Cambridge Dictionary ಸೇರಿದ ಜೆನ್ ಜೀ ಬಳಕೆ ಮಾಡುವ ಸ್ಕಿಬಿಡಿ ,ಟ್ರ್ಯಾಡ್ ವೈಫ್ ಅರ್ಥವೇ ವಿಚಿತ್ರ

Published : Aug 20, 2025, 01:18 PM IST
Gen z  Cambridge Dictionary

ಸಾರಾಂಶ

Gen z words : ಜೆನ್ ಜೀಗಳಿಂದ ಹೊಸ ಹೊಸ ಪದ ಬಳಕೆಗೆ ಬರ್ತಿದೆ. ಅದ್ರ ಅರ್ಥವನ್ನು ಎಲ್ಲರಿಗೂ ತಿಳಿಸಲು ಕೇಂಬ್ರಿಡ್ಜ್ ಡಿಕ್ಷನರಿ ಮುಂದಾಗಿದೆ. ಹಾಗಾಗಿ ಜೆನ್ ಜೀ ಬಳಸುವ, ಹೆಚ್ಚು ಚಾಲ್ತಿಯಲ್ಲಿರುವ ಕೆಲ ಪದಗಳನ್ನು ಡಿಕ್ಷನರಿಗೆ ಸೇರಿಸಿದೆ. 

ಒಂದೊಂದು ಜನರೇಷನ್ (Generation) ಬದಲಾಗ್ತಿದ್ದಂತೆ ಹೊಸ ಪದಗಳು ಹುಟ್ಟಿಕೊಳ್ಳುತ್ವೆ. ಜೆನ್ ಜೀಗಳ ಕೆಲ ಪದಗಳ ಅರ್ಥ ಹಿಂದಿನವರಿಗೆ ತಿಳಿಯೋದಿಲ್ಲ. ಮಕ್ಕಳ ಬಾಯಲ್ಲಿ ಕೇಳುವ ವಿಚಿತ್ರ ಶಬ್ಧಗಳಿಗೆ ಅರ್ಥ ಹುಡುಕ್ತಾ ಕೂರ್ತಾರೆ. ಇಂಥ ಸಮಸ್ಯೆ ಬರದೆ ಇರಲಿ ಎನ್ನುವ ಕಾರಣಕ್ಕೆ ಕೇಂಬ್ರಿಡ್ಜ್ ಡಿಕ್ಷನರಿಗೆ ಆಗಾಗ ಹೊಸ ಪದಗಳ ಸೇರ್ಪಡೆಯಾಗುತ್ತದೆ. ಈಗ ಕೇಂಬ್ರಿಡ್ಜ್ ಡಿಕ್ಷನರಿ ತನ್ನ ಆನ್ಲೈನ್ ಡಿಕ್ಷನರಿಗೆ 6,000 ಕ್ಕೂ ಹೆಚ್ಚು ಹೊಸ ಪದಗಳನ್ನು ಸೇರಿಸಿದೆ. ಇವುಗಳಲ್ಲಿ 'ಸ್ಕಿಬಿಡಿ', 'ಡೆಲುಲು' ಮತ್ತು 'ಟ್ರ್ಯಾಡ್ವೈಫ್' ಎಲ್ಲರ ಗಮನ ಸೆಳೆದಿದೆ.

ಡಿಕ್ಷನರಿಗೆ ಹೊಸ ಪದಗಳನ್ನು ಸೇರಿಸುವುದು ಫ್ಯಾಷನ್ ಪ್ರವೃತ್ತಿಯಲ್ಲ. ಇದು ಭಾಷೆಯಲ್ಲಿ ದೀರ್ಘಕಾಲೀನ ಬದಲಾವಣೆಗಳನ್ನು ತೋರಿಸುತ್ತದೆ ಎಂದು ಕೇಂಬ್ರಿಡ್ಜ್ ಡಿಕ್ಷನರಿ ಲೆಕ್ಸಿಕಲ್ ಪ್ರೋಗ್ರಾಂ ಮ್ಯಾನೇಜರ್ ಕಾಲಿನ್ ಮ್ಯಾಕಿಂತೋಷ್ ಹೇಳಿದ್ದಾರೆ. ಇಂಟರ್ನೆಟ್ ಸಂಸ್ಕೃತಿ ನಿರಂತರವಾಗಿ ಇಂಗ್ಲಿಷ್ ಭಾಷೆಯನ್ನು ಬದಲಾಯಿಸುತ್ತಿದೆ. ಅದನ್ನು ಡಿಕ್ಷನರಿಯಲ್ಲಿ ಸೇರಿಸೋದು ಆಸಕ್ತಿಕರ ಎಂದ ಕಾಲಿನ್ ಮ್ಯಾಕಿಂತೋಷ್, ಡಿಕ್ಷನರಿಗೆ ಎಲ್ಲ ಪದಗಳನ್ನು ಸೇರಿಸೋದಿಲ್ಲ. ದೀರ್ಘಕಾಲ ಉಳಿಯುವ ಸಾಧ್ಯತೆಯಿರುವ ಪದಗಳನ್ನು ಮಾತ್ರ ಡಿಕ್ಷನರಿಗೆ ಸೇರಿಸಲಾಗುತ್ತದೆ ಎಂದಿದ್ದಾರೆ. ಈಗ ಡಿಕ್ಷನರಿ ಸೇರಿರುವ ಸ್ಕಿಬಿಡಿ, ಡೆಲುಲು ಮತ್ತು ಟ್ರ್ಯಾಡ್ ವೈಫ್ ಜೆನ್ ಜೀ ಜೊತೆ ಸಂಬಂಧ ಹೊಂದಿದೆ.

ಸ್ಕಿಬಿಡಿ (Skibidi) : ಇದು ಇಂದು ವೈರಲ್ ಪದ. ಇದಕ್ಕೆ ಕೂಲ್ ನಿಂದ ಹಿಡಿದು ಕೆಟ್ಟ ಎನ್ನುವವರೆಗೆ ಅನೇಕ ಅರ್ಥ ಇದೆ. ಯಾವುದೇ ಅರ್ಥವಿಲ್ಲದೆ ತಮಾಷೆಗಾಗಿಯೂ ಈ ಪದ ಬಳಕೆ ಮಾಡ್ತಾರೆ. ಸ್ಕಿಬಿಡಿ ನೀನು ಏನ್ ಮಾಡ್ತಾ ಇದ್ದಿ ಅಂತ ಜೆನ್ ಜೀಗಳು ಸ್ನೇಹಿತರನ್ನು, ಆಪ್ತರನ್ನು ಕೇಳ್ತಿರ್ತಾರೆ. ಸ್ಕಿಬಿಡಿಗೆ ಇಂಥದ್ದೇ ಎನ್ನುವ ಅರ್ಥವಿಲ್ಲ. ರಷ್ಯಾದ ಬ್ಯಾಂಡ್ ಲಿಟಲ್ ಬಿಗ್ನಿಂದಾಗಿ ಇದು ಮತ್ತಷ್ಟು ಪ್ರಸಿದ್ಧಿ ಪಡೀತು. ಅವರ 2018 ರ ಹಿಟ್ ಹಾಡು ಸ್ಕಿಬಿಡಿ 700 ಮಿಲಿಯನ್ಗಿಂತಲೂ ಹೆಚ್ಚು ವೀವ್ಸ್ ಜೊತೆ ವೈರಲ್ ಆಗಿತ್ತು. ಇದಲ್ಲದೆ, ಸೆಲೆಬ್ರಿಟಿಗಳು ಸಹ ಈ ಪದ ಬಳಕೆ ಮಾಡ್ತಿದ್ದಾರೆ. ರಿಯಾಲಿಟಿ ಸ್ಟಾರ್ ಕಿಮ್ ಕಾರ್ಡಶಿಯಾನ್ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಸ್ಕಿಬಿಡಿ ಎಂಬ ಪದವನ್ನು ಬಳಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆದಾರರು, ಕೇಂಬ್ರಿಡ್ಜ್ ಡಿಕ್ಷನರಿ ಬಗ್ಗೆ ಪ್ರತಿಕ್ರಿಯೆ ನೀಡ್ತಾ, ತಮ್ಮ ಮಕ್ಕಳು ಸ್ಕಿಬಿಡಿ ಪದ ಬಳಸ್ತಾರೆ, ಗೊಂಬೆಗೂ ಹೆಸರಿಟ್ಟಿದ್ದಾರೆ ಅಂತ ಕಮೆಂಟ್ ಮಾಡಿದ್ದಾರೆ.

ಟ್ರ್ಯಾಡ್ ವೈಫ್ (Tradwife) : ಟ್ರ್ಯಾಡ್ ವೈಫ್ ಎಂಬ ಪದವು ಟ್ರೆಡಿಷನಲ್ ವೈಫ್ ಎಂಬ ಪದದ ಶಾರ್ಟ್ ಫಾರ್ಮ್. ಟ್ರ್ಯಾಡ್ ವೈಫ್ ಎಂಬುದು ಸಾಂಪ್ರದಾಯಿಕ ಪತ್ನಿ ಎಂಬ ಅರ್ಥವನ್ನು ನೀಡುವ ಹೊಸ ಪದವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ದೇಶೀಯ ಜೀವನವನ್ನು ಉತ್ತೇಜಿಸುವ ಮಹಿಳೆಯರಿಗೆ ಇದನ್ನು ಬಳಸಲಾಗುತ್ತದೆ. ಈ ಮಹಿಳೆಯರು ಸಾಮಾನ್ಯವಾಗಿ ಅಡುಗೆ, ಕ್ಲೀನಿಂಗ್ ಮತ್ತು ಮಕ್ಕಳನ್ನು ಬೆಳೆಸುವ ಬಗ್ಗೆ ತಮ್ಮ ಪೋಸ್ಟ್ ಹಾಕ್ತಿರ್ತಾರೆ. ಅವರು ಸಾಮಾನ್ಯವಾಗಿ 1950 ರ ದಶಕದ ಸಾಂಪ್ರದಾಯಿಕ ಪತ್ನಿ ಪಾತ್ರವನ್ನು ಅಳವಡಿಸಿಕೊಂಡವರು. ಇವರು ಹಳೆಯ ಚಿಂತನೆ ಮತ್ತು ಸ್ಟೀರಿಯೊಟೈಪ್ಗಳನ್ನು ಉತ್ತೇಜಿಸುತ್ತಾರೆ ಎಂದು ಕೆಲವರು ಹೇಳುತ್ತಾರೆ. ಮತ್ತೆ ಕೆಲವರು ಇದನ್ನು ಜೀವನಶೈಲಿಯ ಆಯ್ಕೆ ಎನ್ನುತ್ತಾರೆ.

ಡೆಲುಲು (Delulu) : ಇದು ಡೆಲ್ಯೂಷನಲ್ ಪದದ ಸಣ್ಣ ಮತ್ತು ತಮಾಷೆಯ ಆವೃತ್ತಿಯಾಗಿದೆ. ಇದರ ಅರ್ಥ ಉದ್ದೇಶಪೂರ್ವಕವಾಗಿ ನಿಜವಲ್ಲದದ್ದನ್ನು ನಂಬುವುದು. ಈ ಪದವು ಕೆ-ಪಾಪ್ ಅಭಿಮಾನಿಗಳಿಂದ ಬಂದಿದೆ, ಅಲ್ಲಿ ಜನರು ತಮ್ಮನ್ನು ತಾವು ಸೆಲೆಬ್ರಿಟಿಗಳಂತೆ ಕಲ್ಪಿಸಿಕೊಳ್ಳುತ್ತಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಇದು ಹಾಸ್ಯದ ಪದವಾಗಿ ಬದಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಸರ್ಕಾರದಲ್ಲಿ 63% ಕಮಿಷನ್‌: ಅಶೋಕ್‌
ಸಾಮಾಜಿಕ ಜಾಲತಾಣ ಖಾತೆ ಪಬ್ಲಿಕ್‌ ಇದ್ರಷ್ಟೇ ವೀಸಾ : ಟ್ರಂಪ್‌