
ಕಾಬೂಲ್(ಆ.22): ಅಷ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಳ್ಳುತ್ತಲೇ ಎಲ್ಲೆಡೆ ಹಿಂಸಾಕೃತ್ಯಗಳನ್ನು ನಡೆಸುತ್ತಿರುವ ತಾಲಿಬಾನಿ ಉಗ್ರರು, ಇದೇ ವೇಳೆ ಯಾವುದೇ ಹಿಂಸಾ ಕೃತ್ಯಗಳು ಬೆಳಕಿಗೆ ಬಂದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿವೆ. ಈ ಮೂಲಕ ಜಗತ್ತಿನ ಕಣ್ಣಿಗೆ ಮಣ್ಣೆರೆಚುವ ಯತ್ನವನ್ನು ಮುಂದುವರೆಸಿವೆ.
ಈ ಕುರಿತು ಸುದ್ದಿಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿರುವ, ಹೆಸರು ಹೇಳಬಯಸದ ತಾಲಿಬಾನಿ ವಕ್ತಾರನೊಬ್ಬ, ‘ನಾಗರಿಕರ ವಿರುದ್ಧ ದೌರ್ಜನ್ಯ ಮತ್ತು ದಾಳಿಯ ಘಟನೆಗಳು ನಡೆದಿರುವ ಬಗ್ಗೆ ನಾವು ಕೇಳಿದ್ದೇವೆ. ಒಂದು ವೇಳೆ ನಮ್ಮ ಸದಸ್ಯರು ಇಂಥ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದೇ ಆದಲ್ಲಿ ನಾವು ಆ ಕುರಿತು ತನಿಖೆ ನಡೆಸಲಿದ್ದೇವೆ. ಜನರ ಆತಂಕ, ತಲ್ಲಣಗಳನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ನಾವು ಯಾವುದೇ ಘಟನೆಗೂ ಹೊಣೆಗಾರರಲ್ಲ ಎಂದು ಜನರು ಭಾವಿಸಿರಬಹುದು. ಆದರೆ ಅದು ಅಪನಂಬಿಕೆ’ ಎಂದು ಹೇಳಿದ್ದಾನೆ. ಈ ಮೂಲಕ ನಾವು ಬದಲಾಗಿದ್ದೇವೆ. ಹಿಂದಿನಂತೆ ಯಾರನ್ನೂ ಹಿಂಸಿಸುವುದಿಲ್ಲ, ಮಹಿಳೆಯರನ್ನು ಗೌರವದಿಂದ ಕಾಣುತ್ತೇವೆ ಎಂದು ಜನರಲ್ಲಿ ನಂಬಿಸುವ ಯತ್ನವನ್ನು ಉಗ್ರರು ಮಾಡಿದ್ದಾರೆ.
ಆದರೆ ವಾಸ್ತವವಾಗಿ ದೇಶವನ್ನು ವಶಕ್ಕೆ ಪಡೆಯುತ್ತಲೇ, ಪ್ರಜಾಪ್ರಭುತ್ವ ಪರ ಹೋರಾಟಗಾರರು ಹಾಗೂ ಈ ಹಿಂದೆ ಅಮೆರಿಕ, ನ್ಯಾಟೋ ಪಡೆಗಳಿಗೆ ನೆರವು ನೀಡಿದ ಆಫ್ಘನ್ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಹತ್ಯೆ ಮಾಡಲಾಗುತ್ತಿದೆ. ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಲು ಈಗಾಗಲೇ ಉಗ್ರರು ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ