ಚಿತ್ರ ವಿಮರ್ಶೆ: ಸಾರ್ವಜನಿಕರಿಗೆ ಸುವರ್ಣಾವಕಾಶ

ಮತ್ತೊಮ್ಮೆ ರಿಷಿ, ಪ್ರೇಕ್ಷಕರನ್ನು ಮೆಚ್ಚಿಸುವ ಸಾಹಸ ಮಾಡಿದ್ದಾರೆ. ಈ  ಬಾರಿ ಅವರು ಮನರಂಜನೆ ಜತೆಗೆ ಕಮರ್ಷಿಯಲ್ ಹೀರೋ ಆಗುವ ಪ್ರಯತ್ನವನ್ನೂ ಮಾಡಿದ್ದಾರೆ. ಅದಕ್ಕೆ ಸಾಥ್ ನೀಡಿರುವುದು ಆ್ಯಕ್ಷನ್ ಸನ್ನಿವೇಶಗಳು. 

Kannada movie sarvajanikarige suvarnavakasha film review

ಆರ್ ಕೇಶವಮೂರ್ತಿ

ಹೌದು, ರಿಷಿ ಫೈಟ್ ಮಾಡುತ್ತಾರೆ, ಚೇಸಿಂಗ್ ಮಾಡುತ್ತಾರೆ. ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕೆ ಎಲ್ಲ ರೀತಿಯ ಹೀರೋಯಿಸಂ ತೋರುತ್ತಾರೆ. ಅದರ ಜತೆಗೆ ನಗಿಸುತ್ತಾರೆ. ಇವಿಷ್ಟು ‘ಸಾರ್ವಜನಿಕರಿಗೆ ಸುವರ್ಣಾವಕಾಶ’ಚಿತ್ರದ ಇಷ್ಟು ಮುಖ್ಯಾಂಶಗಳನ್ನು ಇಟ್ಟುಕೊಂಡು ನಿರ್ಮಾಪಕರಲ್ಲೊಬ್ಬರಾದ ಜನಾರ್ದನ್ ಚಿಕ್ಕಣ್ಣ ಕತೆ ಬರೆದರೆ, ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶಕರಾಗಿ ಭರವಸೆ ಮೂಡಿಸುತ್ತಾರೆ.

ಚಿತ್ರ ಚಿಮರ್ಶೆ: ದಬಾಂಗ್‌- 3

ಜೀವನದ ಪ್ರತಿ ಹಂತವನ್ನು ಹಣವೇ ನಿರ್ಧರಿಸುತ್ತಿರುವಾಗ, ಹಣದ ಅವಶ್ಯಕತೆ ಬಂದಾಗ ಒಬ್ಬ ಮಧ್ಯಮ ವರ್ಗದ ಹುಡುಗ ಏನೆಲ್ಲ ಹರಸಾಹಸಗಳನ್ನು ಮಾಡುತ್ತಾನೆ. ಅದರಿಂದ ಎಂಥ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಚಿತ್ರದ ಕತೆಯನ್ನು ಹೀಗೆ ಒಂದು ಸಾಲಿನಲ್ಲಿ ಹೇಳಿದರೆ ಸಾಲದು. ಅದನ್ನು ತೆರೆ ಮೇಲೆಯೇ ನೋಡಬೇಕು ಎನ್ನುವ ಮಟ್ಟಿಗೆ ಹೊಸ ಹೊಸ ದೃಶ್ಯಗಳೊಂದಿಗೆ ಕತೆಯನ್ನು ನಿರೂಪಿಸುತ್ತ ಹೋಗುತ್ತಾರೆ ನಿರ್ದೇಶಕರು.

ಒಂದು ದೋಸೆ ಕಾಣಕ್ಕೆ ಶುರುವಾಗುವ ಜಗಳ, ಅಲ್ಲೊಂದು ಫೈಟ್, ಆ ಗಲಾಟೆಯಲ್ಲಿ ಕಳೆದು ಹೋಗುವ ಚೈನು, ಅದಕ್ಕಾಗಿ ದುಡ್ಡು ಹೊಂದಿಸಲು ಮುಂದಾಗುವುದು, ಬೈಕ್  ಮಾರಾಟ, ಕ್ರಿಕೆಟ್ ಬೆಟ್ಟಿಂಗು, ವಿಲನ್ ಎಂಟ್ರಿ,ಮೋಸ ಮಾಡಬೇಕೆಂಬ ಸಂಚು, ಸಾಲಗಾರರ ಕಾಟ, ಪ್ರೀತಿಸಿದ ಹುಡುಗಿಯ ಅಳಲು ಎಲ್ಲವನ್ನೂ ಹೀರೋ ಪಾತ್ರದ ಹೆಗಲಿಗೇರಿಸುತ್ತಾರೆ ನಿರ್ದೇಶಕರು. ಎಲ್ಲವೂ ತಾನೇ ಆಗಿ ನಾಯಕ ಚಿತ್ರದ ಉದ್ದಕ್ಕೂ ಸಂಚರಿಸುತ್ತಾನೆ. ಇದರ ಜತೆಗೆ ಬೆಣ್ಣೆ ಬಿಸ್ಕತ್ ಕೊಡಿಸುವ ಕತೆ ಹೇಳುವ ದತ್ತಣ್ಣ ಪಾತ್ರ, ನೋಡುಗರನ್ನು ಇನ್ನಿಲ್ಲದಂತೆ ಸೆಳೆಯುತ್ತದೆ.

ಚಿತ್ರ ವಿಮರ್ಶೆ: ಒಡೆಯ

ಹೀಗಾಗಿ ಇಲ್ಲಿ ಅಪ್ಪ- ಮಗನ ಬಾಂಧವ್ಯ ಚಿತ್ರದ ಗಟ್ಟಿತನಕ್ಕೆ ಸಾಕ್ಷಿ ಆಗುತ್ತದೆ. ಹಣಕ್ಕಾಗಿ ನಾಯಕನ ಹೋರಾಟ, ನಾಯಕನ ತಂದೆಯ ಸೆಂಟಿಮೆಂಟ್ ನೆರಳು, ನಾಯಕಿಯ ಅಳಲು ನಡುವೆ ಮಿತ್ರ, ರಂಗಾಯಣ ರಘು ಅವರು ಪ್ರೇಕ್ಷಕರನ್ನು ನಗಿಸುವುದು ಮರೆಯಲ್ಲ. ಚಿತ್ರದ ಮೊದಲ ಭಾಗ ಆಸಕ್ತಿದಾಯಕವಾಗಿ ಇಲ್ಲದೆ ಹೋದರೂ ವಿರಾಮದ ನಂತರ ಇದು ಪ್ರೇಕ್ಷಕರಿಗೆ ಸುವರ್ಣಾವಕಾಶ ಎನ್ನುವ ಭಾವನೆ ಮೂಡಿಸುತ್ತದೆ. ಕ್ರಿಕೆಟ್ ಬೆಟ್ಟಿಂಗ್ ಎಪಿಸೋಡ್ ಹಾಗೂ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಚೇಸಿಂಗ್- ಫೈಟ್ ದೃಶ್ಯಗಳನ್ನು ಇನ್ನಷ್ಟು ಸಂಕ್ಷಿಪ್ತ ಮಾಡುವ ಅಗತ್ಯವಿತ್ತು.

ಛಾಯಾಗ್ರಹಣ ನಾರ್ಮಲ್ ಅನಿಸಿದರೆ, ಮಿಧುನ್ ಮುಕುಂದನ್ ಅವರ ಸಂಗೀತದಲ್ಲಿ ಎರಡು ಹಾಡು ಕೇಳುವಂತಿವೆ. ಧನ್ಯ ಬಾಲಕೃಷ್ಣ ಪಾತ್ರ ಕತೆಗೆ ಪೂರಕವಾಗಿದೆ. 

ಚಿತ್ರ ವಿಮರ್ಶೆ : ಮೂಕಜ್ಜಿಯ ಕನಸುಗಳು

Latest Videos
Follow Us:
Download App:
  • android
  • ios