2036ವರೆಗೆ ರಷ್ಯಾಗೆ ಪುಟಿನ್ ಅಧ್ಯಕ್ಷ| ಸಂವಿಧಾನ ತಿದ್ದುಪಡಿ ಮಸೂದೆಗೆ ಗ್ರೀನ್ ಸಿಗ್ನಲ್| ಜನಾಭಿಪ್ರಾಯದಲ್ಲೂ ಮೇಲುಗೈ ಸಾಧಿಸಿದ ಪುಟಿನ್
ಮಾಸ್ಕೋ(ಜು.02): 2036ವರೆಗೂ ರಷ್ಯಾದ ಅಧ್ಯಕ್ಷರಾಗಿ ವ್ಲಾಡಿಮಿರ್ ಪುಟಿನ್ ಮುಂದುವರೆಯುವಂತೆ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇದಕ್ಕಾಗಿ ಸುಮಾರು ಒಂದು ವಾರ ನಡೆದ ಜನಾಭಿಪ್ರಾಯ ಸಂಗ್ರಹ ಕಾರ್ಯ ಬುಧವಾರ ಪೂರ್ಣಗೊಂಡಿದೆ. ಇದರಲ್ಲಿ ಪುಟಿನ್ ಇನ್ನೂ ಸುಮಾರು 16 ವರ್ಷ ಅಧ್ಯಕ್ಷರಾಗಿ ಉಳಿಯುವ ಹಾದಿ ಸುಗಮಗೊಂಡಿದೆ. ಹೀಗಿದ್ದರೂ ಈ ಜನಾಭಿಪ್ರಾಯ ಸಂಗ್ರಹದ ವೇಳೆ ಅನೇಕ ಮಂದಿಗೆ ಒತ್ತಾಯ ಹೇರಲಾಗಿದೆ ಎಂಬ ಆರೋಪ ಮಾಧ್ಯಮಗಳಲ್ಲಿ ಕೇಳಿ ಬಂದಿದ್ದವು. ಜನಾಭಿಪ್ರಾಯದಲ್ಲಿ ಪಾಲ್ಗೊಂಡ ಸುಮಾರ್ ಶೇ. 77 ಜನರು ಈ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಕೊರೋನಾ ವಿರುದ್ಧ ಸೆಣಸಲು ಮೋದಿ ಜತೆ ಕೈಜೋಡಿಸಿದ ರಷ್ಯಾ ಪ್ರಧಾನಿ ಪುಟಿನ್
undefined
ಏಪ್ರಿಲ್ ನಲ್ಲೇ ಮುಂದೂಡಿಕೆಯಾಗಿದ್ದ ಪ್ರಕ್ರಿಯೆ
ಪುಟಿನ್‌ರವರ ಅಧಿಕಾರವಧಿ 2024ರ ವೇಳೆಗೆ ಮುಕ್ತಾಯಗೊಳ್ಳುವುದಿತ್ತು. ಆದರೆ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮೂಲಕ ಜನ ಮೆಚ್ಚುಗೆ ಗಳಿಸಿರುವ ವ್ಲಾಡಿಮಿರ್ ಪುಟಿನ್ ಅವರಿಗೆ ಮುಂದಿನ ಎರಡು ಅವಧಿಗೆ ಅಧ್ಯಕ್ಷ ಪಟ್ಟದಲ್ಲಿ ಮುಂದುವರೆಯಲಿದ್ದಾರೆ.
ರಷ್ಯಾದಲ್ಲಿ 1993ರ ಸಂವಿಧಾನದ ಪ್ರಸ್ತಾವಿತ ತಿದ್ದುಪಡಿ ಮಸೂದೆಯಲ್ಲಿ ಮಾಡಿರುವ ಬದಲಾವಣೆಗಳ ಕುರಿತು ಜನವರಿಯಲ್ಲಿ ಬಹಿರಂಗವಾಗಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ರಷ್ಯಾದ ಸಂಸತ್ತು ಸ್ಟೇಟ್ ಡುಮಾ ಸಂವಿಧಾನಿಕ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿತ್ತು. ಇದೀಗ ಜನಾಭಿಪ್ರಾಯದಲ್ಲೂ ಪುಟಿನ್ ಮೇಲುಗೈ ಸಾಧಿಸಿದ್ದು, 67 ವರ್ಷದ ವ್ಲಾಡಿಮಿರ್ ಪುಟಿನ್ ಮುಂದಿನ 12 ವರ್ಷಗಳವರೆಗೂ ಅಂದರೆ 2036ರವರೆಗೂ ರಷ್ಯಾದ ಅಧ್ಯಕ್ಷರಾಗಿ ಅಧಿಕಾರ ನಡೆಸಲಿದ್ದಾರೆ.