ತುಳಸಿ ಗಿಡದ 6 ಸೀಕ್ರೆಟ್ಸ್: ಸದಾ ಹಚ್ಚಹಸಿರಾಗಿಡಲು ಹೀಗೆ ಮಾಡಿ
astrology Feb 20 2026
Author: Chethan Kumar Image Credits:Getty
Kannada
ಚಳಿಗಾಲದಲ್ಲಿ ತುಳಸಿ ಆರೈಕೆ ಹೇಗೆ?
ಚಳಿಗಾಲದಲ್ಲಿ ಇಬ್ಬನಿ, ಹಿಮದಿಂದ ಗಿಡ ಹಾಳಾಗುತ್ತವೆ. ನಿಮ್ಮ ತುಳಸಿ ಗಿಡ ಒಣಗುತ್ತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ.
Image credits: Getty
Kannada
ಗಿಡಕ್ಕೆ ಬೆಲ್ಲದ ನೀರು ಹಾಕಿ
ತುಳಸಿ ಗಿಡವನ್ನು ಸೂರ್ಯನ ಬಿಸಿಲು ಬೀಳುವ ಜಾಗದಲ್ಲಿ ಇಡಿ. 15 ದಿನಕ್ಕೊಮ್ಮೆ, ಒಂದು ಲೀಟರ್ ನೀರಿಗೆ 1 ಚಮಚ ಬೆಲ್ಲ ಹಾಕಿ ಕುದಿಸಿ, ತಣ್ಣಗಾದ ಮೇಲೆ ಗಿಡಕ್ಕೆ ಹಾಕಿ. ಇದು ಬೇರು ಬಲಪಡಿಸುತ್ತದೆ.
Image credits: Getty
Kannada
ಬೇವಿನ ಹಿಂಡಿ ಪುಡಿ ಬಳಸಿ
ಚಳಿಗಾಲದಲ್ಲಿ ಗಿಡಗಳಿಗೆ ಕೀಟ ಮತ್ತು ಫಂಗಸ್ ಸಮಸ್ಯೆ ಸಾಮಾನ್ಯ. ಪ್ರತಿ 20 ದಿನಕ್ಕೆ 1 ಚಮಚ ಬೇವಿನ ಹಿಂಡಿ ಪುಡಿಯನ್ನು ಗಿಡದ ಬುಡಕ್ಕೆ ಹಾಕಿ.ಗಿಡ ಆರೋಗ್ಯವಾಗಿರುತ್ತದೆ.
Image credits: Getty
Kannada
ಮರದ ಬೂದಿ ಬಳಸಿ ನೋಡಿ
ತುಳಸಿ ಎಲೆಗಳು ಒಣಗುವ ಹಂತದಲ್ಲಿದ್ದರೆ, ಗಿಡದ ಮಣ್ಣಿಗೆ 1/3 ಚಮಚ ಮರದ ಬೂದಿಯನ್ನು ಬೆರೆಸಿ. ಇದರಿಂದ 10 ಡಿಗ್ರಿ ತಾಪಮಾನದಲ್ಲೂ ಎಲೆಗಳು ಹಚ್ಚಹಸಿರಾಗಿ ಕಾಣಿಸುತ್ತವೆ.
Image credits: Getty
Kannada
ಹಸಿ ಹಾಲು ಅಥವಾ ಮಜ್ಜಿಗೆ ನೀರು
ತುಳಸಿ ಗಿಡವನ್ನು ಆರೋಗ್ಯವಾಗಿಡಲು ಹಸಿ ಹಾಲು ಅಥವಾ ಮಜ್ಜಿಗೆ ನೀರ ಬಳಸಿ 1:5 ಅನುಪಾತದಲ್ಲಿ (ಒಂದು ಭಾಗ ಹಾಲು, ಐದು ಭಾಗ ನೀರು) ಮಿಶ್ರಣ ಮಾಡಿ. 15 ದಿನಕ್ಕೊಮ್ಮೆ ಇದನ್ನು ಬಳಸಿ.
Image credits: Getty
Kannada
ತುಳಸಿ ಮಣ್ಣಿಗೆ ಸ್ವಲ್ಪ ಸುಣ್ಣ ಬೆರೆಸಿ
ತುಳಸಿ ಗಿಡದ ಮಣ್ಣಿನ ಪಿಎಚ್ (pH) ಮಟ್ಟದಲ್ಲಿ ವ್ಯತ್ಯಾಸವಾದರೂ ಎಲೆಗಳು ಹಳದಿಯಾಗಿ ಉದುರುತ್ತವೆ. ಇದನ್ನು ಸರಿಪಡಿಸಲು ತಿಂಗಳಿಗೊಮ್ಮೆ ಮಣ್ಣಿಗೆ ಸ್ವಲ್ಪ ಸುಣ್ಣವನ್ನು ಬೆರೆಸಿ.
Image credits: Getty
Kannada
ಚಳಿಗಾಲದಲ್ಲಿ ಗಿಡದ ಆರೈಕೆಗೆ ಇತರೆ ಟಿಪ್ಸ್
ಮಣ್ಣು ಒಣಗಿದಾಗ ಮಾತ್ರ ನೀರು ಹಾಕಿ.
ದಾಲ್ಚಿನಿ (ಚಕ್ಕೆ) ಮತ್ತು ಬೇಯಿಸಿದ ಕಡಲೆಕಾಳಿನ ನೀರನ್ನು ನೀಡಿ. ಇದರಿಂದ ಗಿಡಕ್ಕೆ ಪೊಟ್ಯಾಶಿಯಂ ಮತ್ತು ನೈಟ್ರೋಜನ್ ಸಿಗುತ್ತದೆ.