Festivals
ಒಂದು ವೇಳೆ ಕನಸಿನಲ್ಲಿ ಚಿನ್ನಾಭರಣಗಳನ್ನು ಕಳೆದುಕೊಂಡಂತೆ ಕಂಡರೆ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ ಎಂದರ್ಥ. ಮುಖ್ಯವಾಗಿ ವ್ಯಾಪಾರದಲ್ಲಿ ನಷ್ಟಗಳು ಬರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ.
ಚಿನ್ನ ಸಿಕ್ಕಂತೆ ಕನಸಿನಲ್ಲಿ ಕಂಡರೆ ಒಳ್ಳೆಯದಕ್ಕೆ ಸಂಕೇತವೆಂದು ಭಾವಿಸಬೇಕು. ಆರ್ಥಿಕವಾಗಿ ನೀವು ಊಹಿಸದ ರೀತಿಯಲ್ಲಿ ಲಾಭ ಪಡೆಯಲಿದ್ದೀರಿ ಎಂದು ಅರ್ಥಮಾಡಿಕೊಳ್ಳಬೇಕು.
ಒಂದು ವೇಳೆ ಶರೀರದ ಮೇಲೆ ಚಿನ್ನವನ್ನು ಧರಿಸಿದಂತೆ ಕನಸಿನಲ್ಲಿ ಕಂಡರೆ. ನಿಮಗೆ ಹೆಚ್ಚುವರಿ ಜವಾಬ್ದಾರಿ ಬರಲಿದೆ ಎಂದು ಅರ್ಥಮಾಡಿಕೊಳ್ಳಬೇಕು. ಉದ್ಯೋಗಿಗಳಿಗೆ ಬಡ್ತಿ ಬರಲಿದೆ ಎಂದು ಭಾವಿಸಬೇಕು.
ಚಿನ್ನ ಒಂದೆಡೆ ರಾಶಿಯಾಗಿ ಹಾಕಿದಂತೆ ಕಂಡರೆ ನಿಮಗೆ ಖರ್ಚುಗಳು ಹೆಚ್ಚಾಗಲಿವೆ ಎಂದರ್ಥ. ಏನೋ ಕಾರಣದಿಂದ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಚಿನ್ನ ನೆಲದ ಮೇಲೆ ಬಿದ್ದಂತೆ ಕಂಡರೆ ಅದು ಅಶುಭವೆಂದು ಭಾವಿಸಬೇಕು ಎನ್ನುತ್ತಾರೆ. ಈ ಕನಸು ಬಂದರೆ ಆರ್ಥಿಕವಾಗಿ ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ ಎಂದು ಅರ್ಥಮಾಡಿಕೊಳ್ಳಬೇಕು.
ಒಂದು ವೇಳೆ ಚಿನ್ನ ಖರೀದಿಸುತ್ತಿರುವಂತೆ ಕಂಡರೆ ವೃತ್ತಿಜೀವನದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ ಎಂದು ಅರ್ಥಮಾಡಿಕೊಳ್ಳಬೇಕು. ಇದು ಕೂಡ ಶುಭ ಸೂಚಕವೆಂದು ಭಾವಿಸಬೇಕು.
ಮೇಲೆ ತಿಳಿಸಿದ ವಿಷಯಗಳು ಕೇವಲ ಪಂಡಿತರು, ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಅಂಶಗಳ ಆಧಾರದ ಮೇಲೆ ನೀಡಿರುವುದು ಮಾತ್ರ. ಇವುಗಳಲ್ಲಿ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂಬುದನ್ನು ಗಮನಿಸಬೇಕು.