ಕಾಫಿ ಅಥವಾ ಚಹಾ ಕುಡೀತಾ ದಿನ ಆರಂಭಿಸ್ತೀರಾ? ತಪ್ಪು ತಪ್ಪು ತಪ್ಪು...
ಟೀ ಜಗತ್ತಿನಲ್ಲೇ ಬಹಳ ಜನಪ್ರೀತಿ ಗಳಿಸಿದ ಪಾನೀಯ. ಅದರಲ್ಲೂ ಭಾರತೀಯರಿಗೆ ಟೀ ಅಥವಾ ಕಾಫಿಯಿಲ್ಲದೆ ಕಣ್ಣುಗಳು ತೆರೆಯುವುದೇ ಇಲ್ಲ ಎನ್ನುತ್ತವೆ. ಇನ್ನು ಬರಿಯ ಚಹಾ ಅಂಗಡಿ ಇಟ್ಟುಕೊಂಡು ಭಾರತದಲ್ಲಿ ಆರಾಮಾಗಿ ಜೀವಿಸಬಹುದೆಂದರೆ ಅದೆಷ್ಟು ಚಹಾಪ್ರಿಯರಿದ್ದಾರೆ ಲೆಕ್ಕ ಹಾಕಿ. ಆದರೆ, ದಿನಾರಂಭಕ್ಕೆ ಕಾಫಿ, ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.
ಪ್ರತಿ ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಕಾಫಿ ಅಥವಾ ಟೀ ಆಗಲೇಬೇಕಲ್ಲವೇ? ನಮ್ಮಲ್ಲಿ ಹಲವರ ದೈನಂದಿನ ಅಭ್ಯಾಸವಿದು. ಅದಿಲ್ಲದೆ, ಜಗತ್ತಿನಲ್ಲಿ ಒಂದು ಹುಲ್ಲುಕಡ್ಡಿಯೂ ಚಲಿಸಲಾರದು ಎಂದು ನಂಬಿರುವವರ ಬಳಗ ನಮ್ಮದು. ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್ ಚರ್ಮಕ್ಕೆ ಒಳ್ಳೆಯದು, ಬ್ಲ್ಯಾಕ್ ಟೀ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಕಾಫಿ ಮನಸ್ಸನ್ನು ಆಹ್ಲಾದಗೊಳಿಸುತ್ತದೆ ಮುಂತಾದವನ್ನೆಲ್ಲ ಓದಿ ಓದಿ ಪ್ರೇರಿತರಾಗಿದ್ದೀರಾ? ಆದರೆ ಬೆಳಗ್ಗೆದ್ದ ಕೂಡಲೇ ಕಾಫಿ ಅಥವಾ ಟೀ ಸೇವನೆ ತಪ್ಪು ತಪ್ಪು.
ಅಯ್ಯೋ ಇಷ್ಟು ವರ್ಷ ಕುಡಿದೆವಲ್ಲ, ಏನೂ ಆಗಲಿಲ್ಲ, ಬಂದ ನೆಂಟರಿಷ್ಟರಿಗೂ ಅದನ್ನೇ ಮಾಡಿಕೊಟ್ಟಿದ್ದು, ಅವರೂ ದೂರಲಿಲ್ಲ, ಹುಷಾರಿಲ್ಲದಾಗಲೂ ಅದನ್ನೇ ಕುಡಿದೆವು ಎಂದೆಲ್ಲ ನಿಮ್ಮ ಅಭ್ಯಾಸವನ್ನು ಸಮರ್ಥಿಸಿಕೊಳ್ಳಲು ಬಂದಿರಾ? ನಾವು ಹೇಳಿದ್ದು ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿವ ಅಭ್ಯಾಸದ ಬಗ್ಗೆ ಮಾತ್ರ. ಯೋಚಿಸಿ ನೋಡಿ, ಹೀಗೆ ಮಾಡುವ ಅಭ್ಯಾಸ ನಿಮ್ಮದಾದರೆ, ಹೌದು, ಆಗಾಗ ಹೊಟ್ಟೆ ಗೊಡಗೊಡಿಸಿ ರಗಳೆಯಾಗಿಲ್ಲವೇ? ಅಜೀರ್ಣ ಸಮಸ್ಯೆ ಎದುರಾಗಿಲ್ಲವೇ? ಎದೆಯುರಿ ಕಿರಿಕಿರಿ ಮಾಡುವುದಿಲ್ಲವೇ?
ಗ್ರೀನ್ ಟೀ ಆಯ್ತು ಈಗ ಗ್ರೀನ್ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!
ಏಕೆ ಎದ್ದ ಕೂಡಲೇ ಕಾಫಿ, ಟೀ ಸೇವಿಸಬಾರದು?
1. ಅಸಿಡಿಟಿ ಹೆಚ್ಚುತ್ತದೆ
ಬೆಳಗ್ಗೆ ಏಳುವಾಗ ನಮ್ಮ ಹೊಟ್ಟೆಯ ಅಸಿಡಿಕ್ ಪಿಎಚ್ ಮಟ್ಟ ಏರಿರುತ್ತದೆ. ಕಾಫಿ, ಟೀಯಲ್ಲಿ ಕೆಫಿನ್ ಇರುತ್ತದೆ. ಇದು ಅಸಿಡಿಕ್ ಆಗಿದ್ದು, ಮೊದಲೇ ಅಸಿಡಿಕ್ ಆಗಿರುವ ಹೊಟ್ಟೆಗೆ ಮತ್ತಷ್ಟು ಅದನ್ನೇ ತುಂಬಿದರೆ ಅಸಿಡಿಟಿ ಶುರುವಾಗುತ್ತದೆ. ಅಷ್ಟೇ ಅಲ್ಲ, ಮೆಟಬಾಲಿಸಂ ಏರುಪೇರಿನಿಂದ ಒದ್ದಾಡುವಂತಾಗುತ್ತದೆ. ಇದೇ ಕಾರಣಕ್ಕೆ ವೈದ್ಯರು ಹಾಗೂ ಆಹಾರ ತಜ್ಞರು ಮಲಗುವ ಮುನ್ನ ಹಾಗೂ ಎದ್ದ ಕೂಡಲೇ ಕಾಫಿ, ಟೀ ಕುಡಿಯುವುದನ್ನು ಬೇಡ ಎಂದು ಹೇಳುತ್ತಾರೆ.
2. ಡಿಹೈಡ್ರೇಶನ್
ಇದಿಷ್ಟೇ ಅಲ್ಲದೆ ಚಹಾವು ಡೈಯುರೆಟಿಕ್ ಆಗಿದೆ. ಅದು ಡಿಹೈಡ್ರೇಶನ್‌ಗೆ ಕಾರಣವಾಗುತ್ತದೆ. ವಿಶೇಷವಾಗಿ 8-9 ಗಂಟೆಗಳ ನಿದ್ದೆಯಿಂದಾಗಿ ದೇಹ ಆಹಾರ ಮತ್ತು ನೀರಿನ ಕೊರತೆ ಅನುಭವಿಸುವಾಗ ಟೀ ಕುಡಿದರೆ ಮತ್ತಷ್ಟು ಡಿಹೈಡ್ರೇಶನ್ ಆಗುವುದು ಪಕ್ಕಾ. ಇದರಿಂದ ಮಸಲ್ ಕ್ರ್ಯಾಂಪ್ ಆಗುವುದಲ್ಲದೆ, ದೇಹದ ಸಾಮಾನ್ಯ ಕೆಲಸಗಳಿಗೆ ಅಡ್ಡಿಪಡಿಸುತ್ತದೆ.
ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ....
3. ಮಲಬದ್ಧತೆ
ಭಾರತದಲ್ಲಿ, ಜನರು ಸಾಮಾನ್ಯವಾಗಿ ಹಾಲಿನಿಂದ ತಯಾರಿಸಿದ ಚಹಾ ಸೇವಿಸುತ್ತಾರೆ. ಇದು ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆಗೂ ಕಾರಣವಾಗಬಹುದು. ಹೊಟ್ಟೆ ಖಾಲಿಯಿದ್ದಾಗ ಹಾಲಿನಲ್ಲಿರುವ ಲ್ಯಾಕ್ಟೋಸ್ ಪದಾರ್ಥವು ರಿಯಾಕ್ಟ್ ಆಗಿ ಗ್ಯಾಸ್ ಹಾಗೂ ಮಲಬದ್ಧತೆಗೆ ಕಾರಣವಾಗುತ್ತದೆ.
4. ಹಲ್ಲುಗಳ ಸವೆತ
ಇನ್ನು ಬೆಳಗ್ಗೆದ್ದ ಕೂಡಲೇ ಟೀ ಕುಡಿಯುವುದರಿಂದ ಬಾಯಿಯಲ್ಲೂ ಆ್ಯಸಿಡ್ ಮಟ್ಟ ಹೆಚ್ಚುತ್ತದೆ. ಇವು ಹಲ್ಲುಗಳ ಸವೆತಕ್ಕೆ ಕಾರಣವಾಗುತ್ತವೆ.
5. ಸಂಕಟ, ತಲೆ ತಿರುಗುವಿಕೆ
ಕೆಫಿನ್ ತಕ್ಷಣ ಎನರ್ಜಿ ಬೂಸ್ಟ್ ಮಾಡುತ್ತದೆ. ಆದರೆ, ಪೂರ್ತಿ ರಿಲ್ಯಾಕ್ಸ್ ಆದ ಕಂಡಿಶನ್‌ನಲ್ಲಿದ್ದ ದೇಹಕ್ಕೆ ಸಡನ್ ಆಗಿ ಎನರ್ಜಿ ಏರುವುದರಿಂದ ತಲೆನೋವು, ಸಂಕಟ, ತಲೆ ಸುತ್ತುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಹಾಗಾದರೆ ನೀವು ಬೆಳಗ್ಗೆದ್ದಾಗ ಕಾಫಿ, ಟೀ ಕುಡಿವ ಅಭ್ಯಾಸವನ್ನು ಸಂಪೂರ್ಣ ಬಿಡಲೇಬೇಕಾ?
ಖಂಡಿತಾ ಇಲ್ಲ. ಆದರೆ, ಅದನ್ನು ತೆಗೆದುಕೊಳ್ಳುವ ವಿಧಾನ ಹಾಗೂ ಸಮಯದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು.
ಮಕ್ಕಳ ಸೊಳ್ಳೆ ಕಡಿತಕ್ಕೆ ಟೀ ಬ್ಯಾಗ್ ಮದ್ದು
- ಹಣ್ಣುಗಳು, ಸೆರೀಲ್ ಅಥವಾ ಇನ್ನಾವುದೇ ಸಾಲಿಡ್ ಫುಡ್ ಸೇರಿಸಿದ ಬಳಿಕ ಟೀ ಸೇವಿಸಿ. ಟೀಯನ್ನೇ ಮೊದಲಲು ಸೇವಿಸುವುದು ಬೇಡ.
- ಬೆಳಗ್ಗೆದ್ದ ಕೂಡಲೇ ಆಲ್ಕಲೈನ್ ಸ್ವಭಾವ ಹೊಂದಿದ ಸ್ವಲ್ಪ ಬೆಚ್ಚಗಿನ ನೀರು, ಮಜ್ಜಿಗೆ, ಮೆಂತ್ಯೆ ನೀರು ಮುಂತಾದವನ್ನು ಕುಡಿಯುವುದರಿಂದ ಹೊಟ್ಟೆಯ ರಸಗಳ ಪಿಎಚ್ ಮಟ್ಟ ಬ್ಯಾಲೆನ್ಸ್‌ಗೆ ಬರುತ್ತದೆ.
- ಬೆಳಗಿನ ಹೊತ್ತಿಗೆ ಹಾಲಿನ ಟೀ ಬದಲು, ಗ್ರೀನ್ ಟೀ ಅಥವಾ ಬ್ಲ್ಯಾಕ್ ಟೀ ಕುಡಿಯುವುದು ಹೆಚ್ಚು ಆರೋಗ್ಯಕರ.