Asianet Suvarna News Asianet Suvarna News

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಂದಿನಿಂದ ಆರಂಭವಾಗಬೇಕಿತ್ತು IPL 2020

ಭಾರತ ಲಾಕ್‌ಡೌನ್ ಆಗಿರುವುದರಿಂದ ಕ್ರಿಕೆಟಿಗರೆಲ್ಲಾ ಇದೀಗ ವಿಶ್ರಾಂತಿ ಮೂಡ್‌ನಲ್ಲಿದ್ದಾರೆ. ಯಾವೆಲ್ಲ ಕ್ರಿಕೆಟಿಗರು ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಹೇಗೆಲ್ಲಾ ಕಾಲ ಕಳೆಯುತ್ತಿದ್ದಾರೆ ಎನ್ನುವುದನ್ನು ನೀವೊಮ್ಮೆ ನೋಡಿ. 
 

ಬೆಂಗಳೂರು(ಮಾ.29): ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಂದಿನಿಂದ ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಬೇಕಿತ್ತು. ಆದರೆ ಕೊರೋನಾ ವೈರಸ್ ಭೀತಿಯಿಂದಾಗಿ ಚುಟುಕು ಕ್ರಿಕೆಟ್ ಟೂರ್ನಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ.

ಕೊರೋನಾ ಎಫೆಕ್ಟ್: ಇಟಲಿ ಜನರ ಬದುಕಿಗೆ ಕೊಳ್ಳಿಯಿಟ್ಟ ಫುಟ್ಬಾಲ್ ಆಟ..!

ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ಭಾರತ ಲಾಕ್‌ಡೌನ್ ಘೋಷಿಸಿದ್ದಾರೆ. ಹೀಗಾಗಿ ದೇಶದಲ್ಲಿ ನಡೆಯಬೇಕಿದ್ದ ಎಲ್ಲಾ ಕ್ರೀಡಾಚಟುವಟಿಕೆಗಳು ಸ್ತಬ್ಧವಾಗಿವೆ. ಇನ್ನು ಈ ಬಾರಿ ಐಪಿಎಲ್ ಟೂರ್ನಿ ಕೂಡಾ ನಡೆಯುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕೊರೋನಾದಿಂದಾಗಿ ಆಟಗಾರರಿಗೆ ವಿಶ್ರಾಂತಿ ಸಿಗುತ್ತಿದೆ ಎಂದ ಕೋಚ್ ರವಿಶಾಸ್ತ್ರಿ

ಭಾರತ ಲಾಕ್‌ಡೌನ್ ಆಗಿರುವುದರಿಂದ ಕ್ರಿಕೆಟಿಗರೆಲ್ಲಾ ಇದೀಗ ವಿಶ್ರಾಂತಿ ಮೂಡ್‌ನಲ್ಲಿದ್ದಾರೆ. ಯಾವೆಲ್ಲ ಕ್ರಿಕೆಟಿಗರು ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಹೇಗೆಲ್ಲಾ ಕಾಲ ಕಳೆಯುತ್ತಿದ್ದಾರೆ ಎನ್ನುವುದನ್ನು ನೀವೊಮ್ಮೆ ನೋಡಿ. 
 

Video Top Stories