
ಕೀವ್: ರಷ್ಯಾವನ್ನು ಬೆಚ್ಚಿ ಬೀಳಿಸಿದ ಉಕ್ರೇನ್ ಡ್ರೋನ್ ದಾಳಿಯು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾತ್ರವಲ್ಲ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೂ ನೀಡಿದ ಸಂದೇಶ ಎಂದು ವಿಶ್ಲೇಷಿಸಲಾಗಿದೆ.
2 ತಿಂಗಳ ಹಿಂದೆ ವಾಷಿಂಗ್ಟನ್‌ನಲ್ಲಿ ತಮ್ಮನ್ನು ಭೇಟಿಯಾದ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಕಷ್ಟು ಹೀನಾಮಾನಾ ಬೈದಿದ್ದರು. ‘ನಿಮ್ಮ ಹತ್ತಿರ ಕಾರ್ಡ್‌ಗಳು (ಇಸ್ಪೀಟ್ ಎಲೆಗಳು) ಇಲ್ಲ. ನನ್ನ ಹತ್ತಿರ ಇವೆ. ನಾನು ಹೇಳಿದಂತೆ ಆಟ ನಡೆಯುತ್ತದೆ’ ಎಂದಿದ್ದರು. ಆಗಿನಿಂದಲೇ ಪುಟಿನ್‌ಗೆ ಮಾತ್ರವಲ್ಲ ಟ್ರಂಪ್‌ಗೂ ಸಂದೇಶ ನೀಡಬೇಕೆಂಬ ಉದ್ದೇಶದಿಂದ ಜೆಲೆನ್ಸ್ಕಿ 117 ಡ್ರೋನ್ ಬಳಸಿ ರಷ್ಯಾದ 5 ವಾಯುನೆಲೆಗಳ 40 ಸಮರ ವಿಮಾನ ಧ್ವಂಸಗೊಳಿಸಿದರು ಎಂದು ವರದಿಗಳು ಹೇಳಿವೆ.
2022ರಿಂದ ರಷ್ಯಾ ಮೇಲೆ ಉಕ್ರೇನ್ ನಿಯಮಿತವಾಗಿ ಡ್ರೋನ್‌ಗಳನ್ನು ಉಡಾಯಿಸುತ್ತದೆ, ಆದರೆ ಈ ಬಾರಿ ಬಳಸಿದ ಕಾರ್ಯ ವಿಧಾನ ವಿಭಿನ್ನವಾಗಿತ್ತು. ‘ಸ್ಪೈಡರ್ಸ್ ವೆಬ್’ ಹೆಸರಿನ ಈ ಆಪರೇಷನ್‌ಗೆ ಡ್ರೋನ್‌ಗಳನ್ನು ಮುಂಚಿತವಾಗಿ ರಷ್ಯಾಕ್ಕೆ ಕಳ್ಳಸಾಗಣೆ ಮಾಡಲಾಗಿತ್ತು. ಟ್ರಕ್‌ಗಳಲ್ಲಿ ಅಳವಡಿಸಲಾದ ಮರದ ಕ್ಯಾಬಿನ್‌ಗಳ ಛಾವಣಿಗಳ ಅಡಿಯಲ್ಲಿ ಡ್ರೋನ್ ಹೂತಿಡಲಾಗಿತ್ತು. ದಾಳಿಯ ಸಮಯದಲ್ಲಿ, ಡ್ರೋನ್‌ಗಳು ಅವುಗಳ ಕಡಿಮೆ-ಅಂತರದ ಗುರಿಗಳ ಕಡೆಗೆ ಹಾರಲು ಅನುವು ಮಾಡಿಕೊಡಲು ಈ ತಂತ್ರ ರೂಪಿಸಲಾಗಿತ್ತು. ವಾಯುನೆಲೆ ಸಮೀಪ ಟ್ರಕ್ ಸಾಗುತ್ತಿದ್ದಂತೆಯೇ ರಿಮೋಟ್ ಬಳಸಿ ಡ್ರೋನ್ ಉಡಾಯಿಸಲಾಗಿದೆ. ಹೀಗಾಗಿ ಡ್ರೋನ್‌ಗಳು ಸಮೀಪದ ರಷ್ಯಾ ವಾಯುನೆಲೆ ಹಾಗೂ ಯುದ್ಧವಿಮಾನಗಳನ್ನು ಧ್ವಂಸ ಮಾಡಿವೆ.
ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿ ಹಾರಿಸಬಲ್ಲ ರಷ್ಯಾ ವಿಮಾನಗಳೂ ದಾಳಿಯಲ್ಲಿ ಧ್ವಂಸವಾಗಿವೆ.
ರಷ್ಯಾದ ರಕ್ಷಣಾ ಸಚಿವಾಲಯವೂ ಇದನ್ನು ಖಚಿತಪಡಿಸಿದ್ದು, ‘ಡ್ರೋನ್‌ಗಳನ್ನು ಉಕ್ರೇನ್ ಪ್ರದೇಶದಿಂದ ಹಾರಿಸಿಲ್ಲ. ಬದಲಿಗೆ ರಷ್ಯಾ ವಾಯುನೆಲೆಗಳ ಸಮೀಪದಿಂದಲೇ ಹಾರಿಸಲಾಗಿದೆ’ ಎಂದು ದೃಢಪಡಿಸಿದೆ.
ಒಂದೂವರೆ ವರ್ಷದ ಯೋಜನೆ
ಆಪರೇಷನ್ ಸ್ಪೈಡರ್ ವೆಬ್ 1.5 ವರ್ಷಕ್ಕೂ ಹೆಚ್ಚು ಕಾಲ ನಡೆದ ನಿಖರವಾದ ಯೋಜನೆಯ ಪರಿಣಾಮವಾಗಿದೆ ಮತ್ತು ಇದನ್ನು ಉಕ್ರೇನಿ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಿದ್ದಾರೆ. ನಿಖರವಾಗಿ ಹೇಳುವುದಾದರೆ, ‘ಇದರ ಪರಿಣಾಮಕಾರಿ ಅನುಷ್ಠಾನಕ್ಕೆ 1 ವರ್ಷ-6 ತಿಂಗಳು ಮತ್ತು 9 ದಿನ ಬೇಕಾಯಿತು’ ಎಂದು ಜೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದಲ್ಲೇ ಸ್ಕೆಚ್: ಭಾರಿ ಗುಪ್ತಚರ ವೈಫಲ್ಯ
ರಷ್ಯಾದ ಅತಿದೊಡ್ಡ ಗುಪ್ತಚರ ವೈಫಲ್ಯ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಉಕ್ರೇನಿ ಕಾರ್ಯಾಚರಣೆಯ ಕಚೇರಿಯು ಅವರ ಪ್ರದೇಶಗಳಲ್ಲೇ ಇರುವ ಎಫ್‌ಎಸ್‌ಬಿ ಪ್ರಧಾನ ಕಚೇರಿಯ ಪಕ್ಕದಲ್ಲಿಯೇ ಇತ್ತು. ಎಫ್‌ಎಸ್‌ಬಿ ರಷ್ಯಾದ ಗುಪ್ತಚರ ಮತ್ತು ಭದ್ರತಾ ಸೇವೆ ನೀಡುವ ಸಂಸ್ಥೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ