ಯಾದಗಿರಿಯಲ್ಲಿ ಹಿಂದೂಗಳ ನೇತೃತ್ವದಲ್ಲಿಯೇ ಜಮಾಲುದ್ಧಿನ್ ಜಾತ್ರೆ

By Suvarna News  |  First Published Apr 8, 2022, 3:42 PM IST
  • ಹಿಂದೂ-ಮುಸ್ಲಿಂ ವೈಷಮ್ಯದ ನಡುವೆ ಭಾವೈಕತೆಯ ಜಾತ್ರೆ
  • ಹಿಂದೂಗಳಿಂದಲೇ ನಡೆಯುತ್ತೆ ಜಲಾಲುದ್ಧಿನ್ ಜಾತ್ರೆ
  • ರಾಜ್ಯಕ್ಕೆ ಮಾದರಿಯಾದ ಯರಗೋಳ ಗ್ರಾಮ

ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಯಾದಗಿರಿ(ಎ.8): ರಾಜ್ಯದಲ್ಲಿ ಧರ್ಮ ದಂಗಲ್ ಸಂಘರ್ಷ ಶುರುವಾಗಿದೆ. ಹಿಜಾಬ್ ನಿಂದ ಶುರುವಾಗಿ ಮ್ಯಾಂಗೋ ವ್ಯಾಪಾರ, ಬೇರೆ ಧರ್ಮದವರ ವ್ಯಾಪಾರ, ಮುಸಲ್ಮಾನ ಧರ್ಮದವರಿಗೆ ಸೇರಿದ ವಾಹನಗಳಲ್ಲಿ ಹೋಗಬಾರದು, ಮುಸಲ್ಮಾನ ಚಾಲಕರಿಗೆ ಚಾಲನೆಗೆ ಅವಕಾಶ ಕೊಡಬಾರದು ಎಂಬ ಹಲವಾರು ರೀತಿಯಲ್ಲಿ ಸಂಘರ್ಷಗಳು ಉಂಟಾಗಿವೆ. ಆದ್ರೆ ಯಾದಗಿರಿ (Yadgir) ಜಿಲ್ಲೆಯ ಯರಗೋಳ ಗ್ರಾಮದಲ್ಲಿ (yargol village) ಮುಸಲ್ಮಾನರ ಜಾತ್ರೆ ಜಮಾಲುದ್ಧಿನ್ ಜಾತ್ರೆಯಲ್ಲಿ (hazrat jamaluddin jatra ) ಹಿಂದೂಗಳ ಸಂಭ್ರಮದಿಂದ ಭಾಗವಹಿಸಿದರು.

Tap to resize

Latest Videos

undefined

ಮುಸಲ್ಮಾನರ ಜಾತ್ರೆ, ಹಿಂದೂಗಳ ನೇತೃತ್ವ: ಯರಗೋಳ ಗ್ರಾಮದ ಹಜರತ್ ಜಮಾಲುದ್ಧಿನ್ ಜಾತ್ರೆಯು ಯುಗಾದಿ (Ugadi) ಹಬ್ಬದ ನಂತರ ನಡೆಯುತ್ತದೆ. ಈ ಜಾತ್ರೆಯು ಹಿಂದೂ ಸಮಾಜದವರ ನೇತೃತ್ವದಲ್ಲಿಯೇ ನಡೆಯುತ್ತದೆ. ಯರಗೋಳ ಗ್ರಾಮದ ಎಲ್ಲಾ ಹಿಂದೂ-ಮುಸ್ಲಿಂ ಜನರು ಯಾವುದೇ ಧಾರ್ಮಿಕ ಅಡಚಣೆ ಇಲ್ಲದೇ ಅಣ್ಣ-ತಮ್ಮಂದಿರಂತೆ ಆಚರಿಸುತ್ತಾರೆ. ಈ ಜಾತ್ರೆಯ ಆರಂಭದಿಂದ ಹಿಡಿದು ಮುಗಿಯುವವರೆಗೂ ಎಲ್ಲದರಲ್ಲಿಯೂ ಹಿಂದೂಗಳೇ ನೇತೃತ್ವ ವಹಿಸ್ತಾರೆ.

ಹಿಂದೂ-ಮುಸ್ಲಿಂ ರಿಂದ ದರ್ಗಾ ಪೂಜೆ: ಯರಗೋಳ ಗ್ರಾಮದ ಹಜರತ್ ಜಮಾಲುದ್ಧಿನ್ ಜಾತ್ರೆಯು ಬುಧವಾರ ಸಂಜೆ ಸಂಭ್ರಮ, ಸಡಗರದಿಂದ ನಡೆದು, ಗುರುವಾರ ಸಂಜೆಯವರೆಗೂ ನಡೆಯಿತು. ಈ ಜಾತ್ರೆಯಲ್ಲಿ ಹಿಂದೂ-ಮುಸ್ಲಿಂರು ಸೇರಿ ದರ್ಗಾ ಆಗಮಿಸಿ ಪೂಜೆ ಮಾಡಿ, ನಮಸ್ಕರಿಸಿ, ದರ್ಗಾ ಕೆ ದೀಡ್ ನಮಸ್ಕಾರ ಹಾಕಿ ತಮ್ಮ ಹರಕೆ ತೀರಿಸಿದರು. ಸಾವಿರಾರು ಸಂಖ್ಯೆಯಲ್ಲಿ ದರ್ಗಾ ಕ್ಕೆ ಬಂದ ಹಿಂದೂಗಳು ಜಮಾಲುದ್ಧಿನ್ ಜಾತ್ರೆಯಲ್ಲಿ ಭಾಗವಹಿಸಿ ಭಾವೈಕತೆಯ ಭಾವ ತೋರಿದರು. 

ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮತ್ತಷ್ಟು ವಿಳಂಬ!

ನಾವೆಲ್ಲ ಒಂದೇ ಎಂದ ಯರಗೋಳ ಜನ: ಪ್ರತಿವರ್ಷದಂತೆ ಈ ವರ್ಷವೂ ಸಹ ಯರಗೋಳದಲ್ಲಿ ನಡೆದ ಜಮಾಲುದ್ಧಿನ್ ಜಾತ್ರೆಯಲ್ಲಿ ಎಲ್ಲಾ ಧರ್ಮದ ಜನ ಬಂದು ಸಂಭ್ರಮದಿಂದ ಆಚರಿಸಿ, ನಾವೆಲ್ಲರೂ ಒಂದೇ, ನಮ್ಮಲ್ಲಿ ಯಾವುದೇ ಬೇಧ-ಭಾವ ಇಲ್ಲ ಎಂಬ ಸಂದೇಶ ಸಾರಿದರು. ದರ್ಗಾದಲ್ಲಿರುವ ಜಮಾಲುದ್ಧಿನ್ ದೇವರಿಗೆ ಸಕಲ ಹಿಂದೂ-ಮುಸ್ಲಿಂ (Hindu muslim) ಭಕ್ತರು ನೈವೇದ್ಯ ತಂದು ದೇವರಿಗೆ ಅರ್ಪಿಸಿದರು. 

ಹಿಂದೂಗಳಿಂದಲೇ ಕೋಲಾಟ, ನೃತ್ಯ ವಾದ್ಯಮೇಳ ಮರೆವಣಿಗೆ: ಮೂರು ದಿನಗಳ ಕಾಲ ನಡೆಯುವ ಜಮಾಲುದ್ಧಿನ್ ಜಾತ್ರೆಯಲ್ಲಿ ಸಂಭ್ರದಮದಿಂದ ನಡೆದಿದ್ದು, ಇಲ್ಲಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂಗಳೇ ಭಾಗವಹಿಸ್ತಾರೆ. ಪ್ರಮುಖವಾಗಿ ಕೋಲಾಟ, ನೃತ್ಯ ಮೇಳದೊಂದಿಗೆ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ಹಿಂದೂಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಈ ಜಾತ್ರೆಯ ನಡೆಯಲು ಆರ್ಥಿಕವಾಗಿ ಹಿಂದೂಗಳು ಕಾಣಿಕೆ ನೀಡಿದ್ದಾರೆ.

ವರ್ಗಾವಣೆ ಆದೇಶ ಪ್ರಕಟಿಸಿದ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ, ಏ.8 ರಂದು ಕೌನ್ಸೆಲಿಂಗ್

ರಾಜ್ಯಕ್ಕೆ ಮಾದರಿಯಾದ ಯರಗೋಳ ಗ್ರಾಮ: ರಾಜ್ಯದಲ್ಲಿ ಧರ್ಮ-ಧರ್ಮಗಳ ನಡುವೆ ಗಲಾಟೆ, ಗದ್ದಲ ಜೋರಾಗಿಯೇ ನಡೆದಿದೆ. ಆದ್ರೆ ಯರಗೋಳ ಗ್ರಾಮದಲ್ಲಿ ಹಿಂದೂಗಳಿಂದಲೇ ಗಂಧ, ಹೂವು, ಕಳಸಾ ಚಾಂದನೆ ಮೆವಣಿಗೆ ಮಾಡಿದ್ದಾರೆ. ಹಿಂದೂಗಳು ಕೈಯಲ್ಲಿ ಹಸಿರು ಹಿಡಿದು ನೈವೇದ್ಯ ತೆಗೆದುಕೊಂಡು ಆಗಮಿಸಿ ಭಾವೈಕತೆ ಮೆರೆದಿದ್ದಾರೆ.

click me!