ದ್ವಿತೀಯ PUC ಪರೀಕ್ಷೆ ರದ್ದು, ಜುಲೈ ಅಥವಾ ಆಗಸ್ಟ್‌ನಲ್ಲಿ SSLC ಎಕ್ಸಾಮ್: ಯಾರೂ ಫೇಲ್ ಆಗೋಲ್ಲ
- ಪರೀಕ್ಷೆ ಇಲ್ಲದೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪಾಸ್
- ಗ್ರೇಡ್ ಆಧಾರದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ
- ಕಡಿಮೆ ಅಂಕಗಳಿಗೆ SSL ಪರೀಕ್ಷೆ, ಎಲ್ಲರೂ ಪಾಸ್ ಆಗೋದು ಗ್ಯಾರಂಟಿ
ಬೆಂಗಳೂರು(ಜೂ.04): ಈ ಕೊರೋನಾ ಗಲಾಟೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುತ್ತಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕರ್ನಾಟಕ ಸರಕಾರ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ಯಶಸ್ವಿಯಾಗಿದೆ. ಸರಳವಾಗಿ, ಕಡಿಮೆ ಅಂಕಗಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪರೀಕ್ಷೆಗೂ 20 ದಿನಗಳ ಮುಂಚೆ ಟೈಮ್ ಟೇಬಲ್ ಘೋಷಿಸುವುದಾಗಿ ಶಿಕ್ಷಣ ಸಚಿವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ ಮಾತ್ರ ರದ್ಗಾಗಿದ್ದು, ಹಿಂದಿನ ಪರೀಕ್ಷೆಗಳ ಆಧಾರದ ಮೇಲೆ ಗ್ರೇಡ್ ನೀಡಲು ಸರಕಾರ ಮುಂದಾಗಿದೆ. ಜೆಇಇ, ನೀಟ್, ಸಿಇಟಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಹೇಗೂ ವಿದ್ಯಾರ್ಥಿಗಳ ಅರ್ಹತಾ ಮಾನದಂಡವನ್ನು ಓರೆ ಹಚ್ಚುವ ಅವಕಾಶ ಇರುವುದರಿಂದ, ಶಿಕ್ಷಣ ತಜ್ಞರ ಸಲಹೆ ಮೇರೆಗೆ ಕರ್ನಾಟಕ ಸರಕಾರ ಇಂಥದ್ದೊಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.
ಈ ವರ್ಷದ ದ್ವಿತೀಯ ಪಿಯು ಪರೀಕ್ಷೆ ಬರೆಯಲಿದ್ದ ವಿದ್ಯಾರ್ಥಿಗಳು ಕಳೆದ ವರ್ಷದ ಮೊದಲ ಪಿಯುಸಿ ಪರೀಕ್ಷೆ ಎದುರಿಸಿದ್ದರು. ಜಿಲ್ಲಾ ಮಟ್ಟದ ಪರೀಕ್ಷೆ ನಡೆದಿತ್ತು. ಅ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ಕೊಡಲಾಗುವುದು. ಕೆಲವು ಮಾನದಂಡಗಳ ಆಧಾರದ ಪಿಯುಸಿ ವಿದ್ಯಾರ್ಥಿಗಳಿಗೆ A, B, C ಗ್ರೇಡ್ ಕೊಡಲಾಗುತ್ತದೆ. ಯಾವುದೇ ಮಗು ನನಗೆ ಕೊಟ್ಟಿರುವ ಅಂಕ ಸರಿ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ಅ ಮಕ್ಕಳಿಗೆ ಪರೀಕ್ಷೆ ನಡೆಸಲು ಚಿಂತಿಸುತ್ತೇವೆ, ಎಂದು ಸರಕಾರ ಸ್ಪಷ್ಟ ಪಡಿಸಿದೆ.
ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆ ರದ್ದುಪಡಿಸಿ: ಶಿಕ್ಷಣ ತಜ್ಞರು...
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಪಾಸ್ ಮಾಡುತ್ತೇವೆ. ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಗ್ರೇಡ್ ಆಧಾರದಲ್ಲಿ ಉತ್ತೀರ್ಣರಾಗಲಿದ್ದಾರೆ. ವಿದ್ಯಾರ್ಥಿಗಳು ಬೇಸರ ಮಾಡಿಕೊಳ್ಳ ಬೇಡಿ. ನೀಟ್, ಸಿಇಟಿ ಹಾಗೂ ಜೆಇಇ ಪರೀಕ್ಷೆ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಚೆನ್ನಾಗಿ ಓದಿ, ಅ ಪರೀಕ್ಷೆ ಕಡೆ ಗಮನ ಕೊಡಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳಲ್ಲಿ ವಿಶ್ವಾಸ ಮೂಡಿಸುವ ಮಾತುಗಳನ್ನು ಆಡಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಲು 12 ದಿನ ಬೇಕಾಗುತ್ತೆ. ಅದರ ಪ್ರಯತ್ನ ಮಾಡುವುದೂ ಕಷ್ಟ. ಆದರೆ ವಿದ್ಯಾರ್ಥಿಗಳು ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುವುದೆಂದಿದ್ದಾರೆ.
SSLC ಪರೀಕ್ಷೆ ವಿಚಾರವಾಗಿ ಪ್ರತಿಕ್ರಿಯಿಸಿ, 8 ಲಕ್ಷ 75 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಪರೀಕ್ಷೆ ಇಲ್ಲದೆ ಅವರ ಕಲಿಕಾ ಮಟ್ಟ ನಿರ್ಧಾರವಾಗೋದು ಕಷ್ಟ. ಕಳೆದ ವರ್ಷ 9ನೇ ತರಗತಿ ಪರೀಕ್ಷೆ ನಡೆದಿಲ್ಲ. CBSEನಲ್ಲಿ ಮೂರು ತಿಂಗೊಳಿಗೊಮ್ಮ ವಿದ್ಯಾರ್ಥಿಗಳ ಇವಾಲ್ಯುವೇಷನ್ ನಡೆಯುತ್ತೆ. ಆದರೆ, ರಾಜ್ಯ ಶಿಕ್ಷಣಾ ಪದ್ಧತಿಯಲ್ಲಿ ಈ ಪದ್ಧತಿ ಇಲ್ಲ. SSLC ಪರೀಕ್ಷೆಗಳಲ್ಲಿ ಎರಡು ಪರೀಕ್ಷೆ ನಡೆಸಲು ನಿರ್ಧಾರಿಸಲಾಗಿದೆ. ಸಮಾಜ ವಿಜ್ಞಾನ, ಗಣಿತ, ವಿಜ್ಞಾನ ಈ ಮೂರು ವಿಷಯ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರಲಿವೆ. ಉಳಿದ ವಿಷಯಗಳಾದ ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ (ಅಥವಾ ವಿದ್ಯಾರ್ಥಿಗಳು ಯಾವ ಭಾಷೆಯನ್ನೋ ತೆಗೆಗುಕೊಂಡಿದ್ದಾರೆ ಅದರ ಆಧಾರದಲ್ಲಿ) ಪರೀಕ್ಷೆಗಳು ನಡೆಸಲಾಗುತ್ತವೆ. 120 ಅಂಕಗಳಿಗೆ, ಬಹ ಆಯ್ಕೆ ಪ್ರಶ್ನೆಗಳಿದ್ದು, ಮೂರು ಗಂಟೆಗಳ ಕಾಲ ಪರೀಕ್ಷೆಗಳು ನಡೆಯಲಿವೆ. ಪ್ರಶ್ನೆಗಳು ಸರಳವಾಗಿದ್ದು ನೇರವಾಗಿರಲಿದೆ, ಎಂದಿದ್ದಾರೆ ಸಚಿವರು.
ಯಾರೂ ಫೇಲ್ ಆಗಲ್ಲ:
ಯಾರನ್ನು ಕೂಡ ನಪಾಸ್ ಮಾಡುವುದಿಲ್ಲ. ಇಲ್ಲಿ ಕೂಡ A+, B+... ಅಂತ ಗ್ರೇಡ್ ನೀಡುತ್ತೇವೆ. ಜುಲೈ ಮೂರನೇ ವಾರದಲ್ಲಿ SSLC ಪರೀಕ್ಷೆ ನಡೆಯಲಿದ್ದು, ಪರೀಕ್ಷೆ 20 ದಿನಗಳ ಮುಂಚೆಯೇ ದಿನಾಂಕ ಪ್ರಕಟವಾಗಲಿದೆ. ಕೋವಿಡ್ ಕಾರಣದಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗುವುದು, ಎಂದಿದ್ದಾರೆ.
ಸಿಬಿಎಸ್‌ಇ ಪರೀಕ್ಷೆ ರದ್ದಿಗೆ ಸುಪ್ರೀಂ ಸಂತಸ
6000 ಸಾವಿರ ಪರೀಕ್ಷಾ ಕೇಂದ್ರ:
ಈ ಭಾರಿ 6000 ಸಾವಿರ ಪರೀಕ್ಷಾ ಕೇಂದ್ರ ಇರಲಿದ್ದು, ಕಳೆದ ವರ್ಷ ಮೂರು ಸಾವಿರ ಮಾತ್ರ ಇತ್ತು. ಒಂದು ಡೆಸ್ಕ್ ನಲ್ಲಿ ಒಬ್ಬ ವಿದ್ಯಾರ್ಥಿ ಕೂರಲಿದ್ದಾನೆ. ಒಂದು ರೂಮ್ ನಲ್ಲಿ 10 ರಿಂದ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇರಲಿದೆ. ಎಲ್ಲ ವಿದ್ಯಾರ್ಥಿಗಳೂ ಎನ್ 95 ಮಾಸ್ಕ್ ನೀಡಲಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಲಾಗುತ್ತದೆ.
ಆರೋಗ್ಯ ಇಲಾಖೆಯಿಂದ SOP ಬಿಡುಗಡೆ:
ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡುತ್ತೇವೆ. ಬಿಇಒಗಳ ಮೂಲಕ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆ ಮಾಡುತ್ತಿದ್ದಾರೆ. ವಾಟ್ಸಪ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಬಹು ಆಯ್ಕೆ ಪ್ರಶ್ನೆ ಪತ್ರಿಕೆಯಲ್ಲಿ ಮೂರು ವಿಷಯಗಳು ಇರುತ್ತೆ. ಪ್ರತಿ ವಿಷಯಕ್ಕೆ 40 ಅಂಕಗಳು ಇರಲಿವೆ. ಮೂರು ವಿಷಯಗಳ ಪ್ರಶ್ನೆ ಪತ್ರಿಕೆ ಸೇರಿ 120 ಅಂಕಗಳು ಇರುತ್ತೆ. ಒಟ್ಟು ಮೂರು ಗಂಟೆ ಅವಧಿ ಪರೀಕ್ಷೆ ನಡೆಯಲಿದೆ. ಪ್ರತಿಯೊಬ್ಬರು ಪರೀಕ್ಷಾ ಸಿಬ್ಬಂದಿಗೂ ಕೋವಿಡ್ ವ್ಯಾಕ್ಸಿನ್ ಪಡೆದಿರುವಂತೆ ಎಚ್ಚರಿಕೆ ವಹಿಸಲಾಗುತ್ತದೆ. ಜುಲೈ ಅಥವಾ ಆಗಸ್ಟ್ ಮೊದಲ ವಾರದಲ್ಲಿ SSLC ಫಲಿತಾಂಶ ಪ್ರಕಟ ಮಾಡುತ್ತೇವೆ, ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪರೀಕ್ಷೆಗಳು ರದ್ದು: ಪೋಷಕರಿಗೆ ಪಿಎಂ ರಿಪ್ಲೈ
ದ್ವಿತೀಯ ಪಿಯುಸಿ ವಿದ್ಯಾರ್ಥುಗಳಿಗೆ ಈ ಬಾರಿ ಅಂಕಗಳು ಇರುವುದಿಲ್ಲ. ಇದೇ ಮೊದಲ ಬಾರಿಗೆ ಗ್ರೇಡಿಂಗ್ ನೀಡಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಬಂದ ಮೇಲೆ ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುತ್ತೇವೆ. ಅವರಿಗೂ ಗ್ರೇಡಿಂಗ್ ನೀಡುತ್ತೇವೆ ಎಂದು ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹೇಳಿದ್ದಾರೆ.
ಜೂನ್ 15 ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. ಜೂನ್ 15 ರಿಂದದಾಖಲಾತಿ ಪ್ರಕ್ರಿಯೆ ಶುರುವಾಗಲಿದೆ.