ಜೀವನದಲ್ಲಿ ಕುಟುಂಬಕ್ಕೊಂದು ಕಾರು ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಅದಕ್ಕಾಗಿ ದುಡಿದ ಹಣ ಉಳಿತಾಯ ಮಾಡುತ್ತಾರೆ. ಆದರೆ ನಮ್ಮ ಬಜೆಟ್‌ಗೆ ಹೊಂದುವ ಉತ್ತಮ ಮೈಲೇಜ್ ಕೊಡುವ ಕಾರು ಯಾವುದು? ಅಂತ ಯೋಚನೆ?
Image credits: our own
ಉತ್ತಮ ಮೈಲೇಜ್ ಬೇಕೇ?
ಕಡಿಮೆ ಬೆಲೆಯೊಂದಿಗೆ ಉತ್ತಮ ಮೈಲೇಜ್ ನಿಮಗೆ ಅಗತ್ಯವಿದೆಯೇ? ಹಾಗಾದರೆ ಇಲ್ಲಿ ಕೊಡಲಾಗಿರುವ ಕಾರಿನ ಬೆಲೆ ಮತ್ತು ಮೈಲೇಜ್‌ಗಳ ಬಗ್ಗೆ ತಿಳಿದುಕೊಳ್ಳಿ.
Image credits: our own
ಕೆಲವು ಡೀಸೆಲ್ ಕಾರುಗಳು ಇಲ್ಲಿವೆ
10 ಲಕ್ಷಕ್ಕಿಂತ ಕಡಿಮೆ ಬೆಲೆ ಮತ್ತು ಉತ್ತಮ ಮೈಲೇಜ್ ಹೊಂದಿರುವ ಕೆಲವು ಡೀಸೆಲ್ ಕಾರುಗಳು ಇಲ್ಲಿವೆ.
Image credits: our own
ಟಾಟಾ ಆಲ್ಟ್ರೋಜ್
ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಕೈಗೆಟುಕುವ ಡೀಸೆಲ್ ಕಾರು ಇದಾಗಿದೆ. ಡೀಸೆಲ್ ರೂಪಾಂತರಗಳ ಎಕ್ಸ್-ಶೋ ರೂಂ ಬೆಲೆ ₹8.90 ಲಕ್ಷದಿಂದ ಪ್ರಾರಂಭವಾಗುತ್ತದೆ.
Image credits: Tata website
ಮಹೀಂದ್ರ XUV 3XO
ಮೂಲ MX1 ಪೆಟ್ರೋಲ್ ರೂಪಾಂತರಕ್ಕೆ ₹7.99 ಲಕ್ಷ (ಎಕ್ಸ್-ಶೋ ರೂಂ) ಮತ್ತು ಡೀಸೆಲ್ ಎಡಿಷನ್ ₹9.99 ಲಕ್ಷದಿಂದ ಬೆಲೆ ಪ್ರಾರಂಭವಾಗುತ್ತದೆ.
Image credits: Mahindra Website
ಮಹೀಂದ್ರ ಬೊಲೆರೊ
ಎಕ್ಸ್-ಶೋ ರೂಂ ಬೆಲೆ ₹9.90 ಲಕ್ಷದಿಂದ ₹10.91 ಲಕ್ಷದವರೆಗೆ ಇದೆ. 1.5 ಲೀಟರ್ ಡೀಸೆಲ್ ಎಂಜಿನ್ ಇದೆ.
Image credits: Mahindra Auto Website
ಕಿಯಾ ಸೋನೆಟ್
ಮೂಲ HTE ಪೆಟ್ರೋಲ್-ಮ್ಯಾನುವಲ್ ರೂಪಾಂತರಕ್ಕೆ ₹8 ಲಕ್ಷ ಮತ್ತು ಡೀಸೆಲ್ ಕಾರು ₹9.80 ಲಕ್ಷ ಎಕ್ಸ್-ಶೋ ರೂಂ ಬೆಲೆ ಇದೆ.
Image credits: Kia Website
ಟಾಟಾ ನೆಕ್ಸಾನ್
ಬೆಲೆ ₹8 ಲಕ್ಷದಿಂದ ₹15.80 ಲಕ್ಷದವರೆಗೆ ಇದೆ. ಮೂಲ ಡೀಸೆಲ್ ರೂಪಾಂತರಕ್ಕೆ ₹10 ಲಕ್ಷ (ಎಕ್ಸ್-ಶೋ ರೂಂ, ಪ್ಯಾನ್-ಇಂಡಿಯಾ) ಬೆಲೆ ಇದೆ.