ಮೊಜ್ತಬಾ ಪತ್ತೆಗಾಗಿ ಅಮೆರಿಕ,ಇಸ್ರೇಲ್‌ ಗುಪ್ತಚರ ಹುಡುಕಾಟ

Kannadaprabha News   | Kannada Prabha
Published : Mar 23, 2026, 03:29 AM IST
Mojtaba Khamanei

ಸಾರಾಂಶ

ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಅಲಿ ಖಮೇನಿಯನ್ನು ಹತ್ಯೆ ಮಾಡಿದ ಅಮೆರಿಕ-ಇಸ್ರೇಲ್‌ ಇದೀಗ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಗಾಗಿ ಹುಡುಕಾಟ ನಡೆಸುತ್ತಿವೆ ಗುಪ್ತಚರ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ

ಟೆಹ್ರಾನ್‌: ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಅಲಿ ಖಮೇನಿಯನ್ನು ಹತ್ಯೆ ಮಾಡಿದ ಅಮೆರಿಕ-ಇಸ್ರೇಲ್‌ ಇದೀಗ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಗಾಗಿ ಹುಡುಕಾಟ ನಡೆಸುತ್ತಿವೆ.

ಗುಪ್ತಚರ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ

ತಂದೆಯ ಸಾವಿನ ಬಳಿಕ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳದ ಮೊಜ್ತಬಾ ಪತ್ತೆಗಾಗಿ ಶತ್ರುದೇಶಗಳ ಗುಪ್ತಚರ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪರ್ಷಿಯನ್ನರ ಹೊಸ ವರ್ಷ ನೊವ್ರುಜ್‌ ಪ್ರಯುಕ್ತ ಕಾಣಿಸಿಕೊಂಡಿಲ್ಲ

ಶುಕ್ರವಾರ ಪರ್ಷಿಯನ್ನರ ಹೊಸ ವರ್ಷ ನೊವ್ರುಜ್‌ ಪ್ರಯುಕ್ತ ಮೊಜ್ತಬಾ ತಮ್ಮ ತಂದೆಯಂತೆಯೇ ಸಾರ್ವಜನಿಕರನ್ನುದ್ದೇಶಿ ಮಾತನಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಮೊಜ್ತಬಾ ಅಲ್ಲಿಯೂ ಕಾಣಿಸಿಕೊಂಡಿಲ್ಲ. ಬದಲಾಗಿ ಅವರ ಲಿಖಿತ ಸಂದೇಶವನ್ನು ಟೆಲಿಗ್ರಾಂ ಮೂಲಕ ರವಾನಿಸಲಾಗಿದೆ. ಇದರಿಂದ ಅಮೆರಿಕ ಹಾಗೂ ಇಸ್ರೇಲ್‌ಗೆ ಕೊಂಚ ನಿರಾಸೆಯಾಗಿದೆ. ಆದರೂ ಮೊಜ್ತಬಾ ತಮ್ಮ ದಾಳಿಗೆ ಸಾವನ್ನಪ್ಪಿದ್ದಾರೆ ಎಂಬ ವಾದವನ್ನೇ ಮತ್ತೆ ಮತ್ತೆ ಉಚ್ಚರಿಸುತ್ತಿದ್ದು, ‘ಇರಾನ್‌ಗೆ ಮೊಜ್ತಬಾ ಅವರೇ ಆದೇಶ ನೀಡುತ್ತಿದ್ದಾರೆ’ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಅನುಮಾನ ವ್ಯಕ್ತಪಡಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಗುವಿನ ಆರೈಕೆಗೆ 'ವರ್ಕ್ ಫ್ರಂ ಹೋಮ್' ನಿರಾಕರಣೆ: ಮಗು ಸಾವು, ಕಂಪನಿಯಿಂದ ₹211 ಕೋಟಿ ಪರಿಹಾರ ಕಕ್ಕಿಸಿದ ಕೋರ್ಟ್!
Alcohol History: ಬಿಯರ್ ಕುಡಿಯುವಾಗ ಚಿಯರ್ಸ್ ಹೇಳೋದು ತಪ್ಪಾ? ಇತಿಹಾಸ ಏನು ಹೇಳುತ್ತೆ ನೋಡಿ