‘HDK ಸರ್ಕಾರ ಉಳಿಸಿಕೊಳ್ಳಲು ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿಸಿದ್ದರು’

By Web Desk  |  First Published Nov 4, 2019, 4:08 PM IST

ಮೈತ್ರಿ ಸರಕಾರದಲ್ಲಿ ಪ್ರಸನ್ನಾಂದಪುರಿ ಸ್ವಾಮಿಜಿ ಅವರ ಫೋನ್ ಕದ್ದಾಲಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಜುಗೌಡ| ಭಯೋತ್ಪಾದಕರ, ನಕ್ಸಲ್ ರ ಫೋನ್ ಟ್ಯಾಪ್ ಮಾಡಬೇಕು| ಕುಮಾರಸ್ವಾಮಿ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ| ಸರಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ‌ಫೋನ್ ಕದ್ದಾಲಿಕೆ ಮಾಡಿದ್ದಾರೆ|


ಯಾದಗಿರಿ[ನ.4]: ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರು ಫೋನ್ ಟ್ಯಾಪ್ ಮಾಡೋ ಬದಲು ಜನರ ಸಮಸ್ಯೆಗಳನ್ನ ಟ್ಯಾಪ್ ಮಾಡ್ಬೇಕಿತ್ತು ಎಂದು ಸುರಪುರ ಶಾಸಕ ರಾಜುಗೌಡ ಅವರು ಹೇಳಿದ್ದಾರೆ. 

ಮೈತ್ರಿ ಸರಕಾರದಲ್ಲಿ ಪ್ರಸನ್ನಾಂದಪುರಿ ಸ್ವಾಮಿಜಿ ಅವರ ಫೋನ್ ಕದ್ದಾಲಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಜುಗೌಡ ಅವರು, ಭಯೋತ್ಪಾದಕರ, ನಕ್ಸಲ್ ರ ಫೋನ್ ಟ್ಯಾಪ್ ಮಾಡಬೇಕು, ಆದ್ರೆ ಕುಮಾರಸ್ವಾಮಿ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಸರಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ‌ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ರಾಜಕೀಯ, ಸ್ವಾರ್ಥಕ್ಕಾಗಿ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿದ್ದು ಸರಿಯಲ್ಲ. ಉಪ್ಪು ತಿಂದವರು‌ ನೀರು ಕುಡಿಯಲು ಬೇಕು, ಸಿಬಿಐ ತನೆಖೆಯಿಂದ ಸತ್ಯ ಬೆಳಕಿಗೆ ಬರುತ್ತದೆ. ಕುಮಾರಸ್ವಾಮಿ ತಮ್ಮ ಸಮುದಾಯದ ಗುರುಗಳ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಇನ್ನು ಬೇರೆ ಸಮುದಾಯದ ಸ್ವಾಮಿಗಳ ಫೋನ್ ಟ್ಯಾಪ್ ಮಾಡದೆ ಇರುತ್ತಾರಾ ? ಎಂದು ಪ್ರಶ್ನಿಸಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕುಮಾರಸ್ವಾಮಿ ರಾಜಕೀಯ ಮಾಡಲಿ, ಆದರೆ ಕದ್ದಾಲಿಕೆ ಮಾಡಿದ್ದು ಸರಿಯಲ್ಲ. ಪೋನ್ ಕದ್ದಾಲಿಕೆ ಮಾಡಿದರೂ ಕುಮಾರಸ್ವಾಮಿ ಸರಕಾರ ಉಳಿಯಲಿಲ್ಲ ಕುಮಾರಸ್ವಾಮಿ ಜನರ ಹೃದಯ, ಶಾಸಕರ ಹೃದಯ ಗೆದ್ದಿದ್ರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ. 

click me!