ಸಖತ್ ಸಂಶೋಧನೆ; ಕೊರೋನಾ ಬಂದೋದವ ಮುಂದಿನ 10 ತಿಂಗಳು ಬಚಾವ್!

Published : Jun 04, 2021, 10:29 PM ISTUpdated : Jun 04, 2021, 10:35 PM IST
ಸಖತ್ ಸಂಶೋಧನೆ; ಕೊರೋನಾ ಬಂದೋದವ ಮುಂದಿನ 10 ತಿಂಗಳು ಬಚಾವ್!

ಸಾರಾಂಶ

* ಕೊರೋನಾ ವಿಚಾರದಲ್ಲಿ ಹೊಸದೊಂದು ಅಧ್ಯಯನ ವರದಿ * ಸೋಂಕಿನ ಸಮಯಮಿತಿ ಹೇಳಿದ ಸಂಶೋಧನೆ * ಒಮ್ಮೆ ಕಾಣಿಸಿಕೊಂಡರೆ ಹತ್ತು ತಿಂಗಳು ಬಚಾವ್ * ಗುಣಮುಖನಾದವನಿಗೆ ಮುಂದಿನ ಹತ್ತು ತಿಂಗಳು ಕೊರೋನಾ ಸಾಧ್ಯತೆ ಕಡಿಮೆ

ಲಂಡನ್(ಜೂ.  04)  ಅಧ್ಯಯನವೊಂದು ವೈರಸ್ ನ ಸಮಯ ಮಿತಿ ವಿಚಾರದಲ್ಲಿ ಒಂದಿಷ್ಟು ಅಂಶಗಳನ್ನು ಹೆಕ್ಕಿ ತೆಗೆದಿದೆ . ಮೊದಲ ಸೋಂಕು ದಾಖಲಾಗಿ ಸರಿಯಾಗಿ 10  ತಿಂಗಳ ನಂತರ ಸೋಂಕು ಇಳಿಕೆಯ ಹಾದಿಗೆ ಬರುತ್ತದೆ  ಎಂದು ಹೇಳಿದೆ.

ಇಂಗ್ಲೆಂಡ್ ಲ್ಯಾನ್ಸೆಟ್  ಜರ್ನಲ್ ನಲ್ಲಿ ಪ್ರಕಟವಾದ ಈ ಸಂಶೋಧನೆ ಅನೇಕ ವಿಚಾರಗಳ ಆಧಾರದ ಮೇಲೆ ನಡೆದಿದೆ. ಕಳೆದ ವರ್ಷ ಅಕ್ಟೋಬರ್  ಮತ್ತು ಈ ವರ್ಷದ ಫೆಬ್ರವರಿಯಲ್ಲಿ ಸೋಂಕಿಗೆ ಗುಯಾಗಿದ್ದವರ ಲೆಕ್ಕ ಇಟ್ಟುಕೊಂಡು ಸಂಶೋಧನೆ ನಡೆದಿದೆ.

ಯುಕೆ ಯ ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ನ ಸಂಶೋಧಕರು ಡೇಟಾ ಕಲೆ ಹಾಕಿದ್ದಾರೆ.  ಒಮ್ಮೆ ಸೋಂಕು ದೃಢಪಟ್ಟಿದ್ದ ವ್ಯಕ್ತಿ ಗುಣಮುಖನಾದರೂ ಸೋಂಕು ತಗುಲಿದ ದಿನದಿಂದ ಸರಿಯಾಗಿ ಹತ್ತು ತಿಂಗಳಿಗೆ ಮತ್ತೆ ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ ಎಂದು ಸಂಶೋಧನೆ ಹೇಳುತ್ತದೆ.

ಕೊರೋನಾ ಸೋಂಕು ದೃಢಪಟ್ಟು ಗುಣವಾಗಿದ್ದ ವ್ಯಕ್ಕಿ ಮೊದಲ ನಾಲ್ಕು ತಿಂಗಳೂ ಮತ್ತೆ ಸೋಂಕಿಗೆ ಗುರಿಯಾಗುವ ಸಾಧ್ಯತೆ ಶೇ.  85 ರಷ್ಟು ಕಡಿಮೆ ಎಂದು ಸಂಶೋಧನೆ ಹೇಳುತ್ತದೆ.  ವೈದ್ಯಕೀಯ  ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಸೋಂಕು ತಗಲುವ ಪ್ರಮಾಣ ಈ ಅವಧಿಯಲ್ಲಿ ಶೇ.  65 ರಷ್ಟು ಕಡಿಮೆ.

ನಿರಂತರ ಕೆಮ್ಮು-ಕಫ, ಏನ್ ಎಚ್ಚರಿಕೆ ತಗೋಬೇಕು

ಒಂದು ರೀತಿಯಲ್ಲಿ ಇದು ಶುಭ ಸುದ್ದಿ. ಒಮ್ಮೆ ಸೋಂಕಿಗೆ ಗುರಿಯಾದವನ ದೇಹ  ರೋಗಪ್ರತಿರೋಧಕಗಳನ್ನು ಸಿದ್ಧ ಮಾಡಿಕೊಳ್ಳುತ್ತದೆ. ಆದರೆ ಆ ಪ್ರತಿರೋಧಕ ಎಷ್ಟು ಸಮಯ ಇರುತ್ತದೆ ಎನ್ನುವುದು ಮುಖ್ಯ ಎಂದು ಯುಸಿಎಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಇನ್ಫಾರ್ಮ್ಯಾಟಿಕ್ಸ್‌ನ ಅಧ್ಯಯನದ ಪ್ರಮುಖ ಲೇಖಕಿ ಮಾರಿಯಾ ಕ್ರುಟಿಕೋವ್ ಹೇಳಿದ್ದಾರೆ.

ಈ  ಅಧ್ಯಯನಕ್ಕಾಗಿ 86 ವರ್ಷ ಒಳಗಿನ ವಯಸ್ಸಿನ  682 ನಿವಾಸಿಗಳು,  ಮತ್ತು ಮತ್ತು 100 ಕೊರೋನಾ ಕೇರ್ ಸೆಂಟರ್ ನೋಡಿಕೊಳ್ಳಿತ್ತಿರುವ 1,429 ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.  ಇವರಿಗೆ ಕಳೆದ ವರ್ಷ ಜೂನ್-ಜುಲೈ ಅವಧಿಯಲ್ಲಿ ಪ್ರತಿಕಾಯಗಳ (antibody) ಪರೀಕ್ಷೆ ಮಾಡಲಾಗಿತ್ತು.

ಇವರನ್ನೇ  ನಂತರ ಗುರುತಿಸಿಕೊಂಡು ಅಂದರೆ ಅಕ್ಟೋಬರ್ ನಿಂದ ಈ ವರ್ಷದ ಫೆಬ್ರವರಿ ಅವಧಿಯಲ್ಲಿ ಪಿಸಿಆರ್ ಟೆಸ್ಟ್ ಮಾಡಿಸಲಾಗಿತ್ತು. 634 ಜನ ಸೋಂಕು ಒಮ್ಮೆ ಬಂದು ಹೋದ ವ್ಯಕ್ತಿಗಳಲ್ಲಿ ನಾಲ್ಕು ಜನರಿಗೆ ಕಾಣಿಸಿಕೊಂಡಿತ್ತು.  ಇನ್ನು ಸಿಬ್ಬಂದಿಯಲ್ಲಿ ಹತ್ತು ಜನರಿಗೆ ಕೊರೋನಾ ದೃಢಪಟ್ಟಿತ್ತು. ಎಂದಿಗೂ ಸೋಂಕಿಗೆ ಒಳಗಾಗದ 1,477 ಮಂದಿಯಲ್ಲಿ 93 ಜನರಿಗೆ ಮತ್ತು  111 ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡಿತ್ತು. 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ