ಜನಪ್ರಿಯ ಪಬ್‌ಜಿ ಮೊಬೈಲ್ ಗೇಮ್ ಕ್ರಿಯೇಟರ್ ಫಾರೂಖ್ ಸಾವು, 28ನೇ ವಯಸ್ಸಿಗೆ ದುರಂತ ಅಂತ್ಯ

Published : Aug 28, 2026, 06:42 PM IST
Farooq Ahmad yt

ಸಾರಾಂಶ

ಎಲ್ಲರೂ ಪಬ್‌ಜಿ ಗೇಮ್ ಆಡದಿದ್ದರೂ ಬಹುತೇಕರು ಕೇಳಿದ್ದಾರೆ. ಮಕ್ಕಳು, ಯುವ ಸಮೂಹ ಸೇರಿದಂತೆ ಬಹುತೇಕರು ಆಡುತ್ತಿದ್ದ ಪಬ್‌ಜಿ ಗೇಮ್ ಕ್ರಿಯೇಟರ್ ಫಾರೂಖ್ ಅಹಮ್ಮದ್ ಸಾವು ಕಂಡಿದ್ದಾರೆ. ಕೇವಲ 28ನೇ ವಯಸ್ಸಿಗೆ ಏನಾಯಿತು?

ನವದೆಹಲಿ (ಆ.28) ಪಬ್‌ಜಿ ಗೇಮ್ ಅತ್ಯಂತ ಜನಪ್ರಿಯ ಗೇಮಿಂಗ್ ಪ್ಲಾಟ್‌ಫಾರ್ಮ್. ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಪಬ್‌ಜಿ ಜನರನ್ನು ಮೋಡಿ ಮಾಡಿದೆ. ಹಲವು ಬಾರಿ ಪಬ್‌ಜಿ ಗೇಮ್ ಬ್ಯಾನ್ ಎಂದು ಪೋಷಕರು ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದು ಇದೆ. ಇದೇ ಪಬ್‌ಜಿ ಗೇಮ್‌ನ ಮೊಬೈಲ್ ಪಾರ್ಟ್ನರ್ ಹಾಗೂ ಪಾಕಿಸ್ತಾನ ಪಬ್‌ಜಿ ಮೊಬೈಲ್ ಕಂಟೆಂಟ್ ಕ್ರಿಯೇಟರ್ ಫಾರೂಖ್ ಅಹಮ್ಮದ್ ನಿಧನರಾಗಿದ್ದಾರೆ. 28ನೇ ವಯಸ್ಸಿಗೆ ಫಾರೂಖ್ ನಿಧನ ಸುದ್ದಿ ಗೇಮ್ ಪ್ರಿಯರಲ್ಲಿ ಆಘಾತ ತಂದಿದೆ.

ಕೆನಡಾದಲ್ಲಿ ನಡೆಗ ಅಪಘಾತದಲ್ಲಿ ಸಾವು

ಫಾರೂಖ್ ಅಹಮ್ಮದ್ ತಮ್ಮ 28ನೇ ವಯಸ್ಸಿಗೆ ದುರಂತ ಅಂತ್ಯಕಂಡಿದ್ದಾರೆ. ಕೆನಡಾದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಫಾರೂಖ್ ಅಹಮ್ಮದ್ ಮೃತಪಟ್ಟಿದ್ದಾರೆ. ಫಾರೂಖ್ ಅಹಮ್ಮದ್ ಸಾವಿಗೆ ಪಬ್‌ಜಿ ಗೇಮಿಂಗ್ ಕಮ್ಯೂನಿಟಿ ಸಂತಾಪ ಸೂಚಿಸಿದೆ. ಫಲಕ್ ಪಬ್‌ಜಿ, ಡಿಕ್ಟೇಟರ್ ವೈಟಿ, ಸ್ಟಾರನಾನಿಮಸ್ ಬಾಬಾ ಒಪಿ, ಕ್ರಿಪ್ಟೋ ಪಬ್‌ಜಿ ಸೇರಿದಂತೆ ಹಲವು ಕ್ರಿಯೇಟರ್ಸ್ ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನ ಮೂಲದ ಫಾರೂಖ್ ಅಹಮ್ಮದ್ ದಕ್ಷಿಣ ಏಷ್ಯಾದಲ್ಲಿ ಪಬ್‌ಜಿ ಮೂಲಕ ಜನಪ್ರಿಯರಾಗಿದ್ದಾರೆ. ಪಾರೂಖ್ ಪಬ್‌ಜಿ ಮೊಬೈಲ್‌ನ ಅಧಿಕೃತ ಪಾರ್ಟ್ನರ್ ಹಾಗೂ ಕೆನಡಾ ಪಬ್‌ಜಿ ರಾಯಾಭಾರಿಯಾಗಿದ್ದರು. ಅವರು ಹೆಚ್ಚಿನ ಬಜೆಟ್‌ನ ಕ್ರೇಟ್ ಓಪನಿಂಗ್‌ಗಳು, ಖಾತೆ ಪ್ರದರ್ಶನಗಳು ಮತ್ತು ಇನ್ವೆಂಟರಿ ಬ್ರೇಕ್‌ಡೌನ್‌ಗಳ ಮೂಲಕ ಜನಪ್ರಿಯರಾಗಿದ್ದಾರೆ. ವರ್ಲ್ಡ್ ಮೋಸ್ಟ್ ಎಕ್ಸ್‌ಪೆನ್ಸಿವ್ & ಡ್ರೀಮ್ ಪಬ್‌ಜಿ ಮೊಬೈಲ್ ಅಕೌಂಟ್ ಇನ್ವೆಂಟರಿ ಎಂಬ ಅವರ ವಿಡಿಯೋ ಅಭಿಮಾನಿಗಳಲ್ಲಿ ಜನಪ್ರಿಯವಾಗಿತ್ತು. ಅಪರೂಪದ ಆಯುಧದ ಸ್ಕಿನ್‌ಗಳು, ವಿಶೇಷ ಔಟ್‌ಫಿಟ್‌ಗಳು ಮತ್ತು ದೊಡ್ಡ ಮೊತ್ತದ ಅನ್‌ನೋನ್ ಕ್ಯಾಶ್ (UC) ಖರ್ಚುಗಳನ್ನು ನೋಡಲು ಬಯಸುವ ವೀಕ್ಷಕರಿಗೆ ಅವರ ಚಾನೆಲ್ ಪ್ರಮುಖ ತಾಣವಾಗಿತ್ತು.

ಪಬ್‌ಜಿ ಸಂತಾಪ

ಪಬ್‌ಜಿ ಮೊಬೈಲ್‌ನ ಅಧಿಕೃತ ಖಾತೆಯೂ ಫಾರೂಕ್‌ಗೆ ಶ್ರದ್ಧಾಂಜಲಿ ಸಲ್ಲಿಸಿದೆ. ರೆಸ್ಟ್ ಇನ್ ಪೀಸ್, ಫಾರೂಕ್, ಪಬ್‌ಜಿ ಮೊಬೈಲ್ ಸಮುದಾಯ ತನ್ನದೇ ಒಬ್ಬರನ್ನು ಕಳೆದುಕೊಂಡಿದೆ. ಫಾರೂಕ್ ಪಬ್‌ಜಿ ಸಮುದಾಯಕ್ಕೆ ಹೊಸ ಕಳೆ ನೀಡಿದ್ದರು. ಉತ್ಸಾಹ ಹಾಗೂ ಸಾಹಸಮಯ ಕ್ಷಣಗಳನ್ನು ಕೊಟ್ಟಿದ್ದರು ಎಂದು ಎಕ್ಸ್ ಮೂಲಕ ಪೋಸ್ಟ್ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೇಪಾಳ-ಟಿಬೆಟ್‌ ಜಲಪ್ರಳಯ: 30 ವರ್ಷದಲ್ಲಿ ಶೇ.12ರಷ್ಟು ಹಿಮನದಿ ನಾಶ, ಮಾರ್ಚ್‌ನಲ್ಲಿ ನೀಡಿದ್ದ ಎಚ್ಚರಿಕೆ ನಿಜವಾಯ್ತು!
ಭೂಕಂಪದಿಂದ ಬಚಾವಾಗಿ ಹೊರಬಂದ ಉದ್ಯೋಗಿ, ಮನುಷ್ಯತ್ವ ಮರೆತ ಕಂಪನಿ ಸೂಚನೆಯಂತೆ ಅಂಗಡಿಯೊಳಗೆ ಹಣ ತರಲು ಹೋಗಿ ಯುವತಿ ಸಾವು!