ನಾನು ಗೆದ್ದಿದ್ದೇನೆ: ಸೋಲೊಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್!

By Suvarna NewsFirst Published Nov 8, 2020, 9:52 AM IST
Highlights

ಅಮೆರಿಕಗೆ ಹೊಸ ಅಧ್ಯಕ್ಷ| ಬೈಡೆನ್ ಆಯ್ಕೆ ಮಾಡಿದ ಅಮೆರಿಕನ್ನರು| ತಾನು ಗೆದ್ದಿದ್ದೇನೆಂದ ಟ್ರಂಪ್

ವಾಷಿಂಗ್ಟನ್(ನ.08): ತೀವ್ರ ಕುತೂಹಲ ಮೂಡಿಸಿದ್ದ ಅಮೆರಿಕ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡೆನ್ ಗೆಲುವಿನ ಸಂಭ್ರಮದಲ್ಲಿದ್ದಾರೆ. ಆದರೆ ಇತ್ತ ಡೊನಾಲ್ಡ್ ಟ್ರಂಪ್ ಕೂಡಾ ಸೋಲೊಪ್ಪಿಕೊಂಡಿಲ್ಲ. ಬೈಡೆನ್ ಗೆದ್ದಿದ್ದಾರೆಂದು ಘೋಷಿಸಿದ ಬಳಿಕ ಸುಮಾರು ಐದು ಗಂಟೆ ಮೌನವಾಗಿದ್ದ ಟ್ರಂಪ್ ಮತ್ತೆ ಟ್ವೀಟ್ ಮಾಡಿ ತಾನೇ ಗೆದ್ದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಈ ಚುನಾವಣೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.

THE OBSERVERS WERE NOT ALLOWED INTO THE COUNTING ROOMS. I WON THE ELECTION, GOT 71,000,000 LEGAL VOTES. BAD THINGS HAPPENED WHICH OUR OBSERVERS WERE NOT ALLOWED TO SEE. NEVER HAPPENED BEFORE. MILLIONS OF MAIL-IN BALLOTS WERE SENT TO PEOPLE WHO NEVER ASKED FOR THEM!

— Donald J. Trump (@realDonaldTrump)

ಈ ಸಂಬಂಧ ಟ್ವೀಟ್ ಮಾಡಿರುವ ಟ್ರಂಪ್ '‘ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ. ಜೊತೆಗೆ ಯಾವುದೇ ಆಧಾರವಿಲ್ಲದೆ, ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಮತ ಎಣಿಕೆಯಲ್ಲಿ ಲೋಪವಾಗಿದೆ. ಪೆನ್ಸಿಲ್ವೇನಿಯಾದಲ್ಲಿ ಅಕ್ರಮವಾಗಿ 10,000 ಮತ ಚಲಾಯಿಸಲಾಗಿದೆ ಎಂದು ಮತ್ತೊಮ್ಮೆ ಆರೋಪಿಸಿದ್ದಾರೆ. ‘ಬಾಗಿಲು, ಕಿಟಕಿಗಳನ್ನು ಮುಚ್ಚಿ ಮತ ಎಣಿಕೆ ವೇಳೆ ಅಕ್ರಮ ಎಸಗಲಾಗಿದೆ. ಒಳಗಡೆ ಏನೋ ಅಕ್ರಮ ಆಗಿ, ‘ದೊಡ್ಡ’ ಬದಲಾವಣೆ ಆಗಿದೆ' ಎಂದಿದ್ದಾರೆ.

"

ಮೋಸದ ಆರೋಪ:

ಟ್ರಂಪ್ ಮೇಲ್ ಇನ್ ಬ್ಯಾಲೆಟ್ ಮೂಲಕ ಅಕ್ರಮವೆಸಗಿರುವ ಆರೋಪ ಮಾಡಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಮೇಲ್ ಇನ್ ಬ್ಯಾಲೆಟ್ಸ್ ಜನರು ಕಳುಹಿಸಿದ್ದಾರೆ. ಆಧರೆ ಅವರು ಇದನ್ನು ಯಾಚಿಸಿರಲಿಲ್ಲ ಎಂದಿದ್ದಾರೆ. ಅಲ್ಲದೇ ಏಳು ಕೋಟಿಯ 10 ಲಕ್ಷ ದಾಖಲೆಯ ಮತ, ಇಷ್ಟು ಪ್ರಮಾಣದ ಮತ ಈವರೆಗೂ ಯಾವೊಬ್ಬ ಅಧ್ಯಕಗ್ಷರಿಗೂ ಸಿಕ್ಕಿರಲಿಕ್ಕಿಲ್ಲ ಎಂದಿದ್ದಾರೆ. ಟ್ರಂಪ್ ಈ ಹಿಂದೆಯೂ ಮೇಲ್ ಇನ್ ಬ್ಯಾಲೆಟ್ಸ್ ಸಂಬಂಧ ಅನುಮಾನ ವ್ಯಕ್ತಪಡಿಸಿದ್ದರು.

click me!