24, 25ರಂದು ಭಾರತಕ್ಕೆ ಟ್ರಂಪ್‌, ಪತ್ನಿ ಜೊತೆ ದಿಲ್ಲಿ, ಅಹಮದಾಬಾದ್‌ ಟೂರ್!

By Web Desk  |  First Published Feb 12, 2020, 8:38 AM IST

24, 25ರಂದು ಭಾರತಕ್ಕೆ ಟ್ರಂಪ್‌| ದಿಲ್ಲಿ, ಅಹಮದಾಬಾದ್‌ಗೆ ಪತ್ನಿ ಜತೆ ಭೇಟಿ| ಮೋದಿ ಜತೆ ದ್ವಿಪಕ್ಷೀಯ ಮಾತುಕತೆ


ವಾಷಿಂಗ್ಟನ್‌[ಫೆ.12]: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಫೆಬ್ರವರಿ 24ರಿಂದ 2 ದಿನ ಭಾರತಕ್ಕೆ ಭೇಟಿ ನೀಡಲಿದ್ದಾರೆ. ನವದೆಹಲಿ ಹಾಗೂ ಅಹಮದಾಬಾದ್‌ಗೆ ಅವರು ಪ್ರವಾಸ ಕೈಗೊಳ್ಳಲಿದ್ದಾರೆ. ಟಂಪ್‌ ಅವರು ಫೆ.24 ಹಾಗೂ 25ರಂದು ಅವರು ಭಾರತ ಪ್ರವಾಸ ಕೈಗೊಳ್ಳುವ ವೇಳೆ ಪತ್ನಿ ಮೆಲಿಂಡಾ ಟ್ರಂಪ್‌ ಕೂಡ ಇರಲಿದ್ದಾರೆ.

ಪ್ರವಾಸದ ವಿವರ ನೀಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸ್ಟೆಫಾನಿ ಗ್ರೀಶಂ, ‘ಟ್ರಂಪ್‌ ಹಾಗೂ ಅವರ ಪತ್ನಿ ದಿಲ್ಲಿ ಹಾಗೂ ಮಹಾತ್ಮಾ ಗಾಂಧೀಜಿ ಅವರ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ ಅಹಮದಾಬಾದ್‌ಗೆ ಭೇಟಿ ನೀಡಲಿದ್ದಾರೆ’ ಎಂದರು.

Tap to resize

Latest Videos

undefined

‘ಇತ್ತೀಚೆಗೆ ಟ್ರಂಪ್‌ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಭಾರತ-ಅಮೆರಿಕ ನಡುವೆ ಪರಸ್ಪರ ವಿಶ್ವಾಸವೃದ್ಧಿ ಕ್ರಮಗಳನ್ನು ಕೈಗೊಳ್ಳಲು ಹಾಗೂ ದ್ವಿಪಕ್ಷೀಯ ಸಂಬಂಧ ಬಲಗೊಳಿಸಲು ನಿರ್ಧರಿಸಿದರು’ ಎಂದು ಸ್ಟೆಫಾನಿ ಹೇಳಿದರು. ರಕ್ಷಣಾ ಸಹಕಾರ, ದಕ್ಷಿಣ ಏಷ್ಯಾದಲ್ಲಿನ ಪರಿಸ್ಥಿತಿ, ಚೀನಾ ಹಾಗೂ ಪಾಕಿಸ್ತಾನದ ಜತೆಗಿನ ಭಾರತದ ಸಂಬಂಧ- ಇತ್ಯಾದಿ ವಿಚಾರಗಳು ಈ ವೇಳೆ ಚರ್ಚೆಗೆ ಒಳಪಡುವ ಸಾಧ್ಯತೆ ಇದೆ.

ಅಹಮದಾಬಾದ್‌ಗೆ ಟ್ರಂಪ್‌ ಭೇಟಿ ನೀಡಿದಾಗ ‘ಕೇಮ್‌ಛೋ ಟ್ರಂಪ್‌’ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಬಹುದು ಎಂದು ಈ ಹಿಂದೆ ಮೂಲಗಳು ಹೇಳಿದ್ದವು. ಆದರೆ ಶ್ವೇತಭವನದ ಘೋಷಣೆಯಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಾಗ ಇದೇ ರೀತಿಯ ‘ಹೌಡಿ ಮೋದಿ’ ಹೆಸರಿನ ಸಮಾರಂಭದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದರು.

ಫೆಬ್ರವರಿ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!