
ನವದೆಹಲಿ (ಜ.3): ಕ್ರಿಸ್‌ಮಸ್ ಸ್ಟಾಕಿಂಗ್ಸ್ ಅಂದ್ರೆ ಏನು ಅಂತಾ ಮೊದಲೇ ಹೇಳಿಬಿಡುತ್ತೇವೆ. ಕ್ರಿಸ್‌ಮಸ್ ಸಮಯದಲ್ಲಿ ಮನೆಯ ಕಿಟಕಿಗಳಿಗೆ ಚಿಕ್ಕ ಚಿಕ್ಕ ಸಾಕ್ಸ್‌ಗಳನ್ನು ನೇತು ಹಾಕಿರುತ್ತಾರೆ. ಅದನ್ನು ಯಾರೂ ಬೇಕಾದರೂ ಕಿತ್ತುಕೊಳ್ಳಬಹುದು. ಅದರಲ್ಲಿ ಸಾಂತಾ ಕ್ಲಾಸ್ ಏನಾದರೂ ಗಿಫ್ಟ್ ಹಾಕಿರುತ್ತಾನೆ ಅನ್ನೋ ಪ್ರತೀತಿ ವಿದೇಶಗಳಲ್ಲಿ ಇದೆ. ಅಮೆರಿಕದ ಲೋವಾದಲ್ಲಿರುವ ಮಹಿಳೆಯೊಬ್ಬರು ಕ್ರಿಸ್‌ಮಸ್ ಸಂಭ್ರಮದಲ್ಲಿ ಕಿತ್ತು ತಂದಿದ್ದ ಸಾಕ್ಸ್‌ಗಳನ್ನು ಕಳೆದ ತಿಂಗಳು ಚೆಕ್ ಮಾಡಿದ್ದಾಳೆ. ಇದರಲ್ಲಿ ಆಕೆಗೆ ಒಂದು ಲಾಟರಿ ಟಿಕೆಟ್ ಸಿಕ್ಕಿದೆ. ಲಾಟರಿ ಟಿಕೆಟ್ ಸಿಕ್ಕಿದ್ದು ಮೊದಲಿಗೆ ಆ ಮಹಿಳೆಗ ಖುಷಿ ನೀಡಿರಲಿಲ್ಲ. ಆದರೆ, ಈ ಲಾಟರಿ ಟಿಕೆಟ್‌ಅನ್ನು ಸ್ಕ್ರಾಚ್ ಮಾಡಿದಾಗ ಆಕೆಯ ಅದೃಷ್ಟವೇ ಬದಲಾಗಿ ಹೋಗಿದೆ. ಹೌದು ಆಕೆ ಸ್ಕ್ರಾಚ್ ಮಾಡಿದ ಲಾಟರಿಯು ಅದ್ಭುತ ಎನ್ನುವಂತೆ 1.50 ಲಕ್ಷ ಡಾಲರ್ ಅಂದರೆ, 1 ಕೋಟಿ 28 ಲಕ್ಷ 67, 577.50 ಪೈಸೆ ಗೆಲ್ಲುವಂತೆ ಮಾಡಿದೆ. ಕ್ರಿಸ್‌ಮಸ್ ಸ್ಟಾಕಿಂಗ್‌ನಿಂದ ಆಕೆ ಹೊರತೆಗೆದ ಲಾಟರಿ ಟಿಕೆಟ್ ಅವಳಿಗೆ ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ತಂದು ಕೊಡುವ ಮೂಲಕ ರಾತ್ರೋರಾತ್ರಿ ಆಕೆ ಕೋಟ್ಯಧಿಪತಿ ಆಗಿದ್ದಾಳೆ.
ಟೇಲರ್ ಕ್ಯಾಫ್ರಿ ಹೆಸರಿನ ಮಹಿಳೆಯ ಗೆಲುವನ್ನು ಘೋಷಣೆ ಮಾಡಿರುವ ಲಾಟರಿ ಕಂಪನಿಯ ಸೋಶಿಯಲ್ ಮೀಡಿಯಾ ಪೇಜ್, 'ಗ್ರಿಮ್ಸ್‌ನ ಟೇಲರ್ ಕ್ಯಾಫ್ರಿ ಈ ವರ್ಷದ ಕ್ರಿಸ್ಮಸ್ ಸ್ಟಾಕಿಂಗ್‌ನಲ್ಲಿ ಮನಿ ಗಿಫ್ಟ್ ಸ್ಕ್ರ್ಯಾಚ್ ಟಿಕೆಟ್ ಅನ್ನು ಸಂಪಾದಿಸಿದ್ದರು. ಈ ಲಾಟರಿ ಟಿಕೆಟ್‌ನಿಂದ $150,000 ಬಹುಮಾನವನ್ನು ಗೆದ್ದಿದ್ದಾರೆ. ಸಾಂಟಾ (ಅದು ನಿಜವಾಗಿಯೂ ಅವಳ ತಾಯಿ) ವೆಸ್ಟ್ ಡೆಸ್ ಮೊಯಿನ್ಸ್‌ನಲ್ಲಿರುವ ಹೈ-ವೀ ಫಾಸ್ಟ್ & ಫ್ರೆಶ್, 9150 SE ಯೂನಿವರ್ಸಿಟಿ ಅವೆನ್‌ನಲ್ಲಿ ವಿಜೇತ ಟಿಕೆಟ್ ಖರೀದಿಸಿದರು' ಎಂದು ಬರೆದಿದೆ. ಲಾಟರಿ ಫಲಿತಾಂಶ ಕ್ಷಣವನ್ನು ಸಾಂತಾ ನೀಡಿದ ಗಿಫ್ಟ್ ಡೆಲಿವರಿಯಾಗಿದೆ ಎಂದು ಕಂಪನಿ ಬರೆದುಕೊಂಡಿದೆ.
ತಾಯಿ ಇಟ್ಟಿದ್ದ ಕ್ರಿಸ್‌ಮಸ್ ಸ್ಟಾಕಿಂಗ್‌ನಲ್ಲಿತ್ತು ಲಾಟರಿ ಟಿಕೆಟ್: 25 ವರ್ಷದ ಟೇಲರ್ ಕ್ಯಾಫ್ರಿ ಅವರು ಸ್ಟಾಕಿಂಗ್‌ನಿಂದ ಟಿಕೆಟ್ ಸಂಗ್ರಹಿಸಿದಾಗ ಲಾಟರಿ ಗೆಲುವು ದಾಖಲಿಸಲಾಗಿದೆ. ಕ್ರಿಸ್‌ಮಸ್ ಸ್ಟಾಕಿಂಗ್‌ನೊಳಗೆ ಅದೃಷ್ಟದ ಟಿಕೆಟ್ ಅನ್ನು ಆಕೆಯ ತಾಯಿ ಇರಿಸಿದ್ದಾರೆ ಎಂದು ತಿಳಿದುಬಂದಿದೆ. ಲೋವಾ ಲಾಟರಿಯನ್ನು ಟೇಲರ್ ಗೆದ್ದಿದ್ದು, ಇದರ ಬಹುಮಾನ ಮೊತ್ತ $150,000 ಆಗಿದೆ. ಸಾಮಾನ್ಯವಾಗಿ ನನ್ನ ತಾಯಿ ಫ್ಯಾಮಿಲಿ ಸ್ಟಾಕಿಂಗ್ಸ್‌ನ ವೇಳೆ ಲಾಟರಿ ಟಿಕೆಟ್‌ಗಳು ಇರಿಸುತ್ತಾರೆ ಎಂದು ಹೇಳಿದೆ.
Viral Video: ಚಿಂದಿ ಆಯುವವರಿಗೆ ಸಿಕ್ತು ಮೂಟೆಗಟ್ಟಲೆ 500 ರೂ. ನೋಟುಗಳು, ಆರ್‌ಬಿಐಗೆ ಮನವಿ ಸಲ್ಲಿಸಿದ ನೆಟ್ಟಿಗರು!
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಟೇಲರ್, ಬಹುಮಾನದ ಹಣವನ್ನು ಬಳಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ತನ್ನ ಕಾಲೇಜು ವಿದ್ಯಾಭ್ಯಾಸದ ಸಾಲವನ್ನು ತೀರಿಸಲು ಮತ್ತು ಹೊಸ ಮನೆಯನ್ನು ಖರೀದಿಸಲು ಈ ಮೊತ್ತವನ್ನು ಬಳಸುತ್ತೇನ ಎಂದಿದ್ದಾರೆ.
5 ಸಾವಿರ ರೂಪಾಯಿ ನೋಟು ರಿಲೀಸ್ ಆಗಲಿದ್ಯಾ? ಆರ್‌ಬಿಐ ಹೇಳಿದ್ದಿಷ್ಟು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ