
ಅಮೆರಿಕದ ವ್ಯಕ್ತಿಯೊಬ್ಬ ತಮ್ಮ ಜೀವಮಾನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕುಂಬಳಕಾಯಿ ಬೆಳೆದು ಅದರಿಂದಲೇ ಬೋಟ್ ನಿರ್ಮಾಣ ಮಾಡಿ ನದಿಯಲ್ಲಿ ಪ್ರಯಾಣ ಮಾಡಬೇಕು ಎನ್ನುವ ಅಮೆರಿಕದ ವ್ಯಕ್ತಿಯ ಕನಸೀಗ ನನಸಾಗಿದೆ. ಅಮೆರಿಕದ ಗ್ಯಾರಿ ಕ್ರಿಸ್ಟೆನ್ಸೆನ್ ಎನ್ನುವ ವ್ಯಕ್ತಿ, ವಾಷಿಂಗ್ಟನ್‌ನ ಕೊಲಂಬಿಯಾ ನದಿಯ ಉದ್ದಕ್ಕೂ 73.50 ಕಿಮೀ ದೂರವನ್ನು ಕುಂಬಳಕಾಯಿ ದೋಣಿಯಲ್ಲಿ ಪ್ರಯಾಣ ಮಾಡಿ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. 46 ವರ್ಷದ ವ್ಯಕ್ತಿ ತಮ್ಮ ಕೈಯಿಂದಲೇ ಕೆತ್ತಿದ ಪಂಕಿ ಲೋಫ್ಸ್ಟರ್ ಎನ್ನುವ ಹೆಸರಿನ ಹಡಗಿನಲ್ಲಿ ಪ್ರಯಾಣ ಮಾಡಿದರು. ಅಕ್ಟೋಬರ್ 12 ರಿಂದ 13ರವರೆಗೆ 26 ಗಂಟೆಗಳ ಕಾಲ ನದಿಯಲ್ಲಿ ಕುಂಬಳಕಾಯಿ ದೋಣಿಯಲ್ಲಿ ಪ್ರಯಾಣ ಮಾಡಿ ವಿಶ್ವದಾಖಲೆಯನ್ನು ಪೂರ್ಣ ಮಾಡಿದರು.
ಗ್ಯಾರಿ ಅವರು 2011 ರಿಂದ ದೈತ್ಯ ಕುಂಬಳಕಾಯಿಗಳನ್ನು ಬೆಳೆಯುತ್ತಿದ್ದಾರೆ. 2013 ರಲ್ಲಿ ಅವರು ವೆಸ್ಟ್ ಕೋಸ್ಟ್ ಜೈಂಟ್ ಕುಂಬಳಕಾಯಿ ರೆಗಟ್ಟಾದಲ್ಲಿ ಸ್ಪರ್ಧಿಸಲು ತಮ್ಮ ಮೊದಲ ದೋಣಿ ಗಾತ್ರದ ಕುಂಬಳಕಾಯಿಯನ್ನು ಕೆತ್ತಿದರು, ಈ ಇವೆಂಟ್‌ಅನ್ನು ಕಳೆದ ನಾಲ್ಕು ವರ್ಷಗಳಿಂದಲೂ ಇವರೇ ಗೆಲ್ಲುತ್ತಿದ್ದಾರೆ.
ಒರೆಗಾನ್‌ನ ಹ್ಯಾಪಿ ವ್ಯಾಲಿ ಮೂಲದವರಾದ ಗ್ಯಾರಿ, "ಈ ದಾಖಲೆಯ ಪ್ರಯತ್ನವು ನಾನು ದೀರ್ಘಕಾಲ ಪರಿಗಣಿಸಿದ್ದ ಸವಾಲಾಗಿತ್ತು, ಅಂತಿಮವಾಗಿ ಈ ವರ್ಷ ನಾನು ಪ್ರಯಾಣಕ್ಕೆ ಸೂಕ್ತವಾದ ಕುಂಬಳಕಾಯಿಯನ್ನು ಬೆಳೆಸಿದಾಗ ಅದನ್ನು ಮುಂದುವರಿಸಲು ನಿರ್ಧರಿಸಿದೆ' ಎಂದಿದ್ದಾರೆ.
"ಪಂಕಿ ಲೋಫ್‌ಸ್ಟರ್" ಅನ್ನು ಜುಲೈ 14 ರಂದು ಭೂಮಿಗೆ ನೆಡಲಾಗಿದ್ದರೆ, ಅಕ್ಟೋಬರ್ 4 ರಂದು ಕೊಯ್ಲು ಮಾಡಲಾಗಿತ್ತು.ಅಕ್ಟೋಬರ್ 5 ರಂದು ಒರೆಗಾನ್‌ನ ಗೆರ್ವೈಸ್‌ನಲ್ಲಿನ ಬೌಮನ್ ಹಾರ್ವೆಸ್ಟ್ ಫೆಸ್ಟಿವಲ್‌ನಲ್ಲಿ ಗರಿಷ್ಠ ತೂಕ ಹೊಂದಿರುವ ಕುಂಬಳಕಾಯಿ ಎನ್ನುವ ದಾಖಲೆ ಒಲಿಸಿಕೊಂಡಿತ್ತು.
ಡಿವಿಡೆಂಡ್, ಸ್ಟಾಕ್ ಸ್ಪ್ಲಿಟ್: ಮುಂದಿನ ವಾರ ರೆಕಾರ್ಡ್ ಡೇಟ್ ಹೊಂದಿರುವ ಪ್ರಮುಖ ಷೇರುಗಳಿವು!
ಗ್ಯಾರಿ ಕ್ರಿಸ್ಟೆನ್ಸೆನ್ ಬೆಳೆದಿದ್ದ ಈ ಕುಂಬಳಕಾಯಿ 555.2 ಕೆಜಿ ತೂಕವಿತ್ತು. ಅದು ವಯಸ್ಕ ಡ್ರೊಮೆಡರಿ ಒಂಟೆ ಅಥವಾ ಗ್ರ್ಯಾಂಡ್ ಪಿಯಾನೋದ ತೂಕದಷ್ಟು ಸಮವಾಗಿತ್ತು.
ಅಕ್ಟೋಬರ್ 11 ರಂದು, ಗ್ಯಾರಿ ಕುಂಬಳಕಾಯಿ ದೋಣಿಯನ್ನಾಗಿ ಕೆತ್ತಿದರು ಮತ್ತು ಪೊರಕೆಯಿಂದ ಕ್ಯಾಮೆರಾವನ್ನು ಅಳವಡಿಸಿದರು, ಆದ್ದರಿಂದ ಅವರು ತಮ್ಮ ಪ್ರಯಾಣವನ್ನು ರೆಕಾರ್ಡ್ ಮಾಡಲು ಸಾಧ್ಯವಾಗಿದೆ. ದೋಣಿಯ ಪ್ರತಿ ಭಾಗದಲ್ಲೂ ಅವರು ಇದು ನಿಜ ಎನ್ನುವ ಶಬ್ದವನ್ನು ಹಾಕಿದ್ದರು. ನದಿಯಲ್ಲಿ ಪ್ರಯಾಣ ಮಾಡುವವರಿಗೆ ಇದು ಕುಂಬಳಕಾಯಿ ಫೇಕ್‌ಅಲ್ಲ ನಿಜ ಎಂದು ತಿಳಿಸುವುದು ಅವರ ಉದ್ದೇಶವಾಗಿತ್ತು. ಅವರ ಪ್ರಯಾಣವು ಮೂರು ಲೆಗ್‌ನಲ್ಲಿ ಪೂರ್ಣಗೊಂಡಿತು, 2023 ರಲ್ಲಿ ಸ್ಥಾಪಿಸಲಾದ 63.04 ಕಿಮೀ (39.17 ಮೈಲಿ) ಹಿಂದಿನ ದಾಖಲೆಯನ್ನು ಮಣಿಸಿತು.
'ವಕ್ಫ್ ಬೋರ್ಡ್ ರಿಯಲ್ ಎಸ್ಟೇಟ್ ಕಂಪನಿ..' ಓವೈಸಿಗೆ ತಿರುಗೇಟು ನೀಡಿದ ಟಿಟಿಡಿ ಚೇರ್ಮನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ