Kannada

ಕಪ್ಪು ದಾರದಲ್ಲಿ ಕಾಲಿನ ಅಂದ!

ಡೋರಾ ಸಿಲ್ವರ್ ಪಾಯಲ್‌ನ 6 ಲೇಟೆಸ್ಟ್ ಡಿಸೈನ್ಸ್. ಯಾರ ದೃಷ್ಟಿಯೂ ಬೀಳದಿರಲಿ ನಿಮ್ಮ ಮೇಲೆ. ಈ ಕಪ್ಪು ದಾರ ಕೆಟ್ಟದ್ದರಿಂದ ನಿಮ್ಮನ್ನು ದೂರವಿಡುತ್ತದೆ. 

Kannada

ಬ್ಲ್ಯಾಕ್ ಡೋರಾ ಪಾಯಲ್

ಬೆಳ್ಳಿ ಪಾಯಲ್ ಅಥವಾ ಗೆಜ್ಜೆಯನ್ನು ಎಲ್ಲರೂ ಧರಿಸುತ್ತಾರೆ. ಆದರೆ ಬಜೆಟ್‌ಗೆ ಹೊರೆಯಾಗದ, ಸಖತ್ ಸ್ಟೈಲಿಶ್ ಲುಕ್ ಕೊಡುವ ಆಯ್ಕೆ ಬಗ್ಗೆ ಯೋಚಿಸಿದ್ದೀರಾ? ನಾವಿಂದು ನಿಮಗಾಗಿ ಕಡಿಮೆ ಬೆಲೆಯಲ್ಲಿ ಬೋಲ್ಡ್ ಲುಕ್ ನೀಡುತ್ತದೆ.

Image credits: instagram- khushbu_jewellers_1
Kannada

ಡೋರಾ ಪಾಯಲ್ ಡಿಸೈನ್

ಡೋರಾ ಪಾಯಲ್ ಅನ್ನು ಕಪ್ಪು ದಾರ ಮತ್ತು ಮಣಿಗಳಿಂದ ಮಾಡಲಾಗಿರುತ್ತದೆ. ಇದರಲ್ಲಿ ಕಪ್ಪು ಮಣಿ ನಡುವೆ ಸಣ್ಣ ಸಣ್ಣ ಬೆಳ್ಳಿ ಬೀಡ್ಸ್‌ನು ಪೋಣಿಸಲಾಗಿರುತ್ತದೆ. ಜೊತೆಗೆ ಲಾಬ್‌ಸ್ಟರ್ ಚೈನ್ ಹುಕ್ ಲಾಕ್ ಇರುವುದರಿಂದ ಇದು ಸೇಫ್.

Image credits: instagram- khushbu_jewellers_1
Kannada

ಬ್ಲ್ಯಾಕ್ ಬೀಡ್ ಪಾಯಲ್

ದೃಷ್ಟಿ ತಾಗಬಾರದು ಎನ್ನುವವರು ಕಪ್ಪು ಮಣಿ ಅಥವಾ ದಾರದಲ್ಲಿರುವ ಇಂತಹ 'ಈವಿಲ್ ಐ' ಬ್ಲ್ಯಾಕ್ ಬೀಡ್ ಪಾಯಲ್ ಧರಿಸಬಹುದು. ಇದು ನೋಡಲು ಫ್ರೆಶ್ ಲುಕ್ ನೀಡುವುದಲ್ಲದೆ, ಧರಿಸಲು ಆರಾಮು. ನಡು ವಯಸ್ಸಿನವರಿಗೂ ಇದು ಬೆಸ್ಟ್.

Image credits: instagram- khushbu_jewellers_1
Kannada

ಮುತ್ತು-ಗೆಜ್ಜೆ ಡೋರಾ ಪಾಯಲ್

ಗೆಜ್ಜೆ ಇಲ್ಲದ ಪಾಯಲ್ ಅಪೂರ್ಣ ಎನಿಸುತ್ತದೆ. ನಿಮಗೂ ಗೆಜ್ಜೆಯ ಸದ್ದು ಇಷ್ಟವಾದರೆ, ಕಪ್ಪು ಮಣಿ ಮೇಲೆ ಬೆಲ್ ಪ್ಯಾಟರ್ನ್ ಇರುವ ಈ ಡೋರಾ ಪಾಯಲ್ ಖರೀದಿಸಿ. ಇದು ಸುಮಾರು 4 ಸಾವಿರ ರೂಪಾಯಿವರೆಗೆ ಬೆಲೆ ಬಾಳುತ್ತದೆ.

Image credits: instagram- khushbu_jewellers_1
Kannada

ಗೆಜ್ಜೆ ಡೋರಾ ಪಾಯಲ್

ಮದುವೆಯಾದ ಮಹಿಳೆಯರು ಶೃಂಗಾರ ಮತ್ತು ಫ್ಯಾಷನ್ ಎರಡನ್ನೂ ಒಟ್ಟಿಗೆ ಕ್ಯಾರಿ ಮಾಡಲು ಈ ಗೆಜ್ಜೆ ಧರಿಸಬಹುದು. ಇದು ನೋಡಲು ತುಂಬಾ ವಿಶಿಷ್ಟವಾಗಿ ಕಾಣುತ್ತದೆ. ನಿಮ್ಮ ಪಾದ ಇನ್ನಷ್ಟು ಆಕರ್ಷಕವಾಗಿ ಕಾಣಬೇಕೆಂದರೆ ಇದು ಚಂದ.

Image credits: instagram- hub_jewellery_darbar
Kannada

ದಾರದ ಡೋರಾ ಪಾಯಲ್

ಕಪ್ಪು ದಾರದ ಈ ಗೆಜ್ಜೆ ದಿನನಿತ್ಯದ ಬಳಕೆಗೆ ಹೇಳಿ ಮಾಡಿಸಿದ್ದು. ಇದರಲ್ಲಿರುವ ಸಣ್ಣ ಮಣಿ ಡಿಸೈನ್ ತುಂಬಾನೇ ವಿಶಿಷ್ಟ. ಅಕ್ಕಸಾಲಿಗರ ಬಳಿ ಬೆಳ್ಳಿಯ ಡೀಟೇಲಿಂಗ್ ಇರುವ ಈ ಗೆಜ್ಜೆ 2000 ರೂ.ಗೆ ಸಿಗುತ್ತದೆ.

Image credits: instagram- hub_jewellery_darbar
Kannada

ಹೊಸ 'ಈವಿಲ್ ಐ' ಪಾಯಲ್

ಸರಳತೆ ಮತ್ತು ಸೌಂದರ್ಯ ಎರಡನ್ನೂ ನೀಡುವ ಈ 'ನಜರಿಯಾ' ಪಾಯಲ್ ತುಂಬಾ ವಿಶಿಷ್ಟವಾಗಿದೆ. ಇದರಲ್ಲಿ ಕಪ್ಪು ಮಣಿ ಜೊತೆಗೆ ಬಳೆಗಳಂತಹ ಡಿಸೈನ್ ಇದ್ದು, 'ಈವಿಲ್ ಐ' ಮಣಿ ಇದನ್ನು ಇನ್ನಷ್ಟು ಆಕರ್ಷಕವಾಗಿಸಿದೆ.

Image credits: instagram- hub_jewellery_darbar
Kannada

ದಾರದ ಗೆಜ್ಜೆ ವಿಶೇಷತೆಗಳೇನು?

  • ಡೋರಾ ಪಾಯಲ್‌ಗಳು ಧರಿಸಲು ತುಂಬಾ ಆರಾಮ.
  • ಬಾಳಿಕೆ ಮತ್ತು ಗಟ್ಟಿತನದಲ್ಲಿ ನಂಬರ್ ಒನ್.
  • ಕಾಲೇಜಿನಿಂದ ಹಿಡಿದು ಆಫೀಸ್‌ವರೆಗೂ ಧರಿಸಬಹುದು.
  • 925 ಸಿಲ್ವರ್‌ಗೆ ಹೋಲಿಸಿದರೆ ಬೆಲೆ ಕಡಿಮೆ.
  • ವರ್ಷಗಳ ಕಾಲ ಇದರ ಹೊಳಪು ಮಾಸುವುದಿಲ್ಲ.
Image credits: instagram- hub_jewellery_darbar

ಚಾಣಕ್ಯ ನೀತಿ: 8 ಗುಣಗಳಿರೋ ವ್ಯಕ್ತಿ ಖಂಡಿತ ಒಳ್ಳೆಯವನು

ಮದುವೆ ದಿನ ಮಳೆ ಬಂದ್ರೆ ಒಳ್ಳೇದಾ? ಕೆಟ್ಟದ್ದಾ?

Tulsi Plant: ತುಳಸಿ ಗಿಡ ಚಳಿಗಾಲದಲ್ಲೂ ಸದಾ ಹಸಿರಾಗಿರಲು ಇಲ್ಲಿದೆ 6 ಸೀಕ್ರೆಟ್

ಲಕ್ಕಿ ಬ್ಯಾಂಬೂದಿಂದ ಮನಿ ಪ್ಲಾಂಟ್‌ವರೆಗೆ; ಸಂಪತ್ತು- ಸಮೃದ್ಧಿ ತರುವ 7 ಗಿಡಗಳಿವು!