Viral Video: ಸ್ಕ್ಯಾನರ್‌ ಗುರುತು ಹಿಡೀಲಿಲ್ಲ, ಅಂತ ಮೇಕಪ್ ತೆಗೆಸಿದ್ರು!

Published : May 31, 2025, 10:50 AM IST
China

ಸಾರಾಂಶ

"ನೀವು ಯಾಕೆ ಹೀಗೆ ಮೇಕಪ್ ಮಾಡಿಕೊಂಡಿದ್ದೀರೀ? ನೀವು ತೊಂದರೆ ಕೊಡುತ್ತಿದ್ದೀರಿ" ಎಂದು ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ವೀಡಿಯೊದಲ್ಲಿ ಹೇಳುತ್ತಿರುವುದು ದಾಖಲಾಗಿದೆ.

ಬೆಂಗಳೂರು (ಮೇ.31): ಮಹಿಳೆಯರನ್ನು ಅಲಂಕಾರಪ್ರಿಯರು ಎನ್ನಲಾಗುತ್ತದೆ. ಅದರಲ್ಲೂ ಕೆಲವರು ಮೇಕಪ್ ಮಾಡಿಕೊಳ್ಳದೆ ಹೊರಗೆ ಹೋಗುವುದಿಲ್ಲ. ಹೀಗಿರುವಾಗ, ಚೀನಾದ ಏರ್ಪೋಟ್‌ವೊಂದರಲ್ಲಿ ಮಹಿಳೆಯೊಬ್ಬರು ಅನಿವಾರವಾಗಿ ತಮ್ಮ ಬ್ರೆಡಲ್ ಮೇಕಪ್ ತೆಗೆಯಬೇಕಾದ ಪ್ರಸಂಗ ಎದುರಾಗಿದೆ. ಕಾರಣ, ಅಲ್ಲಿದ್ದ ಮುಖ ಗುರುತಿಸುವಿಕೆ ಸ್ಥಾನ ರ್‌ಗಳಿಗೆ ಸಿಕ್ಕಿರಲಿಲ್ಲ. ಇದರಿಂದ ಆಕೆಯ ಗುರುತೇ ಮುಜುಗರಗೊಂಡ ಆಕೆ ಮೇಕಪ್ ಉಜ್ಜಿಕೊಳ್ಳುತ್ತಿ ರುವುದು ಮತ್ತು 'ನಿನ್ನ ಮುಖ ಪಾಸ್‌ಪೋರ್ಟ್ ನಲ್ಲಿರುವಂತೆ ಆಗುವ ತನಕ ತಿಕ್ಕಿಕೊ' ಎಂದು ಸಿಬ್ಬಂದಿ ಹೇಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಶಾಂಘೈನಿಂದ ಹೊರಟ್ಟಿದ್ದ ಮಹಿಳಾ ಪ್ರಯಾಣಿಕಳಿಗೆ ಇಮಿಗ್ರೇಷನ್‌ ಕೌಂಟರ್‌ನಲ್ಲಿ ಈ ಮುಜುಗರವಾಗಿದೆ. ಅವರ ಮುಖವನ್ನು ಸ್ಕ್ಯಾನರ್‌ ಗುರುತಿಸಲು ವಿಫಲವಾದ ಬಳಿಕ, ಆಕೆಗೆ ಮೇಕಪ್‌ ತೆಗೆಯುವಂತೆ ಸಿಬ್ಬಂದಿ ಸೂಚಿಸಿದ್ದಾರೆ.

 

 

ವಿಮಾನ ನಿಲ್ದಾಣದ ಸಿಬ್ಬಂದಿ ಯುವತಿಗೆ ಶಿಸ್ತಿನ ಪಾಠ ಮಾಡುತ್ತಿರುವ ಸಣ್ಣ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕ್ಲಿಪ್‌ನಲ್ಲಿ, ವಿಮಾನ ನಿಲ್ದಾಣದ ಸಿಬ್ಬಂದಿ ಕಿರಿಕಿರಿಯ ಸ್ವರದಲ್ಲಿ ಸೂಚನೆ ನೀಡುತ್ತಿರುವಾಗ, ಆಕೆ ಮುಖ ಉಜ್ಜುತ್ತಿರುವುದನ್ನು ಕಾಣಬಹುದಾಗಿದೆ.

"ನಿಮ್ಮ ಪಾಸ್‌ಪೋರ್ಟ್‌ನಲ್ಲಿ ಇರುವ ಫೋಟೋದಂತೆ ಕಾಣುವವರೆಗೆ ಮುಖದಲ್ಲಿನ ಎಲ್ಲವನ್ನೂ ಅಳಿಸಿಹಾಕಿ" ಎಂದು ಉದ್ಯೋಗಿ ಒತ್ತಾಯ ಮಾಡಿದ್ದು ಕೇಳಿದೆ. "ನೀವು ಯಾಕೆ ಹೀಗೆ ಮೇಕಪ್ ಮಾಡಿಕೊಂಡಿದ್ದೀರೀ? ನೀವು ತೊಂದರೆ ಕೊಡುತ್ತಿದ್ದೀರಿ" ಎಂದು ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.

ಈ ವಿಡಿಯೋವನ್ನು ಸೆಪ್ಟೆಂಬರ್ 2024 ರಲ್ಲಿ ಶಾಂಘೈ ವಿಮಾನ ನಿಲ್ದಾಣದಲ್ಲಿ ತೆಗೆಯಲಾಗಿದ್ದು, ಇದನ್ನು ಆರಂಭದಲ್ಲಿ ಆಡಿಟಿ ಸೆಂಟ್ರಲ್ ಚೀನಾದ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಮೇಕಪ್‌ ತೆಗೆದ ಬಳಿಕ ಆಕೆಯ ಮುಖವನ್ನು ಗುರುತಿಸಲು ಸ್ಕ್ಯಾನರ್‌ ಯಶಸ್ವಿಯಾಗಿದೆಯೇ ಎನ್ನುವುದು ತಿಳಿದುಬಂದಿಲ್ಲ.

ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆ

ಈ ಕ್ಲಿಪ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 'ರಿಯಲ್‌ ಲೈಫ್‌ಅಲ್ಲೂ ಫಿಲ್ಟರ್‌ ಹಾಕಿಕೊಂಡು ತಿರುಗಾಡುವುದು ತಪ್ಪು ಅನ್ನೋದು ಆಕೆಗೆ ಗೊತ್ತಿಲ್ಲ' ಎಂದು ಬರೆದಿದ್ದಾರೆ."ಇದು ಕಾಸ್ಪ್ಲೇ. ಕೇವಲ ಸಾಮಾನ್ಯ ಮೇಕಪ್ ಅಲ್ಲ," ಎಂದು ಮತ್ತೊಬ್ಬರು ಕಾಮೆಂಟ್‌ಮಾಡಿದ್ದಾರೆ.

ಕೆಲವರು ಯುವತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು, ಅವಳು ಸಾಕಷ್ಟು ಅನಾನುಕೂಲವಾಗಿ ಕಾಣುತ್ತಿದ್ದಳು ಮತ್ತು ಅವಳ ಮೇಕಪ್ ಬಗ್ಗೆ ಕಾಮೆಂಟ್‌ ಮಾಡುವ ಹಕ್ಕು ವಿಮಾನ ನಿಲ್ದಾಣದ ಅಧಿಕಾರಿಗೆ ಇಲ್ಲ ಎಂದು ಹೇಳಿದರು.

"ಆ ಹುಡುಗಿಯನ್ನು ನೋಡಿ ನಗಬಾರದು. ಸಿಬ್ಬಂದಿ ಅವಳ ಭಾವನೆಗಳನ್ನು ನೋಯಿಸಿದ. ಒಳ್ಳೆಯದೂ ಅಲ್ಲ, ತಮಾಷೆಯೂ ಅಲ್ಲ" ಎಂದಿದ್ದಾರೆ. ಆಧುನಿಕ ಮುಖ ಗುರುತಿಸುವಿಕೆ ತಂತ್ರಜ್ಞಾನಕ್ಕೆ ಮೇಕಪ್ ಸಮಸ್ಯೆಯಾಗಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ.

"ಮೇಕಪ್ ಎಷ್ಟೇ ದಪ್ಪವಾಗಿದ್ದರೂ, ಮುಖವನ್ನು ಗುರುತಿಸಲಾಗದಂತೆ ಮಾಡಬಾರದು. ಆದರೆ, ಉಪಕರಣಗಳನ್ನು ಅಪ್‌ಗ್ರೇಡ್ ಮಾಡುವ ಸಮಯ ಇದಲ್ಲವೇ?" ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ಮಾಡೆಲ್ ಜನೈನಾ ಪ್ರಜರೆಸ್ ಅವರನ್ನು ವಿಮಾನ ನಿಲ್ದಾಣದ ಅಧಿಕಾರಿಗಳು 40 ನಿಮಿಷಗಳ ಕಾಲ ಬಂಧಿಸಿದ್ದರು. ಮುಖದ ಶಸ್ತ್ರಚಿಕಿತ್ಸೆಯಿಂದ ಬದಲಾದ ಅವರ ಮುಖವನ್ನು ಗುರುತಿಸಲು ಅವರಿಗೆ ಸಾಧ್ಯವಾಗಿರಲಿಲ್ಲ.

ಪ್ಲೇಬಾಯ್ ನಾರ್ವೆಯಿಂದ "ಪರ್ಫೆಕ್ಟ್‌ ವುಮೆನ್‌" ಎಂದು ಗುರುತಿಸಲಾಗಿದ್ದ ಪ್ರಜರೆಸ್, ಮೂಗು, ದೇಹ, ಸಂಪೂರ್ಣ ಮುಖಕ್ಕೆ 20 ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳಿಗೆ ಸುಮಾರು ಒಂದು ಮಿಲಿಯನ್ ಡಾಲರ್ ಖರ್ಚು ಮಾಡಿದ್ದಾರೆ ಎಂದು ದಿ ಪೋಸ್ಟ್ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!