Kannada

1 ಲಕ್ಷ ಹೂಡಿಕೆ, ಉತ್ತಮ ಲಾಭ! ಈ 15 ವ್ಯವಹಾರಗಳು

Kannada

೧. ಟ್ಯೂಷನ್ ತರಗತಿಗಳು

ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ವ್ಯಾಪಾರ ಆಯ್ಕೆಯೆಂದರೆ ಆನ್‌ಲೈನ್ ಅಥವಾ ಆಫ್‌ಲೈನ್ ಟ್ಯೂಷನ್ ತರಗತಿಗಳು. ಶಾಲೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯವರೆಗೆ ನೀವು ತರಗತಿಗಳನ್ನು ನಡೆಸಬಹುದು. 

Kannada

2. ಗೃಹ ಕೈಗಾರಿಕೆಗಳು

ಪಾಪಡ್, ಉಪ್ಪಿನಕಾಯಿ, ಮಸಾಲೆ ಪುಡಿ ಮುಂತಾದ ವಸ್ತುಗಳನ್ನು ಕಡಿಮೆ ಬಜೆಟ್‌ನಲ್ಲಿ ತಯಾರಿಸಬಹುದು. ಅಡುಗೆ ಕೌಶಲ್ಯ ಉತ್ತಮವಾಗಿದ್ದರೆ 1 ಲಕ್ಷದೊಳಗೆ ಈ ಬ್ಯುಸಿನೆಸ್ ಪ್ರಾರಂಭಿಸಬಹುದು.

Kannada

3. ದಿನಸಿ ಮತ್ತು ಜನರಲ್ ಸ್ಟೋರ್

1 ಲಕ್ಷ ರೂಪಾಯಿಗಳಲ್ಲಿ ಯಾವುದೇ ವಸತಿ ಪ್ರದೇಶದ ಬಳಿ ಅಂಗಡಿ ತೆರೆಯಬಹುದು. ಇದರಲ್ಲಿ ಉತ್ತಮ ಗಳಿಕೆ ಇದೆ. ಅಕ್ಕಿ, ಚಹಾಪುಡಿ, ಸಕ್ಕರೆ, ಚಾಕೊಲೇಟ್‌ನಂತಹ ಮೂಲ ವಸ್ತುಗಳಿಗೆ ದೈನಂದಿನ ಬೇಡಿಕೆ ಇರುತ್ತದೆ.

Kannada

4. ಮಹಿಳೆಯರ ಅಥವಾ ಪುರುಷರ ಉಡುಪು

ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಒಂದು ಉಡುಪಿನ ಅಂಗಡಿಯನ್ನು ತೆರೆಯಬಹುದು. ಇದರಲ್ಲಿ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳ ಬಟ್ಟೆಗಳನ್ನು ಇಡುವುದರಿಂದ ಗ್ರಾಹಕರು ಆಕರ್ಷಿತರಾಗುತ್ತಾರೆ ಜತೆಗೆ ಒಳ್ಳೆಯ ಗಳಿಕೆ ಇದೆ

Kannada

5. ಹೂ ವ್ಯಾಪಾರ

ಹೂವಿನ ಅಲಂಕಾರ ಮತ್ತು ಉಡುಗೊರೆಗಾಗಿ ಹೂವಿನ ವ್ಯಾಪಾರ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಹೂಡಿಕೆ ಕಡಿಮೆ ಮತ್ತು ಲಾಭ ಹೆಚ್ಚು. ಹೂಗುಚ್ಛಗಳನ್ನು ತಯಾರಿಸುವ ಮೂಲಕ ಉತ್ತಮ ಗಳಿಕೆ ಮಾಡಬಹುದು.

Kannada

6. ಪೂಜಾ ಸಾಮಗ್ರಿಗಳು

ಹಬ್ಬಗಳ ಜೊತೆಗೆ ಪ್ರತಿದಿನ ಪೂಜೆ ಮತ್ತು ಹವನ ಸಾಮಗ್ರಿಗಳ ಅವಶ್ಯಕತೆ ಇರುತ್ತದೆ. ಹಬ್ಬಗಳಲ್ಲಿ ಉತ್ತಮ ಗಳಿಕೆ ಇರುತ್ತದೆ. ಅನೇಕ ದೇವಾಲಯಗಳಿಗೂ ಸರಬರಾಜು ಮಾಡಬಹುದು. ಈ ವ್ಯಾಪಾರ 1 ಲಕ್ಷದೊಳಗೆ ಪ್ರಾರಂಭವಾಗುತ್ತದೆ.

Kannada

7. ಬ್ಯೂಟಿ ಪಾರ್ಲರ್

1 ಲಕ್ಷ ಹೂಡಿಕೆ ಮಾಡಿ ನಿಮ್ಮ ಸ್ವಂತ ಬ್ಯೂಟಿ ಪಾರ್ಲರ್ ತೆರೆಯಬಹುದು. ಮೇಕಪ್, ಹೇರ್‌ಸ್ಟೈಲ್ ಅತ್ಯಂತ ಜನಪ್ರಿಯ ವ್ಯಾಪಾರವಾಗಿದೆ. ಇದನ್ನು ಗಳಿಕೆಯೊಂದಿಗೆ ಹೆಚ್ಚಿಸಬಹುದು. 

Kannada

8. ತಿಂಡಿ ಮತ್ತು ಜ್ಯೂಸ್ ಕಾರ್ನರ್

ಫಾಸ್ಟ್ ಫುಡ್ ಅಥವಾ ಜ್ಯೂಸ್ ಕಾರ್ನರ್ ವ್ಯಾಪಾರವನ್ನು ಒಂದು ಲಕ್ಷ ರೂಪಾಯಿಗಳಲ್ಲಿ ತೆರೆಯಬಹುದು. ಯಾವುದೇ ಕಚೇರಿ ಅಥವಾ ಶಾಲಾ-ಕಾಲೇಜು, ಆಸ್ಪತ್ರೆ ಅಥವಾ ವಸತಿ ಪ್ರದೇಶದ ಬಳಿ ಈ ಶಾಪ್ ಉತ್ತಮ ಗಳಿಕೆಯನ್ನು ನೀಡಬಹುದು.

Kannada

9. ಡ್ರೈವಿಂಗ್ ಸ್ಕೂಲ್

ಇತ್ತೀಚಿನ ದಿನಗಳಲ್ಲಿ ಜನರು ಚಾಲನೆ ಕಲಿಯಲು ಚಾಲನಾ ಶಾಲೆಗೆ ಹೋಗಲು ಇಷ್ಟಪಡುತ್ತಾರೆ. ಇದಕ್ಕಾಗಿ ಹೊಸ ಕಾರನ್ನು ಖರೀದಿಸುವ ಅಗತ್ಯವಿಲ್ಲ. ಒಂದು ಲಕ್ಷ ರೂಪಾಯಿಗಳಲ್ಲಿ ಈ ವ್ಯಾಪಾರವನ್ನು ಪ್ರಾರಂಭಿಸಬಹುದು.

Kannada

10. ಅಡುಗೆ ತರಗತಿಗಳು

ನೀವು ಅಡುಗೆ ತರಗತಿಗಳನ್ನು ಸಹ ಪ್ರಾರಂಭಿಸಬಹುದು. ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಜನರಿಗೆ ಕೆಲಸ ಕಲಿಸಬಹುದು, ಇದರಿಂದ ಅವರು ಮನೆಯಲ್ಲಿ ತಮ್ಮಿಷ್ಟದ ಆಹಾರವನ್ನು ತಯಾರಿಸಬಹುದು. 

Kannada

11. ಫುಡ್ ಸರ್ವೀಸ್

1 ಲಕ್ಷ ರೂಪಾಯಿಗಳಲ್ಲಿ ಫುಡ್‌ ಸರ್ವೀಸ್ ವ್ಯಾಪಾರ ಮಾಡಬಹುದು. ನೀವು ಬಯಸಿದರೆ ಟಿಫಿನ್ ಸೇವೆಯನ್ನು ಸಹ ಪ್ರಾರಂಭಿಸಬಹುದು. ಪಾರ್ಟಿಗಳಿಗೆ ಆರ್ಡರ್‌ಗಳನ್ನು ಸಹ ತೆಗೆದುಕೊಳ್ಳಬಹುದು. ಬಂಡವಾಳ 50 ಸಾವಿರದಿಂದ ₹1 ಲಕ್ಷ ಸಾಕು  

Kannada

12. ನೃತ್ಯ ಅಥವಾ ಗಾಯನ ಕ್ಲಾಸ್

ನೃತ್ಯ ಅಥವಾ ಗಾಯನ ತರಗತಿಗಳಿಗೆ ಇಂದು ಹೆಚ್ಚಿನ ಬೇಡಿಕೆ ಇದೆ. ಇದರಲ್ಲಿ ಉತ್ತಮ ಗಳಿಕೆಯೂ ಇದೆ. ನಿಮಗೆ ಈ ಎರಡೂ ಕೌಶಲ್ಯಗಳು ಬಂದರೆ ಒಂದು ಕೋಣೆಯಲ್ಲಿ ಸಂಗೀತ ವ್ಯವಸ್ಥೆಯೊಂದಿಗೆ ಕಡಿಮೆ ಹೂಡಿಕೆಯಲ್ಲಿ ಪ್ರಾರಂಭಿಸಬಹುದು.

Kannada

13. ಕೊರಿಯರ್ ಸೇವೆ

ಬ್ಯಾಂಕ್‌ಗಳು, ದಿನಸಿ ಅಂಗಡಿಗಳು, ಆನ್‌ಲೈನ್ ಶಾಪಿಂಗ್ ಗ್ರಾಹಕರಿಗೆ ಮನೆ ಬಾಗಿಲಿಗೆ ತಲುಪಿಸುವ ಸೇವೆಯನ್ನು ನೀಡುತ್ತವೆ. ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಸ್ವಂತ ಕೊರಿಯರ್ ಸೇವೆಯನ್ನು ಪ್ರಾರಂಭಿಸಬಹುದು.

Kannada

14. ತೋಟಗಾರಿಕೆ

ತೋಟಗಾರಿಕೆಯೂ ಒಂದು ಉತ್ತಮ ಮತ್ತು ಜನಪ್ರಿಯ ವ್ಯಾಪಾರವಾಗಿದೆ. ಇದನ್ನು 50 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗೆ ಪ್ರಾರಂಭಿಸಬಹುದು. ನೀವು ಸಸ್ಯಗಳ ನರ್ಸರಿಯನ್ನು ಸಹ ಪ್ರಾರಂಭಿಸಿ ಉತ್ತಮ ಗಳಿಕೆ ಮಾಡಬಹುದು.

Kannada

15. ಟೈಲರಿಂಗ್

ಟೈಲರಿಂಗ್ ಕೆಲಸ ಬಂದರೆ ಉತ್ತಮ ಗಳಿಕೆ ಮಾಡಬಹುದು. ಇದರಲ್ಲಿ ಸ್ವಲ್ಪ ಬುದ್ಧಿವಂತಿಕೆ ಬಳಸಿ ಬಟ್ಟೆ ಅಂಗಡಿಗಳಿಂದ ಕೆಲವು ಆರ್ಡರ್‌ಗಳನ್ನು ಪಡೆದು ಉತ್ತಮ ಹಣ ಗಳಿಸಬಹುದು.

ಟಿವಿಎಸ್, ವಿಪ್ರೊ, ಪಿವಿಆರ್‌: ಕೆಲ ಕಂಪನಿಗಳ ಪೂರ್ಣ ಹೆಸರು ಗೊತ್ತಾ?

ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುವ 10 ದೇಶ, ಭಾರತಕ್ಕಿದೆಯಾ ಸ್ಥಾನ?

ಪಿವಿಆರ್ ಫುಲ್ ಫಾರ್ಮ್ ಗೊತ್ತಾ? ಹಳ್ಳಿಯೊಂದಿಗೆ ಥಳಕು ಹಾಕಿ ಕೊಂಡಿದ್ದೇಕೆ ಈ ಹೆಸರು

ಆಲ್ಕೋಹಾಲ್‌ ಬ್ಯುಸಿನೆಸ್‌ ಮಾಡಿ ಯಶಸ್ವಿಯಾದ ಖ್ಯಾತ ನಟರು ಇವರು!