ಅಮೆರಿಕ- ಇಸ್ರೇಲ್‌ ದಾಳಿಯಿಂದ ₹25 ಲಕ್ಷ ಕೋಟಿ ನಷ್ಟ; ಕೊಲ್ಲಿ ದೇಶಗಳಿಂದ ಪರಿಹಾರ ಕೇಳಿದ ಇರಾನ್‌

Kannadaprabha News   | Kannada Prabha
Published : Apr 15, 2026, 06:05 AM IST
US Israel Strikes Cause Rs 25 Lakh Crore Loss Iran Demands Compensation from Gulf Nations

ಸಾರಾಂಶ

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಿಂದ ಇರಾನ್‌ಗೆ 25 ಲಕ್ಷ ಕೋಟಿ ರು. ಹಾನಿಯಾಗಿದೆ ಎಂದು ಇರಾನ್ ಸರ್ಕಾರ ಹೇಳಿಕೊಂಡಿದೆ. ಈ ದಾಳಿಗೆ ತಮ್ಮ ನೆಲವನ್ನು ಬಳಸಲು ಅನುಮತಿ ನೀಡಿದ 5 ಅರಬ್ ರಾಷ್ಟ್ರಗಳಿಂದ ಪರಿಹಾರ ನೀಡಬೇಕೆಂದು ವಿಶ್ವಸಂಸ್ಥೆಗೆ ಪತ್ರ ಬರೆದು ಒತ್ತಾಯಿಸಿದೆ.

ಟೆಹ್ರಾನ್‌ (ಏ.15): ಫೆ.28ರಿಂದ ಅಮೆರಿಕ ಮತ್ತು ಇಸ್ರೇಲ್‌ , ಇರಾನ್‌ ಮೇಲೆ ನಡೆಸಿದ ಜಂಟಿ ದಾಳಿಯಿಂದ ಇದುವರೆಗೆ 25 ಲಕ್ಷ ಕೋಟಿ ರು. ಹಾನಿಯಾಗಿದೆ ಎಂದು ಇರಾನ್‌ ಹೇಳಿಕೊಂಡಿದೆ. ಇರಾನ್‌ ಸರ್ಕಾರದ ವಕ್ತಾರ ಫಾತಿಮೆಹ್ ಮೊಹಜೆರಾನಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಉಭಯ ದೇಶಗಳು ನಮ್ಮ ಕೈಗಾರಿಕೆಗಳು, ಸೇನಾ ನೆಲೆಗಳು, ಮೂಲಸೌಕರ್ಯಗಳ ಮೇಲೆ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ನಷ್ಟ ಉಂಟಾಗಿದೆ. ಆದರೆ ಅದರೆ ಅಂತಿಮ ಅಂಕಿ ಅಂಶಗಳಲ್ಲ. ಪೂರ್ಣ ಅಧ್ಯಯನದ ಬಳಿಕ ಈ ಮೊತ್ತ ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಿದ್ದಾರೆ.

ಪರಿಹಾರ ಕೋರಿಕೆ:

ಈ ನಡುವೆ ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ಆರಂಭಿಸಿದ ಯುದ್ಧದಲ್ಲಿ ನೆರವಾಗಿದ್ದಕ್ಕೆ 5 ಅರಬ್‌ ರಾಷ್ಟ್ರಗಳಿಂದ ಪರಿಹಾರಕ್ಕೆ ಒತ್ತಾಯಿಸಿ ವಿಶ್ವಸಂಸ್ಥೆಗೆ ಇರಾನ್‌ ಪತ್ರ ಬರೆದಿದೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್‌ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷ ಜಮಾಲ್ ಫೇರ್ಸ್ ಅಲ್ರೋವೈ ಅವರಿಗೆ ಬರೆದ ಪತ್ರದಲ್ಲಿ ಇರಾನ್‌ ರಾಯಭಾರಿ ಅಮೀರ್ ಸಯೀದ್ ಇರಾವನಿ, ‘ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘಿಸಿ ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ದಾಳಿ ನಡೆಸಲು 5 ದೇಶಗಳು ತಮ್ಮ ನೆಲವನ್ನು ಒದಗಿಸಿವೆ. ಹೀಗಾಗಿ ಇರಾನ್‌ಗೆ ಆಗಿರುವ ಆಸ್ತಿ ಮತ್ತು ನೈತಿಕ ನಷ್ಟವನ್ನು ಬಹರೈನ್‌, ಸೌದಿ ಅರೇಬಿಯಾ, ಕತಾರ್‌, ಯುಎಇ ಮತ್ತು ಜೋರ್ಡಾನ್‌ ದೇಶಗಳು ತುಂಬಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇದು ವಿಶ್ವದ ಅತೀದೊಡ್ಡ ಬಿಯರ್ ಮ್ಯೂಸಿಯಂ, ಎಲ್ಲರಿಗೂ ಪ್ರವೇಶ ಉಚಿತ
ಪಾಕಿಸ್ತಾನದಲ್ಲಿ ಮತ್ತೆ ಸಂಧಾನ ಮಾತುಕತೆಗೆ ವೇದಿಕೆ, ಬಿಲ್ ಬಾಕಿಯಿಂದ ಹೊಟೆಲ್ ಬದಲಾವಣೆ ಸಾಧ್ಯತೆ