2025-26ನೇ ಸಾಲಿನ ಸೈನಿಕ ಶಾಲಾ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. 6ನೇ ತರಗತಿ ಮತ್ತು 9ನೇ ತರಗತಿ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅರ್ಜಿ ಆಹ್ವಾನಿಸಿದೆ. ಜನವರಿ 13ರೊಳಗೆ ಅಧಿಕೃತ ವೆಬ್‌ಸೈಟ್ aissee2025.ntaonline.in ನಲ್ಲಿ ನೋಂದಣಿ ಮಾಡಿಕೊಳ್ಳಬಹುದು.
Education Jan 7, 2025, 5:36 PM IST
ಬಿಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಅವರಿಗೆ ಬೇಷರತ್ ಜಾಮೀನು ದೊರೆತಿದೆ. ಜೈಲಿನಿಂದ ಹೊರಬಂದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿ, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
India Jan 6, 2025, 11:26 PM IST
ಕಳೆದ ವರ್ಷದ ನೀಟ್-ಯುಜಿ ಪರೀಕ್ಷೆ ವಿವಾದದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯ ಕಾರ್ಯನಿರ್ವಹಣೆ ಕುರಿತು ಏಳು ಮಂದಿ ತಜ್ಞರನ್ನೊಳಗೊಂಡ ಪರೀಕ್ಷಾ ಸುಧಾರಣಾ ಸಮಿತಿ ಮಾಡಿರುವ ಎಲ್ಲಾ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
India Jan 3, 2025, 11:10 AM IST
ವೈರಲ್ ಆಗಿರುವ ವೀಡಿಯೊದಲ್ಲಿ, ಇರುವೆಗಳು ನೀರಿನ ಮೇಲೆ ಸೇತುವೆ ನಿರ್ಮಿಸಿ, ಆಹಾರವನ್ನು ಸಂಗ್ರಹಿಸಲು ಸಾಗುತ್ತಿರುವುದನ್ನು ಕಾಣಬಹುದು. ಇದು ಅವುಗಳ ಬುದ್ಧಿವಂತಿಕೆ ಮತ್ತು ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸುತ್ತದೆ.
SCIENCE Jan 1, 2025, 6:47 PM IST
ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿರುವ ಯುವಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜಸ್ಥಾನ ಲೋಕ ಸೇವಾ ಆಯೋಗ. 162 ಪರೀಕ್ಷೆಗಳ ಕ್ಯಾಲೆಂಡರ್ ಬಿಡುಗಡೆ ಮಾಡಿದೆ. 2025ನೇ ಸಾಲಿನಲ್ಲಿ ಪ್ರತಿ 5 ದಿನಕ್ಕೊಮ್ಮೆ ಪರೀಕ್ಷೆ ನಡೆಯಲಿದೆ.
State Govt Jobs Jan 1, 2025, 5:03 PM IST
ಕೆಲವು ಪ್ರಶೋತ್ತರಗಳನ್ನು ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲೂ ಅನಗತ್ಯವಾಗಿ ಸಂಕೀರ್ಣಗೊ ಳಿಸಲಾಗಿದೆ. ಇದರಿಂದ ಕನ್ನಡ ಅಭ್ಯರ್ಥಿಗಳು ಇಂಗ್ಲಿಷ್‌ನಲ್ಲಿಯೂ ಪ್ರಶ್ನೆ ಓದಿಕೊಳ್ಳುವುದು ಅನಿವಾರ್ಯ. ಎರಡು ಬಾರಿ ಪ್ರಶ್ನೆ ಓದುವುದರಿಂದ ಸಮಯ ವ್ಯರ್ಥವಾಗುವ ಜೊತೆಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಆಗುವುದಿಲ್ಲ. ಇದರಿಂದ ಉತ್ತಮ ಅಂಕ ಗಳಿಸಲು ಸಾಧ್ಯವಾಗದೆ ಅನ್ಯಾಯವಾಗುತ್ತದೆ. ಇಂಗ್ಲಿಷ್ ಮಾಧ್ಯಮದವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
State Govt Jobs Jan 1, 2025, 6:24 AM IST
2023-24ನೇ ಸಾಲಿನ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಮರುಪರೀಕ್ಷೆಯಲ್ಲಿ ಹಲವು ಎಡವಟ್ಟುಗಳು ಕಂಡುಬಂದಿವೆ. ಭಾಷಾಂತರ ಲೋಪಗಳು, OMR ಶೀಟ್ ಮತ್ತು ನೋಂದಣಿ ಸಂಖ್ಯೆಗಳ ಗೊಂದಲ, ಪರೀಕ್ಷೆ ತಡವಾಗಿ ಆರಂಭ, ಹೀಗೆ ಹಲವು ಸಮಸ್ಯೆಗಳಿಂದ ಅಭ್ಯರ್ಥಿಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.
state Dec 30, 2024, 3:28 PM IST
ವಿಜಯಪುರದಲ್ಲಿ ನಡೆದ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಓಎಂಆರ್ ಶೀಟ್ ಮತ್ತು ನೋಂದಣಿ ಸಂಖ್ಯೆಯಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಉಂಟಾದ ಈ ಲೋಪದಿಂದಾಗಿ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮರು ಪರೀಕ್ಷೆಗೆ ಒತ್ತಾಯಿಸಿದ್ದಾರೆ.
state Dec 29, 2024, 5:40 PM IST
ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಕೆಎಎಸ್ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ಎಡವಟ್ಟುಗಳು ಕಂಡುಬಂದಿವೆ. ಕನ್ನಡ ಅನುವಾದದಲ್ಲಿ ಲೋಪಗಳಿಂದಾಗಿ ಅಭ್ಯರ್ಥಿಗಳು ಮರುಪರೀಕ್ಷೆಗೆ ಆಗ್ರಹಿಸಿದ್ದಾರೆ.
state Dec 29, 2024, 2:52 PM IST
ಓಎಂಆರ್ ಶೀಟ್‌ಗಳಲ್ಲಿ ನೋಂದಣಿ ಸಂಖ್ಯೆಗಳಲ್ಲಿನ ವ್ಯತ್ಯಾಸದಿಂದಾಗಿ ವಿಜಯಪುರದಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಗೊಂದಲದ ವಾತಾವರಣ ಶುರುವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
state Dec 29, 2024, 12:56 PM IST
ಒಟ್ಟು 2.109 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿಸಿದ್ದು, ಪರೀಕ್ಷೆ ಸುಸೂತ್ರವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ತಿಳಿಸಿದ ಕರ್ನಾಟಕ ಲೋಕಸೇವಾ ಆಯೋಗ
State Govt Jobs Dec 29, 2024, 5:59 AM IST
5 ಮತ್ತು 8ನೇ ಕ್ಲಾಸ್ ಮಕ್ಕಳ ಪರೀಕ್ಷೆ- ಫಲಿತಾಂಶಕ್ಕೆ ಸಂಬಂಧಿಸಿ ಕೇಂದ್ರದಿಂದ ಬಹುದೊಡ್ಡ ನಿರ್ಧಾರ ಪ್ರಕಟವಾಗಿದೆ. ಏನದು?
Education Dec 23, 2024, 4:24 PM IST
ಝಾರ್ಖಂಡ್‌ನ ಮೇದಿನಿನಗರದ ಎಸ್‌ಡಿಎಂ ಸುಲೋಚನಾ ಮೀನಾ ಅವರ ಹೆಸರು ಸುದ್ದಿಯಲ್ಲಿದೆ. ವಾರದಲ್ಲಿ ಎರಡರಿಂದ ಐದು ದಿನಗಳವರೆಗೆ ವಿಚಾರಣೆಯ ದಿನಗಳನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಈಗ ಹೆಚ್ಚಿನ ಜನರ ವಿಚಾರಣೆ ನಡೆಯುತ್ತಿದೆ.
Education Dec 20, 2024, 7:07 PM IST
ಮಕ್ಕಳು ಚುರುಕಾಗಿರಬೇಕು, ಅವರ ಭವಿಷ್ಯ ಉತ್ತಮವಾಗಿರಬೇಕು ಎಂದು ಪಾಲಕರು ಬಯಸ್ತಾರೆ. ಆದ್ರೆ ಎಲ್ಲ ಅಂದ್ಕೊಂಡತೆ ಆಗೋದಿಲ್ಲ. ಕೆಲ ಮಕ್ಕಳು ಗಣಿತದಲ್ಲಿ ಝೀರೋ ಆಗಿದ್ರೆ ಮತ್ತೆ ಕೆಲವರು ಹೀರೋ ಆಗಿರ್ತಾರೆ. ಅದಕ್ಕೆ ಕಾರಣ ಬ್ಲಡ್ ಗ್ರೂಪ್ ಅನ್ನೋದು ನಿಮಗೆ ಗೊತ್ತಾ?
Health Dec 19, 2024, 3:45 PM IST
2025ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಬದಲಿಗೆ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಮೇಲಷ್ಟೇ ಗಮನ ಹರಿಸಲಿದೆ. ಪರೀಕ್ಷೆಗಳಲ್ಲಾಗುವ ದೋಷಗಳನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
India Dec 18, 2024, 8:06 AM IST