
ಮಾಲೆ (ಜೂನ್ 21): ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮಾಲ್ಡೀವ್ಸ್‌ನ (Maldives) ಮಾಲೆಯಲ್ಲಿರುವ (Male) ರಾಷ್ಟ್ರೀಯ ಫುಟ್ಬಾಲ್ ಕ್ರೀಡಾಂಗಣದಲ್ಲಿ (national football stadium) ಯೋಗ (Yoga)ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಉದ್ರಿಕ್ತ ಮುಸ್ಲಿಂ ವ್ಯಕ್ತಿಗಳ ಗುಂಪು ಕ್ರೀಡಾಂಗಣಕ್ಕೆ ನುಗ್ಗಿ ಯೋಗ ಮಾಡುತ್ತಿದ್ದ ಜನರನ್ನು ಅಲ್ಲಿಂದ ಓಡಿಸಿದ್ದಲ್ಲದೆ, ಸರ್ಕಾರದ ಆಸ್ತಿಯನ್ನೂ ಹಾನಿ ಮಾಡಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಅಶ್ರುವಾಯು ಪ್ರಯೋಗವನ್ನೂ ಮಾಡಿದ್ದಾರೆ. ಘಟನೆಯ ಕುರಿತಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಪ್ರತಿಭಟನಾಕಾರರು ಯೋಗ ಕಾರ್ಯಕ್ರಮದಿಂದ ಕುರಿತಾಗಿ ಆಕ್ರೋಶಗೊಂಡಿದ್ದು ಮಾತ್ರವಲ್ಲದೆ ದೇಶದಲ್ಲಿ ಅದನ್ನು ಮಾಡಲು ವಿರೋಧ ವ್ಯಕ್ತಪಡಿಸಿದ್ದರು. ಯೋಗ ಮಾಡುತ್ತಿರುವವರು ಕೂಡಲೇ ಕ್ರೀಡಾಂಗಣವನ್ನು ಖಾಲಿ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಇದೇ ವೇಳೆ ಗುಂಪಿನಲ್ಲಿದ್ದ ಕೆಲವರು ಯೋಗ ಮಾಡುತ್ತಿರುವ ವ್ಯಕ್ತಿಗಳಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ದೂರುಗಳೂ ಬಂದಿವೆ. ಉದ್ರಿಕ್ತರ ಗುಂಪು ಕ್ರೀಡಾಂಗಣಕ್ಕೆ ಹಲವಾರು ವಸ್ತುಗಳನ್ನು ಧ್ವಂಸ ಮಾಡಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು, ಆದರೆ ಎರಡೂ ಕಡೆಯಿಂದ ಘರ್ಷಣೆ ಉಂಟಾದಾಗ, ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿ ಗುಂಪನ್ನು ಚದುರಿಸಿದರು.
ಭಾರತೀಯ ಸಾಂಸ್ಕೃತಿಕ ಕೇಂದ್ರವು (Indian Culture Center) ಮಾಲ್ಡೀವ್ಸ್‌ನ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದೊಂದಿಗೆ ಮಾಲೆ ಕ್ರೀಡಾಂಗಣದಲ್ಲಿ ಯೋಗ ಮತ್ತು ಧ್ಯಾನ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಮುಂಜಾನೆ 6.30ರ ಸುಮಾರಿಗೆ ಮಾಲೆ ಕ್ರೀಡಾಂಗಣದಲ್ಲಿ ಜನರು ಯೋಗವನ್ನು ಮಾಡಲು ಆರಂಭಿಸಿದ ಬೆನ್ನಲ್ಲಿಯೇ ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರು ಎಲ್ಲರನ್ನೂ ಹೊರಗೆ ಓಡಿಸಿದ್ದಾರೆ.
ಈ ವೇಳೆ ಯೋಗ ಮ್ಯಾಟ್‌ಗಳನ್ನು ಹಿಡಿದು ಜನರು ಮೈದಾನದಿಂದ ಹೊರಗೆ ಓಡಿ ಬಂದ ದೃಶ್ಯಗಳೂ ಕಂಡು ಬಂದಿವೆ. ಘಟನೆಯ ಬೆನ್ನಲ್ಲಿಯೇ ಮಾಲ್ಡೀವ್ಸ್ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್, ಯೋಗ ದಿನದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದವರನ್ನು ಈ ಕೂಡಲೇ ಬಂಧಿಸಿ ತನಿಖೆ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಗಲಾಲು ಕ್ರೀಡಾಂಗಣದಲ್ಲಿ ನಡೆದ ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮಾಲ್ಡೀವ್ಸ್ ಅಧ್ಯಕ್ಷರು ಟ್ವೀಟ್ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದಕ್ಕೆ ಕಾರಣರಾದವರನ್ನು ಬಂಧಿಸಲಾಗುವುದು.
ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ಯೋಗ ಕಾರ್ಯಕ್ರಮಗಳನ್ನು ಆಯೋಜಿಸುವ ಘೋಷಣೆಯನ್ನು ಕೆಲವು ಮೂಲಭೂತವಾದಿಗಳು ಇದಕ್ಕೂ ಮುನ್ನ ಟೀಕೆ ಮಾಡಿದ್ದುರ. ಯೋಗ ದಿನಾಚರಣೆಯನ್ನು ಆಯೋಜಿಸದಂತೆ ಕೆಲ ಸಂಘಟನೆಗಳಿಂದ ಬೆದರಿಕೆ ಕೂಡ ಬಂದಿತ್ತು. ಮಾಲ್ಡೀವಿಯನ್ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ರಾಸ್ಫನ್ನು ಕೃತಕ ಬೀಚ್‌ನಲ್ಲಿ ಯೋಗ ಮತ್ತು ಧ್ಯಾನವನ್ನು ಆಯೋಜಿಸಲು ವಿನಂತಿಸಿತ್ತು, ಆದರೆ ಹೆಚ್ಚುತ್ತಿರುವ ಸಾರ್ವಜನಿಕ ದೂರುಗಳಿಂದಾಗಿ ಸಚಿವಾಲಯದ ವಿನಂತಿಯನ್ನು ತಿರಸ್ಕರಿಸಲಾಗಿತ್ತು ಎಂದು ನಗರಸಭೆ ಹೇಳಿದೆ.
ಭಾರತದ ಈ ಸುಂದರ ದ್ವೀಪ ನೋಡಿದ್ರೆ, ಮತ್ತೆ ಮಾಲ್ಡೀವ್ಸ್ ಕಡೆ ತಿರುಗೀ ನೋಡಲ್ಲ ಬಿಡಿ
ವಿಶ್ವಸಂಸ್ಥೆಯು 2014 ರಲ್ಲಿ ಯೋಗವನ್ನು ಅಂತರಾಷ್ಟ್ರೀಯವಾಗಿ ಗುರುತಿಸಿತ್ತಲ್ಲದೆ ಪ್ರತಿ ವರ್ಷ ಜೂನ್ 21 ಅನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಘೋಷಿಸಿತು. ಪ್ರತಿ ವರ್ಷ ಯೋಗವನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಭಾರತದ ಪ್ರಸ್ತಾವನೆಯನ್ನು ಬೆಂಬಲಿಸಿದ 177 ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಸೇರಿದೆ.
ತಪ್ಪಾಗಿರಬಹುದು, ಆದರೆ ಭಾರತವನ್ನು ಖಂಡನೆ ಮಾಡೋದಿಲ್ಲ ಎಂದ ಮಾಲ್ಡಿವ್ಸ್!
ಪುಂಡರ ಪತ್ತೆಗೆ ಬಲೆ ಬೀಸಿದ ಮಾಲ್ಡೀವ್ಸ್ಪೊಲೀಸ್ ಸರ್ವೀಸ್: ಮಾಲ್ಡೀವ್ಸ್ ಪೊಲೀಸ್ ಕೂಡ ಕಾರ್ಯಪ್ರವೃತ್ತರಾಗಿದ್ದು, ಘಟನೆಯ ಕುರಿತಾಗಿ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ವೆಬ್ ಪೋರ್ಟಲ್ ಅನ್ನೂ ಆರಂಭಿಸಿದೆ. "ದಯವಿಟ್ಟು ವೆಬ್ ಪೋರ್ಟಲ್ https://police.gov.mv/helpus/casetip ಮೂಲಕ ನ್ಯಾಷನಲ್ ಸ್ಟೇಡಿಯಂನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಘಟನೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ಅಥವಾ ಮಾಹಿತಿಯನ್ನು ಹಂಚಿಕೊಳ್ಳಿ. ಈ ಪ್ರಯತ್ನಕ್ಕೆ ಬೆಂಬಲ ನೀಡುವ ಎಲ್ಲಾ ವ್ಯಕ್ತಿಗಳ ಅನಾಮಧೇಯತೆ ಮತ್ತು ಸುರಕ್ಷತೆಯನ್ನು ಮಾಲ್ಡೀವ್ಸ್ಪೊಲೀಸ್ ಖಚಿತಪಡಿಸುತ್ತದೆ' ಎಂದು ಬರೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ