Astrology

ಫೋನ್ ವಾಲ್‌ಪೇಪರ್ ಬದಲಿಸುತ್ತದೆ ನಿಮ್ಮ ಭವಿಷ್ಯ

ಜೀವನದ ಏರಿಳಿತಗಳಿಗೆ ನಮ್ಮ ತಪ್ಪು ಮಾತ್ರವಲ್ಲ, ವಾಸ್ತುದೋಷ ಕಾರಣವಿರುತ್ತೆ ಅಂತಾರೆ. ನಿಮ್ಮ ಮೊಬೈಲ್‌ನಲ್ಲಿ ನಿರ್ದಿಷ್ಟ ರೀತಿಯ ವಾಲ್‌ಪೇಪರ್ ಹಾಕಿದರೆ ನಿಮ್ಮ ಮನಸು, ಜೀವನ ಹೇಗೆ ಬದಲಾಯಿತ್ತೆ ಅನ್ನೋದು ಇಲ್ಲಿ ತಿಳಿಯೋಣ.

ಈ ರೀತಿಯ ವಾಲ್‌ಪೇಪರ್ ನಿಮ್ಮ ಅದೃಷ್ಟ ಬದಲಿಸುತ್ತದೆ

ಜೈ ಮಾದನ್ ಪ್ರಕಾರ, ಸರಿಯಾದ ವಾಲ್‌ಪೇಪರ್ ಆಯ್ಕೆ ಮಾಡುವ ಮೂಲಕ ನೀವು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಸಂಕಷ್ಟದಿಂದ ರಕ್ಷಣೆ, ವೃತ್ತಿಜೀವನದ ಪ್ರಗತಿ, ಮತ್ತು ಸಂಬಂಧದಲ್ಲಿ ಮಾಧುರ್ಯ, ಎಲ್ಲವೂ ಸಾಧ್ಯ!

ಸಂಕಷ್ಟ ನಿವಾರಣೆಗೆ ಬಜರಂಗಬಲಿಯ ಚಿತ್ರ

ದೇವರ ಕೃಪೆ ಮತ್ತು ರಕ್ಷಣೆ ಬೇಕೆಂದರೆ ಕೈಯಲ್ಲಿ ಗದಾ ಹಿಡಿದು ಆಶೀರ್ವಾದ ನೀಡುವ ಬಜರಂಗಬಲಿಯ ಚಿತ್ರವನ್ನು ವಾಲ್‌ಪೇಪರ್‌ನಲ್ಲಿ ಹಾಕಿ. ಇದು ಸಂಕಷ್ಟಗಳಿಂದ ರಕ್ಷಿಸಿ ಜೀವನದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.

ಯಶಸ್ಸು ಮತ್ತು ಬೆಳವಣಿಗೆಗೆ ಮೆಟ್ಟಿಲುಗಳು

ಶಿಸ್ತು ಮತ್ತು ಬೆಳವಣಿಗೆಯ ಕೊರತೆ ಅನುಭವಿಸುತ್ತಿದ್ದರೆ, ವಾಲ್‌ಪೇಪರ್‌ನಲ್ಲಿ ಮೆಟ್ಟಿಲುಗಳನ್ನು ಹತ್ತುವ ವ್ಯಕ್ತಿಯ ಚಿತ್ರವನ್ನು ಹಾಕಿ. ಇದು ಶಿಸ್ತು ಮತ್ತು ಪ್ರಗತಿಯ ಸಂಕೇತವಾಗಿದೆ.

ಸಂಘರ್ಷ ನಿವಾರಣೆಗೆ ಕೆಂಪು ಧ್ವಜ

ಜೀವನದಲ್ಲಿ ನಿರಂತರ ಸಂಘರ್ಷ ನಡೆಯುತ್ತಿದ್ದು ಯಶಸ್ಸು ಸಿಗುತ್ತಿಲ್ಲವೆಂದರೆ, ವಾಲ್‌ಪೇಪರ್‌ನಲ್ಲಿ ಕೆಂಪು ಧ್ವಜದ ಚಿತ್ರವನ್ನು ಹಾಕಿ. ಇದು ಗೆಲುವು ಮತ್ತು ಯಶಸ್ಸಿನ ಸಂಕೇತವಾಗಿದೆ.

ವೃತ್ತಿಜೀವನದ ವೇಗಕ್ಕಾಗಿ ಓಡುವ ಕುದುರೆಗಳು

ವೃತ್ತಿ ಅಥವಾ ಯಾವುದೇ ಕೆಲಸದಲ್ಲಿ ವೇಗವಿಲ್ಲದಿದ್ದರೆ, ಕಂದು ಬಣ್ಣದ ಓಡುವ ಕುದುರೆಯ ಚಿತ್ರವನ್ನು ವಾಲ್‌ಪೇಪರ್‌ನಲ್ಲಿ ಹಾಕಿ. ಇದು ಸಾಂಕೇತಿಕವಾಗಿ ಶಕ್ತಿ ಮತ್ತು ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪ್ರೇಮ ಜೀವನಕ್ಕೆ ಕೆಂಪು ಗುಲಾಬಿ

ನಿಮ್ಮ ಪ್ರೇಮ ಜೀವನ ಉತ್ತಮಪಡಿಸಿಕೊಳ್ಳಲು ಬಯಸಿದರೆ, ಫೋನ್‌ನ ವಾಲ್‌ಪೇಪರ್‌ನಲ್ಲಿ ಕೆಂಪು ಗುಲಾಬಿಯ ಚಿತ್ರವನ್ನು ಹಾಕಿ. ಇದು ಪ್ರೇಮ ಜೀವನದ ಸಕಾರಾತ್ಮಕ ಶಕ್ತಿ ತರುತ್ತದೆ ಮತ್ತು ಸಂಬಂಧದಲ್ಲ್ಇ ಮಾಧುರ್ಯ ಹೆಚ್ಚಿಸುತ್ತೆ.

ಕನಸಿನಲ್ಲಿ ಚಿನ್ನ ಕಂಡರೆ ಸಂಪತ್ತು ಪಡೆಯುವ ಸೂಚನೆ

ದಿನಕ್ಕೆ ಎಷ್ಟು ತಿನ್ನಬೇಕು ಗೊತ್ತಾ?

ಚಾಣಕ್ಯ ನೀತಿ: ಯಶಸ್ವಿ ನಾಯಕ ಎನ್ನಿಸಿಕೊಳ್ಳಲು ಈ 4 ಗುಣಗಳು ಇರುವುದು ಅವಶ್ಯ!

ಆಚಾರ್ಯ ಚಾಣಕ್ಯ ಹೇಳುವ ಪ್ರಕಾರ, ಈ 3 ವಿಷಯಗಳು ಹಣಕ್ಕಿಂತ ಮಿಗಿಲು!