ಆ.31ರೊಳಗೆ ಆಫ್ಘ​ನ್‌ಗೆ ಬ್ರಿಟನ್ನೂ ಬೈ ಬೈ!

By Kannadaprabha NewsFirst Published Aug 26, 2021, 7:47 AM IST
Highlights

* ತಾಲಿಬಾನ್‌ ಕಪಿಮುಷ್ಟಿಗೆ ಸಿಲುಕಿರುವ ಅಷ್ಘಾನಿಸ್ತಾನ

* ತನ್ನ ಸೇನೆಯನ್ನು ಸಹ ಆ.31ರ ಒಳಗಾಗಿ ಸ್ವದೇಶಕ್ಕೆ ಕರೆಸಿಕೊಳ್ಳುವುದಾಗಿ ಬ್ರಿಟನ್‌ ಸಹ ಘೋಷಣೆ 

ಲಂಡನ್‌(ಆ.26): ತಾಲಿಬಾನ್‌ ಕಪಿಮುಷ್ಟಿಗೆ ಸಿಲುಕಿರುವ ಅಷ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಸಹ ಆ.31ರ ಒಳಗಾಗಿ ಸ್ವದೇಶಕ್ಕೆ ಕರೆಸಿಕೊಳ್ಳುವುದಾಗಿ ಬ್ರಿಟನ್‌ ಸಹ ಘೋಷಣೆ ಮಾಡಿದೆ.

ಆಫ್ಘನ್‌ನಲ್ಲಿರುವ ತನ್ನ ಸೇನೆಯನ್ನು ಈ ಹಿಂದೆ ನಿರ್ಧರಿಸಲಾದಂತೆ ಆ.31ರ ಒಳಗಾಗಿ ಕರೆಸಿಕೊಳ್ಳುವುದಾಗಿ ಅಮೆರಿಕ ಪುನರುಚ್ಚರಿ​ಸಿದ ಬೆನ್ನಲ್ಲೇ, ಬ್ರಿಟನ್‌ ಸರ್ಕಾರದ ಹೇಳಿಕೆ ಹೊರಬಿದ್ದಿದೆ.

ಈ ಬಗ್ಗೆ ಬುಧವಾರ ಮಾತನಾಡಿದ ಬ್ರಿಟನ್‌ ವಿದೇಶಾಂಗ ಸಚಿವ ಡೊಮಿನಿಕ್‌ ರಾಬ್‌, ‘ತಾಲಿಬಾನ್‌ ಬಂಡುಕೋರರ ವಶವಾದ ಆಫ್ಘನ್‌ನಿಂದ ನಮ್ಮ ಪ್ರಜೆಗಳ ರಕ್ಷಣೆಗಾಗಿ ನಿಯೋಜಿಸಲಾಗಿರುವ ವಿಮಾನ ಕಾರ್ಯಾಚರಣೆ ಅಂತ್ಯದ ದಿನ ಖಚಿತಪಡಿಸಲಾಗದು. ಆದರೆ ಆ.31ರ ಒಳಗಾಗಿ ಈ ಮಿಷನ್‌ ಪೂರ್ಣಗೊಳ್ಳುವ ವಿಶ್ವಾಸವಿದೆ. ಮಾಸಾಂತ್ಯ​ದೊ​ಳಗೆ ನಮ್ಮ ಸೇನೆ​ಯನ್ನು ಆಫ್ಘ​ನ್‌​ನಿಂದ ಹಿಂಪ​ಡೆ​ಯ​ಲಾ​ಗು​ತ್ತ​ದೆ’ ಎಂದಿದ್ದಾರೆ.

ಬ್ರಿಟನ್‌ ಪಡೆಗಳು ಈಗಾಗಲೇ ತನ್ನ 9000 ಪ್ರಜೆಗಳನ್ನು ಕಾಬೂಲ್‌ ವಿಮಾನ ನಿಲ್ದಾಣದಿಂದ ರಕ್ಷಣೆ ಮಾಡಿವೆ. ಈವ​ರೆಗೆ ಅಮೆ​ರಿಕ ಪಡೆ​ಗಳ ಜತೆ ಬ್ರಿಟನ್‌ ಸೇನೆ ಕೂಡ ಆಫ್ಘ​ನ್‌​ನಲ್ಲಿ ಭದ್ರ​ತೆಗೆ ನಿಯೋ​ಜಿ​ತ​ವಾ​ಗಿ​ತ್ತು.

click me!