗಳ ಹಿಂದೆಯೇ ಅವರು ಸಾವನ್ನಪ್ಪಿದ್ದರು. ಪರ್ವೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು.
Image credits: Facebook
ನಳಿನಿ ಜಯವಂತ್
22 ಡಿಸೆಂಬರ್ 2010ರಂದು ನಟಿ ನಳಿನಿ ಜಯವಂತ್ ಸಾವಿನ ಸುದ್ದಿ ತಿಳಿದುಬಂತು. ಅವರ ಮೃತದೇಹ ಮೂರು ದಿನಗಳಿಂದ ಮನೆಯಲ್ಲೇ ಇತ್ತು. ಸಾವಿನ ಸಮಯದಲ್ಲಿ ಮನೆಯಲ್ಲೇ ಇಬ್ಬರೇ ಇದ್ದರು.
Image credits: Facebook
ಸಮೀರ್ ಶರ್ಮಾ
ಕಿರುತೆರೆ ನಟ ಸಮೀರ್ ಶರ್ಮಾ ಅವರ ಮೃತದೇಹ ಸತ್ತು ಎರಡು ದಿನಗಳ ವರೆಗೆ ಅವರ ಮನೆಯಲ್ಲಿಯೇ ಇತ್ತು. ಆಗಸ್ಟ್ 2020ರಲ್ಲಿ ಮೃತಪಟ್ಟಿದ್ದರು. ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದ್ದು, ಸಾವಿಗೆ ಕಾರಣ ಗೊತ್ತಾಗಿಲ್ಲ.
Image credits: Facebook
ಸುಶಾಂತ್ ಸಿಂಗ್ ರಜಪೂತ್
2020ರ ಜೂನ್ 14ರಂದು ಸುಶಾಂತ್ ಸಿಂಗ್ ಮೃತದೇಹ ಅವರ ಮನೆಯಲ್ಲಿ ಪತ್ತೆಯಾಗಿತ್ತು.ಮುಂಬೈ ಪೊಲೀಸರು ಇದನ್ನು ಆತ್ಮಹತ್ಯೆ ಎಂದಿದ್ದರು. ಆದರೆ ಕುಟುಂಬ ಸದಸ್ಯರು ಆತ್ಮಹತ್ಯೆಗೆ ಪ್ರಚೋದನೆ ಮಾಡಲಾಗಿದೆ ಎಂದು ಆರೋಪಿಸಿದ್ದರು.
Image credits: Facebook
ಶ್ರೀದೇವಿ
ಶ್ರೀದೇವಿ 2018ರ ಫೆಬ್ರವರಿ 24ರಂದು ದುಬೈನಲ್ಲಿ ಬಾತ್‌ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿದ್ದಾರೆ ಎಂದು ಹೇಳಲಾಗಿತ್ತು
Image credits: Facebook
ಸಿಲ್ಕ್ ಸ್ಮಿತಾ
1996 ಸೆಪ್ಟೆಂಬರ್ 23ರಂದು ಸಿಲ್ಕ್ ಸ್ಮಿತಾ ಅವರ ಮೃತದೇಹ ಚೆನ್ನೈನಲ್ಲಿರುವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಆತ್ಮಹತ್ಯೆಯ ಕಾರಣ ನಿಗೂಢವಾಗಿದೆ.