ಚೀನಾ, ದ.ಕೊರಿಯಾದಲ್ಲಿ ಕೊರೋನಾ ಮತ್ತಷ್ಟು ಅಬ್ಬರ, ಒಂದೇ ದಿನ ಸಾರ್ವಕಾಲಿಕ ದಾಖಲೆ 4 ಲಕ್ಷ ಕೇಸ್‌!

Published : Mar 17, 2022, 09:37 AM ISTUpdated : Mar 17, 2022, 09:52 AM IST
ಚೀನಾ, ದ.ಕೊರಿಯಾದಲ್ಲಿ ಕೊರೋನಾ ಮತ್ತಷ್ಟು ಅಬ್ಬರ, ಒಂದೇ ದಿನ ಸಾರ್ವಕಾಲಿಕ ದಾಖಲೆ 4 ಲಕ್ಷ ಕೇಸ್‌!

ಸಾರಾಂಶ

* ಚೀನಾದಲ್ಲಿ 3,290 ಕೇಸು, 3 ನಗರದಲ್ಲಿ ಲಾಕ್‌ಡೌನ್‌ * ಚೀನಾ, ದ.ಕೊರಿಯಾದಲ್ಲಿ ಕೊರೋನಾ ಮತ್ತಷ್ಟುಅಬ್ಬರ * ನಿನ್ನೆ ಒಂದೇ ದಿನ ಸಾರ್ವಕಾಲಿಕ ದಾಖಲೆ 4 ಲಕ್ಷ ಕೇಸ್‌  

ಬೀಜಿಂಗ್‌/ ಸಿಯೋಲ್‌(ಮಾ.17): ಕಳೆದ 2 ವರ್ಷಗಳಿಂದ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳನ್ನು ಕಾಡಿದ ಕೋವಿಡ್‌ ಮಹಾಮಾರಿ ಇದೀಗ ಚೀನಾ ಹಾಗೂ ದಕ್ಷಿಣ ಕೋರಿಯಾದಲ್ಲಿ ಮತ್ತಷ್ಟುಆವರಿಸಿದ್ದು, ಭಾರೀ ಸೋಂಕು ಹಾಗೂ ಸಾವು ನೋವಿಗೆ ಕಾರಣವಾಗುತ್ತಿದೆ.

ದಕ್ಷಿಣ ಕೊರಿಯಾದಲ್ಲಿ ಬುಧವಾರ ಒಂದೇ ದಿನಕ್ಕೆ 4 ಲಕ್ಷಕ್ಕೂ ಅಧಿಕ ಕೋವಿಡ್‌ ಕೇಸುಗಳು ದಾಖಲಾಗಿದೆ. ಇದು ಈವರೆಗೆ ದಾಖಲಾದ ದೈನಂದಿನ ಪ್ರಕರಣಗಳಲ್ಲಿ ಸಾರ್ವಕಾಲಿಕ ಗರಿಷ್ಠವಾಗಿದೆ. ಇದರೊಂದಿಗೆ ದಕ್ಷಿಣ ಕೋರಿಯಾದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 76.2 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 293 ಸೋಂಕಿತರು ಸಾವಿಗೀಡಾಗಿದ್ದಾರೆ.

ಚೀನಾದಲ್ಲೂ ಕೋವಿಡ್‌ ಆರ್ಭಟ:

ಚೀನಾದಲ್ಲಿ ಬುಧವಾರ 3,290 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಚೀನಾದ ಶೆನ್‌ಜೆನ್‌ ಸೇರಿ 13 ನಗರಗಳಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದ್ದು, ಶಾಂಘೈ ಹಾಗೂ ಇನ್ನಿತರ ಪ್ರದೇಶದಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ.

2019ರಲ್ಲಿ ಮೊಟ್ಟಮೊದಲು ಚೀನಾದ ವುಹಾನ್‌ನಲ್ಲಿ ಕೋವಿಡ್‌ ವೈರಸ್‌ ಪತ್ತೆಯಾದರೂ ಕಳೆದ 1 ವರ್ಷದಿಂದ ಚೀನಾದಲ್ಲಿ ಒಂದೇ ಒಂದು ಕೋವಿಡ್‌ ಸೋಂಕಿತರ ಸಾವಿನ ಪ್ರಕರಣ ವರದಿಯಾಗಿರಲಿಲ್ಲ. ಆದರೆ ಸಕ್ರಿಯ ಸೋಂಕಿತರಲ್ಲಿ 11 ಜನರ ಸ್ಥಿತಿ ಸಾಕಷ್ಟುಗಂಭೀರವಾಗಿದೆ ಎನ್ನಲಾಗಿದೆ. ಒಮಿಕ್ರೋನ್‌ ರೂಪಾಂತರಿಯಿಂದಾಗಿ ಚೀನಾದಲ್ಲಿ ಕೋವಿಡ್‌ ಪ್ರಕರಣದಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ವಿರುದ್ಧ ಶೂನ್ಯ ಸಹನೆ ನೀತಿ ಹೊಂದಿದ ಚೀನಾ ಲಾಕ್‌ಡೌನ್‌ ನಿಯಮಗಳನ್ನು ಮತ್ತಷ್ಟುಕಠಿಣಗೊಳಿಸಿದೆ.

ಎಚ್ಚರದಿಂದಿರಿ, ಜೀನೋಮ್‌ ಪರೀಕ್ಷೆ ಹೆಚ್ಚಿಸಿ: ಕೇಂದ್ರ ಸೂಚನೆ

ನವದೆಹಲಿ: ವಿದೇಶಗಳಲ್ಲಿ ಕೋರನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಬುಧವಾರ ಕೋವಿಡ್‌ ಉನ್ನತ ಮಟ್ಟದ ಸಭೆ ನಡೆಸಿದರು. ಪೂರ್ವ ಏಷ್ಯಾ ರಾಷ್ಟ್ರಗಳು ಮತ್ತು ಯುರೋಪ್‌ನಲ್ಲಿ ಕೋವಿಡ್‌ ಸಾಂಕ್ರಾಮಿಕ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಾಗರೂಕರಾಗಿರುವಂತೆ ಮತ್ತು ಜಿನೋಮ್‌ ಸೀಕ್ವೆನ್ಸಿಂಗ್‌ ಅನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ವಿಶ್ವದ ಕೋವಿಡ್‌ ಕೇಸಲ್ಲಿ 8% ಏರಿಕೆ: ವಿಶ್ವ ಆರೋಗ್ಯ ಸಂಸ್ಥೆ

 

ಕಳೆದ ವಾರ ಜಗತ್ತಿನಾದ್ಯಂತ 1.1 ಕೋಟಿ ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಕೋವಿಡ್‌ ಪ್ರಕರಣಗಳಲ್ಲಿ ಶೇ. 8 ರಷ್ಟುಏರಿಕೆ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿ ಮಾಡಿದೆ.

ಆದರೆ, ಇದೇ ವೇಳೆ ಕೇವಲ 43,000 ಸೋಂಕಿತರು ಮೃತಪಟ್ಟಿದ್ದಾರೆ. ಹೀಗಾಗಿ ಸೋಂಕಿನಲ್ಲಿ ಏರಿಕೆಯಾದರೂ ಕೋವಿಡ್‌ ಮರಣದ ದರ ಶೇ. 17 ರಷ್ಟುಇಳಿಕೆಯಾಗಿದೆ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

ಪಶ್ಚಿಮ ಫೆಸಿಪಿಕ್‌ನಲ್ಲಿ ಸೋಂಕು ಶೇ. 29ರಷ್ಟುಹಾಗೂ ಆಫ್ರಿಕಾದಲ್ಲಿ ಶೇ. 12ರಷ್ಟುಏರಿಕೆಯಾಗಿದೆ. ಅದೇ ನೈಋುತ್ಯ ಏಷ್ಯಾದಲ್ಲಿ ಸೋಂಕು ಶೇ. 20ರಷ್ಟುಇಳಿಕೆ ದಾಖಲಿಸಿದೆ. ಕೆಲವು ದಿನಗಳ ಹಿಂದೆ ಸ್ವೀಡನ್‌ ಹಾಗೂ ಬ್ರಿಟನ್‌ ಕೋವಿಡ್‌ ಪರೀಕ್ಷೆ ನಡೆಸುವುದನ್ನೇ ಕೈ ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಯುರೋಪಿನಲ್ಲಿ ಶೇ.2ರಷ್ಟುಮಾತ್ರ ಕೋವಿಡ್‌ ಸೋಂಕಿನಲ್ಲಿ ಏರಿಕೆ ದಾಖಲಾಗಿದೆ.

ಜಗತ್ತಿನ ಹಲವಾರು ದೇಶಗಳು ಕಡಿಮೆ ಪ್ರಮಾಣದಲ್ಲಿ ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಸೋಂಕಿತರೂ ಪರೀಕ್ಷೆಗೊಳಗಾಗದೇ ಮುಕ್ತವಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದು ಕೂಡಾ ಕೋವಿಡ್‌ ಪ್ರಕರಣ ಏರಿಕೆಯಾಗುವುದಕ್ಕೆ ಕಾರಣವಾಗಬಹುದು ಎಂದು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿದೆ.

ಒಮಿಕ್ರೋನ್‌ ಈಗ ಜಗತ್ತಿನ ಪ್ರಬಲ ತಳಿ:

ಜಗತ್ತಿನಾದ್ಯಂತ ಒಮಿಕ್ರೋನ್‌ ರೂಪಾಂತರಿ ತೀವ್ರವಾಗಿ ಹರಡುತ್ತಿದ್ದು, ಕಳೆದ ತಿಂಗಳಿನಲ್ಲಿ ನಡೆಸಲಾದ 4 ಲಕ್ಷಕ್ಕೂ ಅಧಿಕ ಕೋವಿಡ್‌ ಪರೀಕ್ಷೆಗಳಲ್ಲಿ ಶೇ. 99.9 ಒಮಿಕ್ರೋನ್‌ ಕೇಸುಗಳು ವರದಿಯಾಗಿವೆ ಎಂದು ವೈರಾಣು ತಜ್ಞೆ ಮರೀನಾ ವಾನ್‌ ಖೆರ್ಕೋವ್‌ ಬುಧವಾರ ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಒಮಿಕ್ರೋನ್‌ನ ಬಿ 1 ಹಾಗೂ ಬಿ 2 ಉಪ ತಳಿಗಳು ಜಗತ್ತಿನಲ್ಲಿ ಪ್ರಬಲ ತಳಿಗಳಾಗಿ ಹೊರಹೊಮ್ಮಿವೆ.

ಜಾಗತಿಕವಾಗಿ ಕೋವಿಡ್‌ ಸಂಬಂಧಿ ನಿರ್ಬಂಧಗಳನ್ನು ತೆರವು ಮಾಡಿದ್ದರಿಂದ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ, ಆದರೆ ಲಸಿಕಾಕರಣ ಪ್ರಕ್ರಿಯೆ ಪೂರ್ಣಗೊಳಿಸಿದ ದೇಶಗಳಲ್ಲಿ ಕೋವಿಡ್‌ ಸೋಂಕಿನ ತೀವ್ರತೆ ಹಾಗೂ ಸಾವಿನ ಪ್ರಮಾಣ ಕನಿಷ್ಟವಾಗಿದೆ. ಇದು ಲಸಿಕೆಯ ಪರಿಣಾಮಕಾರಿತ್ವವನ್ನು ಸೂಚಿಸುತ್ತದೆ ಎಂದು ಮರೀನಾ ಅಭಿಪ್ರಾಯ ಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!