Asianet Suvarna News Asianet Suvarna News

Matrimonial Ad :ಬ್ರಾ ಸೈಜ್ 32B, ಸೊಂಟ 28, ವಯಸ್ಸು 26 ರೊಳಗಿನ ವಧು ಬೇಕಾಗಿದೆ ಪೋಸ್ಟ್ ವೈರಲ್

  • ಮ್ಯಾಟ್ರಿಮೋನಿಯಲ್ ಸೈಟಿನಲ್ಲಿ ನೀಡಿದ  ಜಾಹೀರಾತು ವೈರಲ್
  • ಎತ್ತರ, ತೂಕ ಸೇರಿ ನಿಖರ ಅಳತೆಯ ಹುಡುಗಿ ಬೇಕಾಗಿದೆ
  • ಮ್ಯಾಟ್ರಿಮೊನಿಯಲ್ ಸೈಟ್ ವಿರುದ್ಧ ಹೆಚ್ಚಾಯ್ತು ಆಕ್ರೋಶ
  • ಕ್ರಮಕ್ಕೆ ಮುಂದಾಗ ಮ್ಯಾಟ್ರಿಮೋನಿಯಲ್ ಸೈಟ್
Man seek bride through a matrimonial site demand specific bra hight waist size ad goes viral ckm
Author
Bengaluru, First Published Nov 22, 2021, 7:39 PM IST
  • Facebook
  • Twitter
  • Whatsapp

ನವದೆಹಲಿ(ನ.22): ವಧು ವರರ ಹುಡುಕಾಟಕ್ಕೆ ಭಾರತದಲ್ಲಿ ಮ್ಯಾಟ್ರಿಮೋನಿಯಲ್(Matrimonial) ಸೈಟ್ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಲವರು ತಮ್ಮ ಜೀವನ ಸಂಗಾತಿಯನ್ನು(Life partner) ಕಂಡುಕೊಂಡಿದ್ದಾರೆ. ವರ ಅಥವಾ ವಧು ಬೇಕಿರುವವರು ಸೈಟ್‌ಗೆ ಲಾಗಿನ್ ಆಗಿ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಆದರೆ ಇದೇ ಮ್ಯಾಟ್ರಿಮೋನಿಯಲ್‌ನಲ್ಲಿ ನೀಡಿದ ಜಾಹೀರಾತು ಇದೀಗ ಭಾರಿ ವೈರಲ್ ಆಗಿದೆ. ಜೊತೆಗೆ ಅಷ್ಟೇ ಆಕ್ರೋಶಕ್ಕೂ ಕಾರಣವಾಗಿದೆ. ಹುಡುಗಿಯ ಎತ್ತರ, ತೂಕ , ಬ್ರಾ ಸೈಜ್ ಸೇರಿದಂತೆ ಎಲ್ಲವನ್ನು ನಿಖರವಾಗಿ ಅಳೆದು ತೂಗಿ ದಾಖಲಿಸಿದ ಜಾಹೀರಾತು ಭಾರಿ ಸದ್ದು ಮಾಡುತ್ತಿದೆ.

ಮ್ಯಾಟ್ರಿಮೋನಿಯಲ್‌ನಲ್ಲಿ ವರ ಅಥವಾ ವಧು ಬೇಕಿರುವವರು ಕೆಲ ನಿರ್ದಿಷ್ಟ ಬೇಡಿಕೆಗೆಳನ್ನು(Demand) ಇಡುವುದು ಸಹಜ. ಉದ್ಯೋಗಿಯಾಗಿರಬೇಕು, ಕನಿಷ್ಠ ಡಿಗ್ರಿ ಆಗಿರಬೇಕು, ಮನೆತನೆಕ್ಕೆ ಹೊಂದಿಕೊಳ್ಳಬೇಕು, ಬೆಳ್ಳಗೆ ಇರಬೇಕು, ತೆಳ್ಳಗೆ ಇರಬೇಕು ಸೇರಿದಂತೆ ಹಲವು ಬೇಡಿಕೆಗಳಿರುವುದು ಸಹಜ. ಆದರೆ ಈತನ ಬೇಡಿಕೆಗೆ ತಕ್ಕ ಹೆಣ್ಣು ಇದ್ದಾಳೋ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. ಕಾರಣ ಎಲ್ಲವೂ ಅಳತೆ ಮೂಲಕ ಇಷ್ಟೇ ಇರಬೇಕು ಎಂದು ಹಾಕಲಾಗಿದೆ. 

ಮ್ಯಾಟ್ರಿಮೋನಿಯಲ್/ಡೇಟಿಂಗ್ ಸೈಟ್‌ನ ಪ್ರೊಫೈಲ್ ಫೋಟೋ ಹೀಗ್ ಹಾಕ್ಬೇಡಿ!

ನಾನು ಮದುವೆಯಾಗಲು(Marriage) ಹುಡುಗಿ ಹುಡುಕುತ್ತಿದ್ದೇನೆ. ಮದುವೆಯಾಗುವ ಹುಡುಗಿ ಎತ್ತರ 5.2 ನಿಂದ 5.6 ಇರಬೇಕು. ಬ್ರಾ ಸೈಜ್ 32 ಬಿ ಯಿಂದ 32 ಸಿ ಒಳಗಿರಬೇಕು, ಸೊಂಟದ ಸೈಜ್ 12 ರಿಂದ 16 ಒಳಗಿರಬೇಕು. ವಯಸ್ಸು 18 ರಿಂದ 26ರ ಒಳಗಿರಬೇಕು. ಅಹಂಕಾರವಿರಬಾರದು.  ಹಸ್ತಾಲಂಕಾರ ಮಾಡಿದ, ಸ್ವಚ್ಚ ಪಾದಗಳನ್ನು ಹೊಂದಿರಬೇಕು. ಹುಡುಗಿಯ ಉಡುಪುಗಳು ಶೇಕಡಾ 80 ಕ್ಯಾಶ್ಯುಲ್ ಹಾಗೂ ಶೇಕಡಾ 20 ರಷ್ಟು ಫಾರ್ಮಲ್ ಆಗಿರಬೇಕು. ಬೆಡ್‌ರೂಂನಲ್ಲೂ ವೇಷಭೂಣಗಳನ್ನು ಧರಿಸಬೇಕು. ನಂಬಲರ್ಹವಾಗಿರಬೇಕು, ಚಲನಚಿತ್ರ, ಪ್ರವಾಸ ಮಾಡುವಂತಿರಬೇಕು, ಮಕ್ಕಳು ಬೇಡ, ನಾಯಿಯನ್ನು ಪ್ರೀತಿಸಬೇಕು. ಕುಟುಂಬಕ್ಕೆ ಹೊಂದಿಕೊಳ್ಳಬೇಕು ಎಂದು ಅತೀ ದೊಡ್ಡ ಜಾಹೀರಾತನ್ನು ನೀಡಿದ್ದಾನೆ.

 

ಈತನ ಬೇಡಿಕೆ ಇಷ್ಟಕ್ಕೆ ನಿಂತಿಲ್ಲ. ಬಳುಕುವ ಬಳ್ಳಿಯಾಗಿರಬೇಕು, ಬೆಳ್ಳಗಿರಬೇಕು, ಲಕ್ಷಣವಾಗಿರಬೇಕು, ಸುಂದರಿಯಾಗಿರಬೇಕು ಸೇರಿದಂತೆ ಲಿಸ್ಟ್ ತುಂಬಾನ ಇದೆ. ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಈ ರೀತಿಯ ಜಾಹೀರಾತು ಪ್ರಕಟವಾದ ಬೆನ್ನಲ್ಲೇ ಭಾರಿ ವೈರಲ್ ಆಗಿದೆ. ಈ ಜಾಹೀರಾತು ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡತೊಡಗಿದೆ.

ಈತನ ಜಾಹೀರಾತಿಗೆ ಆಕ್ರೋಶಗಳು ವ್ಯಕ್ತವಾಗಿದೆ. ಜೊತೆಗೆ ಈ ರೀತಿ ಸೆನ್ಸಾರ್ ಇಲ್ಲದೆ ಜಾಹೀರಾತು ಪ್ರಕಟಿಸಿದ ಮ್ಯಾಟ್ರಿಮೋನಿಯ್ ಸೈಟ್ ವಿರುದ್ದವೂ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಸ್ಪಂದಿಸಿರುವ ಮ್ಯಾಟ್ರಿಮೋನಿಯಲ್ ಸೈಟ್, ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಇಷ್ಟೇ ಅಲ್ಲ ಮ್ಯಾಟ್ರಿಮೋನಿಯಲ್ ಸೈಟ್ ಈತನ ಜಾಹೀರಾತನ್ನು ಬ್ಲಾಕ್ ಮಾಡಿದೆ.

ಮ್ಯಾಟ್ರಿಮೋನಿ ಎಚ್ಚರ,  ಈ ರೀತಿಯೂ ವಂಚನೆ ಮಾಡ್ತಾರೆ ಹುಷಾರ್!

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಈ ರೀತಿಯ ಜಾಹೀರಾತು ಇದೇ ಮೊದಲಲ್ಲ.  ಹಲವು ಚಿತ್ರ ವಿಚಿತ್ರ ಜಾಹೀರಾತುಗಳು ವೈರಲ್ ಆಗಿವೆ. ಆದರೆ ಇಷ್ಟು ನಿಖರವಾಗಿ ಹುಡಿಯ ಎತ್ತರ, ತೂಕ, ನಡು, ಕಾಲಿನ ಚಪ್ಪಲಿನ ಸೈಜ್ ಇದೇ ರೀತಿ ಇರಬೇಕು ಎಂದು ಬೇಡಿಕೆ ಇಟ್ಟ ಜಾಹೀರಾತು ಇದೇ ಮೊದಲು. ಈತನ ಬೇಡಿಕೆ ಅನುಗಣುವಾಗಿ ಕಲ್ಲಿನಿಂದ ಕೆತ್ತನೆ ಮಾಡಬೇಕು. ನಿಜ ಜೀವನದಲ್ಲಿ ಇಷ್ಟು ಅಳತೆ ತೂಕದ ಹುಡುಗಿ ಸಿಕುವುದು ಕಷ್ಟ. ಮೇಲ್ನೋಟಕ್ಕೆ ಈತ ಮದುವೆಯಾಗುವಂತೆ ಕಾಣುತ್ತಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಮತ್ತೂ ಕೆಲವರು ಈತನಿಗೆ ನಿಜವಾಗಿ ಮದುವೆಯಾಗಲು ಹುಡುಗಿ ಬೇಕೋ ಅಧವಾ ಗಾತ್ರ, ಎತ್ತರ, ತೂಕ ನೋಡಲು ಹುಡುಗಿ ಕೇಳುತ್ತಿದ್ದಾನೋ. ಹೇಳುವ ಮಹಾಶೂರ ಹೇಗಿದ್ದಾನೆ ಎಂದು ನೋಡಿದರೆ ಭಾರತದಲ್ಲಿ ಹುಡುಗಿ ಸಿಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ 

Follow Us:
Download App:
  • android
  • ios