ಕಾಸಿಲ್ಲ ಕಾರಿಲ್ಲ ಅಂತ ಅಳ್ಬೇಡಿ... ಇವನಿಗೆ ನೋಡಿ ಕಾಲೇ ಇಲ್ಲ...
ಇಲ್ಲೊಬ್ಬ ಹುಡುಗನಿಗೆ ಹುಟ್ಟಿನಿಂದಲೇ ಕಾಲುಗಳಿಲ್ಲ. ಹಾಗಂತ ಅದನ್ನು ಆತ ತನ್ನ ಬದುಕಿನ ದುರಂತವಿದು ಎಂದು ಅಳುತ್ತಾ ಕೂತಿಲ್ಲ. ಕಾಲಿಲ್ಲದವರು ನಾಚಿಸುವಂತೆ ಆದ ಸಾಧನೆ ಮಾಡಿದ್ದು, ಆತನ ಸಾಹಸಗಾಥೆ ಅನೇಕರಿಗೆ ಸ್ಪೂರ್ತಿಯಾಗಿದೆ.
ನಮ್ಮಲ್ಲಿ ಬಹುತೇಕರು, ದುಡ್ಡಿಲ್ಲ. ಕಾರಿಲ್ಲ, ಅವರಿವರಂತೆ ನಾವಿಲ್ಲ ಎಂದೆಲ್ಲಾ ಮತ್ತೊಬ್ಬರಿಗೆ ಹೋಲಿಸಿಕೊಂಡು ಮತ್ತೊಬ್ಬರ ಬದುಕಿನೊಂದಿಗೆ ತಮ್ಮ ಬದುಕನ್ನು ಹೋಲಿಸಿಕೊಂಡು ದುಃಖಿಸುತ್ತಿರುತ್ತಾರೆ. ಆದರೆ ಅನೇಕರಿಗೆ ದೇಹದ ಅಂಗಗಳೇ ಸರಿ ಇರುವುದಿಲ್ಲ. ಆರೋಗ್ಯವೂ ಕೈ ಕೊಟ್ಟಿರುತ್ತದೆ. ಆದರೂ ಬದುಕಿನ ಜೀವನೋತ್ಸಾಹ ಮಾತ್ರ ಕಡಿಮೆ ಆಗಿರುವುದಿಲ್ಲ. ದೇಹದ ನ್ಯೂನತೆಗಳನ್ನೇ ಮೆಟ್ಟಿ ನಿಂತು ಅವರು ಅನೇಕರ ಪಾಲಿನ ಪ್ರೇರಣಾ ಶಕ್ತಿಯಾಗಿರುತ್ತಾರೆ. ಹಾಗೆಯೇ ಇಲ್ಲೊಬ್ಬ ಹುಡುಗನಿಗೆ ಹುಟ್ಟಿನಿಂದಲೇ ಕಾಲುಗಳಿಲ್ಲ. ಹಾಗಂತ ಅದನ್ನು ಆತ ತನ್ನ ಬದುಕಿನ ದುರಂತವಿದು ಎಂದು ಅಳುತ್ತಾ ಕೂತಿಲ್ಲ. ಕಾಲಿಲ್ಲದವರು ನಾಚಿಸುವಂತೆ ಆತ ಸಾಧನೆ ಮಾಡಿದ್ದು, ಆತನ ಸಾಹಸಗಾಥೆ ಅನೇಕರಿಗೆ ಸ್ಪೂರ್ತಿಯಾಗಿದೆ.
ಸಾಮಾನ್ಯವಾಗಿ ಬಾಸ್ಕೆಟ್ ಬಾಲ್ (basketball) ಆಡುವವರು ಸಾಕಷ್ಟು ಎತ್ತರವಿರುತ್ತಾರೆ. ಶಾಲೆಯಲ್ಲೂ ಬಾಸ್ಕೆಟ್ಬಾಲ್ ಟೀಂ ಸೆಲೆಕ್ಟ್ ಮಾಡುವಾಗ ಇರುವವರಲ್ಲಿ ಎತ್ತರವಿರುವವರನ್ನು ಟೀಮ್ ಗೆ ಆಯ್ಕೆ ಮಾಡುತ್ತಾರೆ. ತುಂಬಾ ಎತ್ತರಕ್ಕೆ ಬೆಳೆದವರನ್ನು ನೀವು ಬಾಸ್ಕೆಟ್‌ಬಾಲ್ ಪ್ಲೇಯರ್ ಅಂತಾನೂ ಕೆಲವರು ಕೇಳುವವರಿದ್ದಾರೆ. ಆದರೆ ಇಲ್ಲಿ ಈ ಬಾಲಕನಿಗೆ ಕಾಲುಗಳೇ ಇಲ್ಲ. ಹಾಗಂತ ಆತ ಸುಮ್ಮನೆ ಕೂತಿಲ್ಲ. ಆತನ ಹೆಸರು ಜಾನ್ಸನ್(Johnson). ತನ್ನ ಬಾಲ್ಯದಿಂದಲೂ ಆತ ಕ್ರೀಡೆಯಲ್ಲಿ ಬಹಳ ಆಸಕ್ತಿ ಹೊಂದಿದ್ದ. ಹೀಗಾಗಿ ಆತನನ್ನು ಆಟದಿಂದ ವಿಮುಖ ಮಾಡಲು ಯಾರಿಗೂ ಸಾಧ್ಯವಾಗಲಿಲ್ಲ. ಹೀಗಾಗಿಯೇ ಈ ಬಾಲಕ ಎರಡು ಕಾಲುಗಳಿಲ್ಲದಿದ್ದರೂ ಕಾಲೇಜಿನ ಬಾಸ್ಕೆಟ್ ಬಾಲ್ ಟೀಮ್‌ನಲ್ಲಿ ಆತ ಸ್ಥಾನ ಪಡೆದಿದ್ದಾನೆ. ಬಾಸ್ಕೆಟ್‌ಬಾಲ್ ಕ್ರೀಡೆಯ ಮೇಲಿನ ಅತಿಯಾದ ಆಸಕ್ತಿ ಹಾಗೂ ಅವಿರತ ಪರಿಶ್ರಮವೊಂದೇ ಈ ಆಯ್ಕೆಯ ಹಿಂದೆ ಇರುವುದು.
ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!
ಅಮೆರಿಕಾದ (US) ಕೆಂಟುಕಿಯ(Kentucky) ಲೂಯಿಸ್ವಿಲ್ಲೆ (Louisville) ನಿವಾಸಿಯಾದ ಈತ ತನ್ನ ತಂಡದ ಭಾಗವಾಗಿರುವುದಕ್ಕೆ ಬಹಳ ಉತ್ಸಾಹಿತನಾಗಿದ್ದು, ತನ್ನ ತಂಡಕ್ಕೆ ಆತ ಆಯ್ಕೆಯಾಗಿರುವುದನ್ನು ತಿಳಿಸುತ್ತಿದ್ದಂತೆ ಆತನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅಲ್ಲದೇ ಆತ ತನಗೆ ಕಾಲಿಲ್ಲ ಎಂಬ ಕಾರಣಕ್ಕೆ ಯಾರು ತನ್ನ ಪ್ರತಿಭೆಯನ್ನು ಸಂಶಯದಿಂದ ನೋಡಬಾರದು ಎಂದು ಬಯಸಿದ್ದು, ಎಲ್ಲರಂತೆ ಓರ್ವ ಸಾಮಾನ್ಯ ಮನುಷ್ಯನಾಗಿ ಪ್ರತಿಯೊಬ್ಬರಿಗೂ ತನ್ನ ಪ್ರತಿಭೆ ಏನು, ತನ್ನ ಸಾಮರ್ಥ್ಯ ಏನು ಎಂಬುದನ್ನು ಸಾಬೀತುಪಡಿಸಲು ಬಯಸಿದ್ದಾನೆ.
ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್ ವಿರುದ್ಧ ಹೊಡೆದಿದ್ದು ಸೆಂಚುರಿ..!
ಈ ಜಾನ್ಸನ್‌ನ ಗುರುಗಳು(coach) ಕೂಡ ದಕನ್ ಬಾಯ್ಡ್ (Daquan Boyd) ಕೂಡ ತನ್ನ ಶಿಷ್ಯನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದು, ಈತ ಪ್ರತಿದಿನವೂ ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಾನೆ. ತನ್ನ ಸದಾ ಕಾಲ ತನ್ನ ತಂಡದಲ್ಲಿ ಆಟವಾಡಲು ಇಷ್ಟ ಪಡುತ್ತಿದ್ದ. ತಂಡದ ಉಳಿದ ಆಟಗಾರರು ಓಟದಲ್ಲಿ(sprints) ಭಾಗಿಯಾದರೆ ಅವರೊಂದಿಗೆ ಓಡಲು ಕೂಡ ಈತ ಬಯಸುತ್ತಿದ್ದ. ಆತ ತನ್ನ ತಂಡದ ಅವಿಭಾಜ್ಯ ಅಂಗ ಮಾತ್ರವಲ್ಲ. ಆತ ಆ ಇಡೀ ಬಾಸ್ಕೆಟ್‌ಬಾಲ್ ತಂಡಕ್ಕೆ ಒರ್ವ ಪ್ರೇರಣಾದಾಯಕ ವ್ಯಕ್ತಿ ಎಂದು ಹೇಳಿದರು.
ನಂಗೆ ಲೈಫ್ ಅಂದ್ರೆ ಲೆಮನೈಡ್ ಇದ್ದಂಗೆ: 85 ವರ್ಷದ ಅಜ್ಜಿ!
ಜಾನ್ಸನ್ ಜೊತೆ ಆಟವಾಡುವ ತಂಡದ ಸದಸ್ಯ, ಈ ಬಗ್ಗೆ ಮಾತನಾಡುತ್ತಾ, ಜಾನ್ಸನ್ ಆಡುವುದನ್ನು ನೋಡಿ ನಾನು ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೇ ಈತನ ತಂಡದಲ್ಲಿ ಆಡುವವರೆಲ್ಲರೂ ಕೂಡ ಜಾನ್ಸನ್‌ನ ಆಟ ನೋಡಿ ಪ್ರಭಾವಿತರಾಗಿದ್ದಾರೆ. ಎಲ್ಲವನ್ನು ಸಕರಾತ್ಮಕವಾಗಿ ತೆಗೆದುಕೊಂಡಿದ್ದು, ಆತನ ದೈಹಿಕ ನ್ಯೂನ್ಯತೆ ಆತನಿಗೆ ಎಂದಿಗೂ ಸವಾಲೆನಿಸಿಲ್ಲ. ಒಟ್ಟಿನಲ್ಲಿ ಕಾಲಿಲ್ಲದ ಹುಡುಗನ ಈ ಯಶೋಗಾಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರಿಗೆ ಆತ ಸ್ಫೂರ್ತಿಯ ಸೆಲೆಯಾಗಿದ್ದಾನೆ.
ಗುರಿ ಸಾಧನೆ ಹಾದಿಯಲ್ಲಿ ನಿಮಗೆ ನೀವೇ ಪ್ರೇರಣೆಯಾಗಬೇಕೇ? ಈ ಟಿಪ್ಸ್ ಅನುಸರಿಸಿ!