ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಿಸದಿದ್ರೆ ರಾಜೀನಾಮೆಗೂ ಸಿದ್ಧ: ಬಿಜೆಪಿ ಶಾಸಕ

By Web DeskFirst Published Nov 4, 2019, 2:55 PM IST
Highlights

ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5 ಮೀಸಲಾತಿ ಹೆಚ್ಚಳ ಮಾಡದಿದ್ರೆ ರಾಜೀನಾಮೆಗೂ ಸಿದ್ಧ ಎಂದ ಶಾಸಕ ರಾಜೂಗೌಡ| ಸರ್ಕಾರ ಮೀಸಲಾತಿಯನ್ನ ನೀಡುತ್ತೆ ಅನ್ನೋ ಭರವಸೆ ಇದೆ| ಈ ಹೊರಾಟ ಮೊದಲಿನಿಂದಿಲೂ ಇದೆ| ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳಗಳಿಗೆ ನಾವು ಮಾತು ನೀಡಿದ್ದೇವೆ| ಶ್ರೀಗಳು ಸೂಚಿಸಿದರೆ ರಾಜೀನಾಮೆಗೂ ಸಿದ್ಧ|

ಯಾದಗಿರಿ[ನ.4]: ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5 ಮೀಸಲಾತಿ ಹೆಚ್ಚಳ ಮಾಡದಿದ್ರೆ ರಾಜೀನಾಮೆಗೂ ಸಿದ್ಧ ಎಂದು ಸುರಪುರ ಶಾಸಕ ರಾಜೂಗೌಡ ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾತನಾಡಿದ ಅವರು,  ಸರ್ಕಾರ ಮೀಸಲಾತಿಯನ್ನ ನೀಡುತ್ತೆ ಅನ್ನೋ ಭರವಸೆ ಇದೆ. ಈ ಹೊರಾಟ ಮೊದಲಿನಿಂದಿಲೂ ಇದೆ. ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀಗಳಗಳಿಗೆ ನಾವು ಮಾತು ನೀಡಿದ್ದೇವೆ. ಶ್ರೀಗಳು ಸೂಚಿಸಿದರೆ ರಾಜೀನಾಮೆಗೂ ಸಿದ್ಧ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಿಯೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಆಡಿಯೋ ತಿರುಚಿ ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹರಿಬಿಡಲಾಗಿದೆ. ಆಫ್ ದಿ ರೆಕಾರ್ಡ್ ಅಂತಾ ಕೆಲ ಮಾತುಗಳನ್ನ ಹೇಳ್ತಿರ್ತಾರೆ. ಆದ್ರೀಗ ಹೆಂಡತಿಯೊಂದಿಗೂ ಮುಕ್ತವಾಗಿ ಮಾತನಾಡದಿರೋ ಪರಿಸ್ಥಿತಿ ಎದುರಾಗಿದೆ. ಅನರ್ಹರಿಂದಲೇ ಸರ್ಕಾರ ರಚಿಸಿದ್ದೇವೆ, ವೈಯಕ್ತಿಕ ಸಮಸ್ಯೆಗಳಿಂದ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರು ರಾಜೀನಾಮೆ ವಿಚಾರದಲ್ಲಿ ಅಮಿತ್ ಶಾ ಪಾತ್ರವಿಲ್ಲ, ಅವರು ಮನಸ್ಸು ಮಾಡಿದ್ರು ಕಾಂಗ್ರೆಸ್ ನ ಎಲ್ಲ 80 ಶಾಸಕರನ್ನ ಸೆಳೆಯುತ್ತಿದ್ರು ಅಂತಾ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರದಿಂದ ಹೊರಬರುವ ಎಚ್ಚರಿಕೆ ಕೊಟ್ಟ ಶ್ರೀರಾಮುಲು: ಕಾರಣ..?

ನಿನ್ನೆ (ಭಾನುವಾರ)  ದಾವಣಗೆರೆಯಲ್ಲಿ ಶ್ರೀರಾಮುಲು ಸಹ ಇದೇ ಮೀಸಲಾತಿ ವಿಚಾರವಾಗಿ ಮಾತನಾಡಿ, ಇನ್ನೆರಡು ತಿಂಗಳಲ್ಲಿ ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5 ಮೀಸಲಾತಿ ನೀಡಿ. ಮೀಸಲಾತಿ ಸಿಗಲ್ಲ ಅಂದ್ರೆ ನನಗೆ ಏನೂ ಬೇಡ ಎಂದು  ಸಚಿವ ಶ್ರೀರಾಮಲು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!