ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ಮೇಜರ್ ಟ್ವಿಸ್ಟ್ : ರೋಹಿಣಿ ಸಿಂಧೂರಿ ಬಗ್ಗೆ ಸಿಂಹ ಆರೋಪ..?
- ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
- ಆಕ್ಸಿಜನ್ ಪೂರೈಕೆಗೆ ಅಡ್ಡಿಯಾಗಿತ್ತಾ ರೋಹಿಣಿ ಸಿಂಧೂರಿಯ ಓರಲ್ ಇನ್ಸ್ಟ್ರಕ್ಷನ್ ..?
- ಪರೋಕ್ಷ ಆರೋಪ ಮಾಡಿದ ಸಂಸದ ಪ್ರತಾಪ್ ಸಿಂಹ
ಚಾಮರಾಜನಗರ (ಜೂ.06): ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣ ನಡೆದು ತಿಂಗಳಾಗಿದ್ದು ಈ ವೇಳೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮೇ 2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಮೃತಪಟ್ಟಿದ್ದು, ಆಕ್ಸಿಜನ್ ಪೂರೈಕೆಗೆ ಅಡ್ಡಿಯಾಗಿತ್ತು ರೋಹಿಣಿ ಸಿಂಧೂರಿಯ ಓರಲ್ ಇನ್ಸ್ಟ್ರಕ್ಷನ್ ಎಂದು ಪರೋಕ್ಷ ಆರೋಪ ಮಾಡಲಾಗಿದೆ.
ರೋಹಿಣಿ, ಶಿಲ್ಪಾನಾಗ್ ಇಬ್ಬರೂ ಎತ್ತಂಗಡಿ! .
ಅಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರವಾಗಿ ಬ್ಯಾಟಿಂಗ್ ಮಾಡಿದ್ದ ಪ್ರತಾಪ್ ಸಿಂಹ ಈಗ ರೋಹಿಣಿ ಸಿಂಧೂರಿ ವಿರುದ್ದ ತಿರುಗಿಬಿದಿದ್ದಾರೆ. ಫೇಸ್ ಬುಕ್ ಲೈವ್ ನಲ್ಲಿ ಆಕ್ಸಿಜನ್ ಕೊರತೆಗೆ ಕಾರಣ ಬಿಚ್ಚಿಟ್ಟಿರುವ ಸಂಸದ ಪ್ರತಾಪ್ ಸಿಂಹ, ಚಾಮರಾಜನಗರಕ್ಕೆ ಆಕ್ಸಿಜನ್ ಕೊಡದಿರಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಓರಲ್ ಇನ್ಸ್‌ಟ್ರಕ್ಷನ್ ಇತ್ತೆಂಬ ಅರ್ಥದ ಹೇಳಿಕೆ ನೀಡಿದ್ದಾರೆ.