Asianet Suvarna News Asianet Suvarna News

35 ವಯಸ್ಸಾದ್ರೂ ಯುವಕರನ್ನೇ ಮೀರಿಸುವ ಟಾಪ್ 4 ಆಟಗಾರರಿವರು..!

IPL 2020ರ ಟೂರ್ನಿಯಲ್ಲಿ ಪಂದ್ಯದ ಫಲಿತಾಂಶವನ್ನೇ ಬದಲಾಯಿಸಬಲ್ಲ 35 ವಯಸ್ಸು ಮೀರಿದ ಟಾಪ್ 4 ಆಟಗಾರರ ಪಟ್ಟಿ ಇಲ್ಲಿದೆ ನೋಡಿ...

ಬೆಂಗಳೂರು(ಫೆ.17): ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಇದೀಗ ಚುಟುಕು ಕ್ರಿಕೆಟ್‌ ಸಂಗ್ರಾಮದ ವೇಳಾಪಟ್ಟಿ ಸಹಾ ಬಿಡುಗಡೆಯಾಗಿದ್ದು, ಪಂದ್ಯವನ್ನು ಎಂಜಾಯ್ ಮಾಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಹೊಸ ಅವತಾರ, ಈ ಬಾರಿಯಾದ್ರೂ RCB ಮಾಡುತ್ತಾ ಚಮತ್ಕಾರಾ?

ಐಪಿಎಲ್ ಟಿ20 ಟೂರ್ನಿ ಹೇಳಿ-ಕೇಳಿ ಬಿಸಿ ರಕ್ತದ ಯುವಕರ ಕ್ರೀಡೆ ಎನಿಸಿಕೊಂಡಿದೆ. ಇಲ್ಲಿ 35+ ಆಟಗಾರರ ಆಟ ನಡೆಯೊಲ್ಲ ಎಂದು ಮೂಗು ಮುರಿಯುವವರೇ ಜಾಸ್ತಿ. ಆದರೆ 2020ರಲ್ಲಿ ಮಿಂಚು ಹರಿಸಲು ನಾಲ್ವರು ಆಟಗಾರರು ರೆಡಿಯಾಗಿದ್ದಾರೆ.

IPL ಟೂರ್ನಿಗೂ ಮುನ್ನ ಹೊಸ ಲೋಗೋ ಅನಾವರಣ ಮಾಡಿದ RCB

ಹೌದು, ಈ ನಾಲ್ವರು ಆಟಗಾರರು ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...