ಕೋವಿಡ್ ಲಸಿಕೆಗೇಕೆ ನೊಬೆಲ್ ಸಿಗಲಿಲ್ಲ?: ಲಸಿಕೆಗೆ ಪ್ರಶಸ್ತಿ ಮಿಸ್‌ ಆದ ರಹಸ್ಯ ಬೆಳಕಿಗೆ!

By Suvarna News  |  First Published Oct 11, 2021, 8:41 AM IST

* ಈ ವರ್ಷ ಕೋವಿಡ್‌ ಲಸಿಕೆಗೇಕೆ ನೊಬೆಲ್‌ ದೊರೆಯಲಿಲ್ಲ?

* ಲಸಿಕೆಗೆ ಪ್ರಶಸ್ತಿ ಮಿಸ್‌ ಆದ ರಹಸ್ಯ ಬೆಳಕಿಗೆ


ನ್ಯೂಯಾರ್ಕ್(ಅ.11): ಕೋವಿಡ್‌19(Covid 19) ಸಾಂಕ್ರಾಮಿಕ ಪ್ರಪಂಚವನ್ನು ಆಕ್ರಮಿಸಿದ ನಂತರ ಕೋಟ್ಯಾಂತರ ಜನರ ಜೀವನವನ್ನು ಉಳಿಸಿದ್ದ ಕೋವಿಡ್‌ ಲಸಿಕೆಗೆ(Covid Vaccine) ಈ ವರ್ಷ ವೈದ್ಯಕೀಯ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ(Nobel Award) ದೊರಕಬಹುದು ಎಂದು ಹಲವರು ಊಹೆ ಮಾಡಿದ್ದರು. ಆದರೆ ಅದು ಆಗಲಿಲ್ಲ.

ಇದಕ್ಕೆ ಕಾರಣ ಏನು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಪ್ರತಿ ವರ್ಷದ ನೊಬೆಲ್‌ ಪುರಸ್ಕಾರಕ್ಕೆ ಅರ್ಹರ ಹೆಸರು ಶಿಫಾರಸು ಮಾಡಲು ಫೆ.1 ಕಡೆಯ ದಿನ ಅಷ್ಟರೊಳಗೆ ಸಲ್ಲಿಕೆಯಾದ ಹೆಸರುಗಳನ್ನು ಸ್ಟಾಕ್‌ಹೋಂನ ರಾಯಲ್‌ ಸ್ವೀಡಿಶ್‌ ಅಕಾಡೆಮಿ(Royal Swedish Academy of Sciences in Stockholm) ಪ್ರಶಸ್ತಿಗೆ ಪರಿಗಣಿಸುತ್ತದೆ.

Latest Videos

undefined

ಆದರೆ ಫೆ.1ಕ್ಕೆ ಮೊದಲೇ ಮೊದಲೇ ಕೋವಿಡ್‌ಗೆ ಮೊದಲ ಎಂಆರ್‌ಎನ್‌ಎ(MRNA) ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿತ್ತಾದರೂ, ಅದನ್ನು ಪೂರ್ಣ ಪ್ರಮಾಣದಲ್ಲಿ ನೀಡಲಾಗಿರಲಿ. ಜೊತೆಗೆ ಅದರ ಪರಿಣಾಮಗಳ ಬಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಹೀಗಾಗಿ ನಾಮನಿರ್ದೇಶನದ ವೇಳೆ ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿದವರ ಹೆಸರು ಸೇರ್ಪಡೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಆದರೆ ‘ಕೋವಿಡ್‌ ಲಸಿಕೆಯ ವಿಜಯ ನಿಜಕ್ಕೂ ಅದ್ಭುತವಾದ ಕಥೆ ಹಾಗೂ ಅದು ಮನುಕುಲಕ್ಕೆ ನೀಡಿದ ಕೊಡುಗೆ ಅಪರಿಮಿತವಾದದ್ದು. ಲಸಿಕೆ ತಯಾರಿಕೆಗೆ ಶ್ರಮಪಟ್ಟಎಲ್ಲಾ ವಿಜ್ಞಾನಿಗಳಿಗೆ ನಾವು ಕೃತಜ್ಞರಾಗಿರಬೇಕು. ನೊಬೆಲ್‌ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲು ನಿಗಧಿತ ಕಾಲಮಿತಿ ಇರುತ್ತದೆ. ಇದರೊಟ್ಟಿಗೆ ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆದರೆ ಕೋವಿಡ್‌ ಲಸಿಕೆಗೆ ಸಂಬಂಧಿಸಿದಂತೆ ಇವು ಸಕಾಲದಲ್ಲಿ ಸಲ್ಲಿಕೆಯಾಗದ್ದರಿಂದ ಪ್ರಶಸ್ತಿ ಪಟ್ಟಿಯಲ್ಲಿ ಇರಲಿಲ್ಲ. ಇನ್ನೂ ಸಮಯವಿದೆ ಕಾಯೋಣ’ ಎಂದು ರಾಯಲ್‌ ಸ್ವೀಡಿಶ್‌ ಅಕಾಡೆಮಿಯ ಮುಖ್ಯ ಕಾರ್ಯದರ್ಶಿ ಗೋರನ್‌ ಹ್ಯಾನ್ಸನ್‌ ಹೇಳಿದ್ದಾರೆ.

click me!