ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್‌-16 ರಷ್ಯಾದಿಂದ ಧ್ವಂಸ

Published : Jun 30, 2025, 05:41 AM IST
Russia ukrain war update

ಸಾರಾಂಶ

ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಭಾನುವಾರ ಉಕ್ರೇನ್‌ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿದೆ. ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದೆ

ಕೀವ್‌: ರಷ್ಯಾ ಮತ್ತು ಉಕ್ರೇನ್ ನಡುವೆ ಸಮರ ಮುಂದುವರೆದಿದ್ದು, ಭಾನುವಾರ ಉಕ್ರೇನ್‌ ಮೇಲೆ ರಷ್ಯಾ 477 ಡ್ರೋನ್ ಸೇರಿದಂತೆ 537 ವೈಮಾನಿಕ ಸಾಧನಗಳನ್ನು ಹಾರಿಸಿ 3 ವರ್ಷಗಳಲ್ಲೇ ಘನಘೋರ ದಾಳಿ ಮಾಡಿದೆ. ಇದರ ಮಧ್ಯೆಯೇ ಉಕ್ರೇನ್‌ಗೆ ಅಮೆರಿಕ ನೀಡಿದ್ದ ಎಫ್ -16 ಸೂಪರ್‌ನಿಕ್ ಯುದ್ಧ ವಿಮಾನ ಹೊಡೆದುರುಳಿಸಿದೆ ಹಾಗೂ ಅದರಲ್ಲಿದ್ದ ಪೈಲಟ್‌ನನ್ನು ಹತ್ಯೆ ಮಾಡಿದೆ.

ಯುದ್ಧದಲ್ಲಿ ಇದು ಉಕ್ರೇನ್‌ನ ಎಫ್‌-16 ಯುದ್ಧ ವಿಮಾನ ಧ್ವಂಸ ಇದೇ ಮೊದಲು. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲು ಶಾಂತಿ ಮಾತುಕತೆಯ ಪ್ರಸ್ತಾಪ ನಡೆಯುತ್ತಿರುವ ನಡುವೆಯೇ ದಾಳಿ ನಡೆದಿದೆ.

ಈ ಬಗ್ಗೆ ಉಕ್ರೇನ್ ವಾಯುಪಡೆಯ ಸಂವಹನ ವಿಭಾಗದ ಮುಖ್ಯಸ್ಥ ಯೂರಿ ಇಹ್ನಾತ್‌ ಪ್ರತಿಕ್ರಿಯಿಸಿದ್ದು, ‘ಇದುವರೆಗಿನ ಯುದ್ಧದಲ್ಲಿ ರಷ್ಯಾ ಅತಿದೊಡ್ಡ ದಾಳಿ ನಡೆಸಿದೆ. ರಾತ್ರೋರಾತ್ರಿ ಜನವಸತಿ, ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು 477 ಡ್ರೋನ್ , 60 ಕ್ಷಿಪಣಿ ಸೇರಿದಂತೆ 537 ವೈಮಾನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ನಡೆಸಿದೆ. ಈ ಪೈಕಿ 249 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. 226 ಡ್ರೋನ್‌ಗಳು ಎಲೆಕ್ಟ್ರಾನಿಕ್‌ ಜಾಮ್‌ನಿಂದಾಗಿ ನಾಪತ್ತೆಯಾಗಿದೆ. ದಾಳಿಯಲ್ಲಿ ನಮ್ಮ ಒಬ್ಬ ನಾಗರಿಕ ಮಾತ್ರ ಸಾವನ್ನಪ್ಪಿದ್ದಾನೆ’ ಎಂದಿದ್ದಾರೆ.

ನೆಲದಾಳದಿಂದಲೇ ಸೇನೆ ಓಡಾಟಕ್ಕೆ ಅತ್ಯಗತ್ಯವಾಗಿದ್ದ ರಷ್ಯಾ ಸೇತುವೆ ಸ್ಫೋಟಿಸಿದ ಉಕ್ರೇನ್

ಮಾಸ್ಕೋ: ಎರಡು ದಿನಗಳ ಹಿಂದಷ್ಟೇ ರಷ್ಯಾದೊಳಗೆ ತನ್ನ ಲಾರಿಗಳನ್ನು ರಹಸ್ಯವಾಗಿ ಸಾಗಿಸಿ ಬಳಿಕ ಅದರೊಳಗಿಂದ ಡ್ರೋನ್‌ ಹಾರಿಸಿ ರಷ್ಯಾದ 40 ಯುದ್ಧ ವಿಮಾನ ಧ್ವಂಸಗೊಳಿಸಿದ್ದ ಉಕ್ರೇನ್‌, ಇದೀಗ ನೆಲದಾಳದಿಂದಲೇ ದಾಳಿ ನಡೆಸಿ ರಷ್ಯಾದ ಕ್ರೆಮ್ಲಿನ್‌ ಸೇತುವೆಯನ್ನು ಸ್ಫೋಟಿಸಿದೆ.

11000 ಕೆ.ಜಿ.ಯಷ್ಟು ಸ್ಫೋಟಕಗಳನ್ನು ಬಳಸಿ ಈ ಸೇತುವೆಯನ್ನು ಸ್ಫೋಟಿಸಲಾಗಿದೆ. 2014ರಲ್ಲಿ ಉಕ್ರೇನ್‌ನಿಂದ ವಶಪಡಿಸಿಕೊಳ್ಳಲಾದ ಕ್ರೈಮಿಯಾದೊಂದಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆಯ ಕಂಬಗಳಿಗೆ, ಮಂಗಳವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಿಂದ ಭಾರೀ ಹಾನಿಯಾಗಿದ್ದು, ಸೇತುವೆ ಕುಸಿದು ಬಿದ್ದಿದೆ. ಕೆರ್ಚ್ ಜಲಸಂಧಿಯ ಮೇಲೆ ಹಾದು ಹೋಗುವ ಈ ಸೇತುವೆ, ಸೇನೆ ಮತ್ತು ನಾಗರಿಕೆ ಓಡಾಟಕ್ಕೆ ಅತ್ಯವಶ್ಯಕವಾಗಿತ್ತು. 

ಈ ಬಗ್ಗೆ ಉಕ್ರೇನ್‌ನ ಭದ್ರತಾ ಸಂಸ್ಥೆ ಮಾಹಿತಿ ನೀಡಿದ್ದು, ‘ಈ ದಾಳಿ ನಡೆಸಲು ಹಲವು ತಿಂಗಳುಗಳಿಂದ ಯೋಜನೆ ರೂಪಿಸಲಾಗುತ್ತಿತ್ತು’ ಎಂದಿದೆ. ಜತೆಗೆ, ಸ್ಫೋಟದ ವಿಡಿಯೋವನ್ನೂ ಬಿಡುಗಡೆ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ರಷ್ಯಾದ 2 ಸೇತುವೆಗಳು ಕುಸಿದು, ರೈಲುಗಳು ಕೆಳಗುರುಳಿ ಜನರು ಪ್ರಾಣ ಕಳೆದುಕೊಂಡಿದ್ದರು. ಈ ಸ್ಫೋಟವನ್ನೂ ಉಕ್ರೇನ್‌ ನಡೆಸಿದ್ದು ಎಂದು ರಷ್ಯಾ ಆರೋಪಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ