Crime News: ಬಾಗಲಕೋಟೆಯಲ್ಲಿ ಮರ್ಯಾದೆ ಹತ್ಯೆ: ಅಳಿಯನನ್ನೇ ಕೊಂದ ಪಾಪಿ ಮಾವ
ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ ನಡೆದಿದ್ದು, ಅಂತರ್ಜಾತಿ ಹುಡುಗನನ್ನ ಮಗಳು ಮದುವೆಯಾಗಿದ್ದಳು. ಇದೀಗ ಅಳಿಯನನ್ನು ಮಾವ ಕೊಲೆ ಮಾಡಿದ್ದಾನೆ.
ಅವನು ಜೈನ ಧರ್ಮಕ್ಕೆ ಸೇರಿದವನು, ಅವಳು ಕ್ಷತ್ರೀಯ ಹುಡುಗಿ. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರ ಪ್ರೀತಿಗೆ ಜಾತಿ ಎಂದೂ ಅಡ್ಡಿಯಾಗಿರಲಿಲ್ಲ. ಆದ್ರೆ ಅಡ್ಡಿಯಾಗಿದ್ದಿದ್ದು ಪ್ರೇಯಸಿಯ ತಂದೆ. ಮಗಳ ಲವ್ ಸ್ಟೋರಿಗೆ ಅಲ್ಲಿ ತಂದೆಯೇ ವಿಲನ್ ಆಗಿಬಿಟ್ಟಿದ್ದ. ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು ಅನ್ನೋ ನಂಬಿಕೆ ಇಟ್ಟುಕೊಂಡಿದ್ದ ಆ ಪ್ರೇಮಿಗಳು ಹೆತ್ತವರ ವಿರೋಧದ ನಡುವೆಯೇ ದೇವಸ್ಥಾನದಲ್ಲಿ ಮದುವೆಯಾಗಿಬಿಟ್ರು. ಯಾವಾಗ ಪ್ರೇಮಿಗಳು ಒಂದಾದ್ರೋ ವಿಲನ್ ತಂದೆಯ ಪಿತ್ತ ನೆತ್ತಿಗೇರಿಸಿಬಿಟ್ಟಿತ್ತು. ಅಳಿಯ ವಿರುದ್ಧವೇ ಕತ್ತಿ ಮಸಿಯೋಕೆ ಶುರು ಮಾಡಿದ. ಕೊನೆಗೆ ಮಗಳನ್ನು ವಿಧವೆ ಮಾಡೋದ್ರಲ್ಲಿ ಯಶಸ್ವಿಯಾದ. ಹೀಗೆ ಅಳಿಯನ ಕಥೆ ಮುಗಿಸಿ ಮಗಳ ಕುಂಕಮ ಭಾಗ್ಯವನ್ನ ಕಿತ್ತುಕೊಂಡಿದ್ದಾನೆ ಪಾಪಿ ತಂದೆ.