ಎಲ್ಲೆಲ್ಲೂ ಚಿನ್ನ, ಚಿನ್ನ... ಭೂಮಿಯ ಒಳಗಿನಿಂದ ಸೋರಿಕೆ ಆಗ್ತಿದೆ ಬಂಗಾರ! ಅಬ್ಬಬ್ಬಾ ಏನಿದು ವಿಷ್ಯ?

Published : May 24, 2025, 12:11 PM ISTUpdated : May 30, 2025, 12:27 PM IST
Gold from earth

ಸಾರಾಂಶ

ಹವಾಯಿಯನ್ ಜ್ವಾಲಾಮುಖಿ ಪ್ರದೇಶದಲ್ಲಿ ಭೂಮಿಯ ಮಧ್ಯಭಾಗದಿಂದ ಚಿನ್ನ ಸೋರಿಕೆಯಾಗುತ್ತಿರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಭೂಮಿಯ ಹೊರಪದರದ ಬಿರುಕುಗಳ ಮೂಲಕ ಹರಿಯುವ ಶಾಖ, ಖನಿಜಗಳಿಂದ ಸಮೃದ್ಧವಾಗಿರುವ ದ್ರವಗಳಿಂದ ಚಿನ್ನ ರೂಪುಗೊಳ್ಳುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಚಿನ್ನ ಎಂದರೆ ಸಾಕು, ಬಹುತೇಕ ಮಂದಿಯ ಕಣ್ಣಲ್ಲಿ ಕೋಲ್ಮಿಂಚು ಹರಿದುಬಿಡುತ್ತದೆ. ಬಂಗಾರ ಎಂದಾಕ್ಷಣ ಮಹಿಳೆಯರ ವಿಷಯ ಎಂದು ಹೇಳುವ ಹಾಗಿಲ್ಲ. ಏಕೆಂದರೆ ಇಂದು ಪುರುಷರೂ ಕೂಡ ಚಿನ್ನಾಭರಣ ಧರಿಸುವಿಲ್ಲಿ ಹಿಂದೆ ಬಿದ್ದಿಲ್ಲ. ಚಿನ್ನದ ರೇಟ್​ ಲಕ್ಷ ಲಕ್ಷದ ಗಡಿ ದಾಟಿದರೂ ಹಲವರಿಗೆ ಇದು ಲೆಕ್ಕವೇ ಅಲ್ಲ. ಅದರಲ್ಲಿಯೂ ಹಬ್ಬದ ದಿನಗಳಲ್ಲಿ ಕೆಲವೊಂದು ಆಭರಣಗಳ ಮಳಿಗೆಯನ್ನು ನೋಡಿದರೆ, ಚಿನ್ನಾಭರಣ ಕೊಳ್ಳಲು ಜಾತ್ರೆಯೇ ಸೇರಿರುತ್ತದೆ.ಅಷ್ಟು ಮಹತ್ವ ಚಿನ್ನಕ್ಕಿದೆ. ಇನ್ನು ಭೂಮಿಯ ಒಳಗಿನಿಂದಲೇ ಚಿನ್ನದ ಸೋರಿಕೆ ಆಗುತ್ತಿದೆ ಎಂದು ತಿಳಿದರೆ? ಆದರೆ ಇದೀಗ ಸಂಶೋಧಕರು ಭೂಮಿಯ ಒಳಗಿನಿಂದ ಚಿನ್ನದ ಸೋರಿಕೆ ಆಗುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಹವಾಯಿಯನ್ ಜ್ವಾಲಾಮುಖಿ ಪ್ರದೇಶದಲ್ಲಿ ಭೂಮಿಯ ಮಧ್ಯಭಾಗದಿಂದ ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳು ಮೇಲಿನ ಮೇಲ್ಮೈಗೆ ಸೋರಿಕೆಯಾಗುತ್ತಿರುವುದು ಬಹಿರಂಗಪಟ್ಟಿದೆ. ಭೂಮಿಯ ಶೇಕಡಾ 99.99 ಕ್ಕೂ ಹೆಚ್ಚು ಚಿನ್ನ ಮತ್ತು ರುಥೇನಿಯಮ್‌ನಂತಹ ಅಮೂಲ್ಯ ಲೋಹಗಳ ನಿಕ್ಷೇಪಗಳು 3,000 ಕಿಮೀ ಘ.ನ ಬಂಡೆಯ ಕೆಳಗೆ ಮತ್ತು ಮಾನವಕುಲದ ವ್ಯಾಪ್ತಿಯಿಂದ ದೂರದಲ್ಲಿ ಲಾಕ್ ಆಗಿವೆ. ಅದು ಈಗ ಸೋರಿಕೆ ಆಗುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಅಷ್ಟಕ್ಕೂ ಚಿನ್ನದ ನಿಜವಾದ ಹುಟ್ಟಿನ ಬಗ್ಗೆ ಅಧ್ಯಯನ ನಡೆಯುತ್ತಲೇ ಇದೆ. ಇದಕ್ಕೆ ಇದುವರೆಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಮಧ್ಯ ಮತ್ತು ಉತ್ತರ ಅಮೆರಿಕದಲ್ಲಿ ಜ್ವಾಲಾಮುಖಿಯಿಂದ ಚಿನ್ನ ರೂಪುಗೊಂಡಿದೆ ಎಂದು ಹೇಳುವ ಕೆಲವು ಸಂಶೋಧನೆಗಳು ಇವೆ. ಈ ಭಾಗಗಳಲ್ಲಿ ಕಬ್ಬಿಣಕ್ಕೂ ಮೊದಲೇ ಚಿನ್ನ ಕಂಡುಬಂದಿದ್ದು, ಅಲ್ಲಿನ ಜನರು ಉಪಯೋಗಿಸುತ್ತಿದ್ದ ಪಾತ್ರೆಗಳು, ಕುರ್ಚಿಗಳು, ಚಮಚಗಳು, ಎಲ್ಲವೂ ಚಿನ್ನದಿಂದ ಮಾಡಲ್ಪಟ್ಟವು. ಯುರೋಪಿಯನ್ನರ ದಾಳಿ ನಂತರ ಇಲ್ಲಿನ ಚಿನ್ನವನ್ನೆಲ್ಲಾ ದೋಚಿದರು ಎಂದು ಹೇಳಲಾಗುತ್ತದೆ.

ಅಮೆರಿಕದ ಸೌತ್‌ವೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಸಿಮೋನ್ ಮಾರ್ಚ್ ಪ್ರಕಾರ, ಭೂಮಿಯ ಹೊರಪದರದಲ್ಲಿನ ಬಿರುಕುಗಳ ಮೂಲಕ ಹರಿಯುವ ಶಾಖ, ಖನಿಜಗಳ ಸಮೃದ್ಧವಾಗಿರುವ ದ್ರವಗಳಿಂದ ರೂಪುಗೊಳ್ಳುತ್ತದೆ. ಈ ದ್ರವ ತಣ್ಣಗಾದಾಗ ಚಿನ್ನದ ಅದಿರಾಗಿ ರೂಪುಗೊಳ್ಳುತ್ತವೆ ಎಂದು ಹೇಳಿದ್ದರು. ಈ ಭೂಮಿಯ ರಚನೆಯ ಸಮಯದಲ್ಲಿ, ಚಂದ್ರನ ಗಾತ್ರದ ಬೃಹತ್ ಗ್ರಹಗಳ ತುಣುಕು ಭೂಮಿಗೆ ಡಿಕ್ಕಿ ಹೊಡೆದು ಅದರೊಳಗೆ ನುಗ್ಗಿತು. ಆ ಸಂದರ್ಭದಲ್ಲಿ ಚಿನ್ನ ಮತ್ತು ಪ್ಲಾಟಿನಂನಂತಹ ಲೋಹಗಳು ಭೂಮಿಯ ಒಳಭಾಗದಲ್ಲಿ ವಿವಿಧ ಪ್ರಕ್ರಿಯೆಗಳಿಂದ ರೂಪುಗೊಂಡವು ಎಂದು ಅವರು ಬಹಿರಂಗಪಡಿಸಿದ್ದಾರೆ. 'ಚಿನ್ನ ಮತ್ತು ಪ್ಲಾಟಿನಂನಂತಹ ಅಮೂಲ್ಯ ಲೋಹಗಳ ರಚನೆಯಲ್ಲಿ ಭೂಮಿಗೆ ಅಪ್ಪಳಿಸುವ ಬೃಹತ್ ತುಣುಕುಗಳ ಪಾತ್ರವನ್ನು ನಮ್ಮ ಸಂಶೋಧನೆ ಸ್ಪಷ್ಟಪಡಿಸಿದೆ. ಭೂಮಿಯಲ್ಲಿರುವ ಲೋಹಗಳ ಪ್ರಮಾಣವು ಈ ಹಿಂದೆ ಅಂದಾಜಿಸಲಾಗಿದ್ದಕ್ಕಿಂತ ಎರಡರಿಂದ ಐದು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ತಿಳಿಸಿತ್ತು.

ಇದರ ಅಧ್ಯಯನ ನಡೆಯುತ್ತಿರುವ ಸಂದರ್ಭದಲ್ಲಿಯೇ, ಎಂದು ಗೊಟ್ಟಿಂಗನ್ ವಿಶ್ವವಿದ್ಯಾಲಯದ ಅಧ್ಯಯನದ ಸಹ-ಲೇಖಕ ನಿಲ್ಸ್ ಮೆಸ್ಲಿಂಗ್ ಈಗ ಚಿನ್ನದ ಸೋರಿಕೆ ಕುರಿತು ವಿವರಣೆ ನೀಡಿದ್ದಾರೆ. "ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳು ಸೇರಿದಂತೆ ಭೂಮಿಯ ಮಧ್ಯಭಾಗದಿಂದ ಸೋರಿಕೆ ಆಗುತ್ತಿವೆ ಎನ್ನುವುದು ಅವರ ಮಾತು. ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ನದಿಯಲ್ಲಿ ಹೊಳೆಯುವ ಚಿನ್ನದ ಕಣಗಳನ್ನು ಕಂಡುಬಂದ ಇತಿಹಾಸ ಕೂಡ ಇದೆ. ನಂತರ ಈ ಚಿನ್ನದ ಕಣಗಳನ್ನು ಸಂಗ್ರಹಿಸಲು ಅಮೆರಿಕನ್ನರು ಒಂದು ಹಳ್ಳಿಯನ್ನ ಸೃಷ್ಟಿಸಿದರು. ಇದು ಈಗ ಸ್ಯಾನ್ ಫ್ರಾನ್ಸಿಸ್ಕೋ ಎಂದೇ ಕರೆಯಲಾಗುತ್ತಿದೆ. ಇಂದು ವಿಶ್ವದಲ್ಲೇ ಅತಿ ಹೆಚ್ಚು ಚಿನ್ನವನ್ನು ಹೊಂದಿರುವ ರಾಷ್ಟ್ರ ಅಮೆರಿಕಾ. ಅದರ ಬಳಿ 8000 ಟನ್​ ಚಿನ್ನವಿದೆ ಎಂದು ನಂಬಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!